ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಸುಮಾರು 20 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಬೀಟೆಮರವನ್ನು ವಾಹನಗಳ ಸಮೇತ ವಶಪಡಿಸಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹೆನ್ನಲಿ ಗ್ರಾಮದ ಗದ್ದೆಬೈಲಿನಲ್ಲಿ ಗುರುವಾರ ರಾತ್ರಿ ಸಕಲೇಶಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಟಿಪ್ಪರ್ ಲಾರಿ ಹಾಗೂ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
ಲಾರಿ ಮತ್ತು ಪಿಕಪ್ ವಾಹನದ ಚಾಲಕರು ವಾಹನ ಬಿಟ್ಟು ಪರಾರಿ ಯಾಗಿದ್ದಾರೆ. ಕತ್ತಲೆಯಿದ್ದ ಕಾರಣ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶಿಲ್ಪ , ಉಪ ವಲಯ ಅರಣ್ಯಾಧಿಕಾರಿ ಮೋಹನ್, ಗಸ್ತು ಅರಣ್ಯಪಾಲಕ ಯೋಗೇಶ್, ಉಮೇಶ್, ಹನುಮಂತು, ಅರುಣ, ಸಿಬ್ಬಂದಿ ಸುನಿಲ್ ಶೆಟ್ಟಿ ,ಲೋಕೇಶ್ ಇದ್ದರು.