ಕಲಬುರಗಿ ಜಿಲ್ಲೆಯ ಅಫಜಲಪುರದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಪರೀಕ್ಷಾ ಕೇಂದ್ರದಲ್ಲಿ ಕೆಇಎ ಪರೀಕ್ಷೆ ವೇಳೆ ಅಭ್ಯರ್ಥಿಗಳು ಬ್ಲೂಟೂತ್ ಬಳಸಿದ್ದ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕೆಇಎ ಪರೀಕ್ಷಾ ಅಭ್ಯರ್ಥಿಗಳಾದ ಬೀದರ್ ಮೂಲದ ಆಕಾಶ ಮಂಠಾಳೆ, ಸಂತೋಷ ಬಂಡೆಪ್ಪ ಯಾಳಗಿ ಮತ್ತು ಬಾಬು ಚಾಂದಶೇಖ್ ಅವರನ್ನು ಅಫಜಲಪುರ ಪೊಲೀಸರು ಬಂಧಿಸಿದ್ದಾರೆ. ಅವರಲ್ಲದೆ, ಆರೋಪಿತ ಅಭ್ಯರ್ಥಿಗಳಿಗೆ ನೆರವು ನೀಡಿದ್ದ ವಿಜಯಕುಮಾರ ಬಿರಾದಾರ, ಖಾಸಗಿ ಶಾಲೆಯ ಶಿಕ್ಷಕ ಬಾಪು ಗುತ್ತಪ್ಪ ಯಾಳಗಿ ಮತ್ತು ಗಣೇಶ್ ದುಂಡಪ್ಪನ ಎಂಬವರನ್ನೂ ಪೊಲೀಸರು ಬಂಧಿಸಿದ್ದರು. ಅವರನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿತ್ತು.
ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಎಂಟು ದಿನಗಳ ಮಟ್ಟಿಗೆ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.