ಶಕ್ತಿ ಯೋಜನೆ | ಬಸ್​ನಲ್ಲಿ ಪ್ರಯಾಣಿಸಿ ಮಹಿಳೆಯರ ಅಹವಾಲು ಆಲಿಸಿದ ಬಿಎಂಟಿಸಿ ಎಂ ಡಿ

Date:

Advertisements

ಶಕ್ತಿ ಯೋಜನೆ ಸಂಬಂಧ ಬಿಎಂಟಿಸಿ ಎಂಡಿ ಜಿ‌. ಸತ್ಯವತಿ ಅವರು ಬಸ್‌ನಲ್ಲಿ ಸಂಚರಿಸಿ ಮಹಿಳೆಯರ ಸಮಸ್ಯೆ ಆಲಿಸಿದರು.

ಅವರು ಬನಶಂಕರಿ ಡಿಪೋಗೆ ಭೇಟಿ ನೀಡಿ ನಿರ್ವಾಹಕ, ಚಾಲಕ ಮತ್ತು ಮೆಕ್ಯಾನಿಕ್​ಗಳ ಕುಂದುಕೊರತೆಗಳನ್ನು ಆಲಿಸಿದ್ದು, ಬನಶಂಕರಿಯಿಂದ ಕೋಣನಕುಂಟೆ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸಿದರು. ಈ ವೇಳೆ ಚಾಲಕ ಮತ್ತು ನಿರ್ವಾಹಕರಿಗೂ ತಿಳುವಳಿಕೆ ನೀಡಿದರು.

ಈ ವೇಳೆ ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದ ಅವರು, ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದು, ಐದು ಅಂಶಗಳ ಮೇಲೆ ಕಾರ್ಯನಿರ್ವಹಿಸುವ ಚಾಲನಾ ಸಿಬ್ಬಂದಿಯನ್ನು ಪ್ರಶಂಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕಂದಕಕ್ಕೆ ಉರುಳಿದ ಖಾಸಗಿ ಬಸ್;‌ ಮಹಿಳೆ ಸಾವು, ಹಲವರಿಗೆ ಗಾಯ

ಶಕ್ತಿ ಯೋಜನೆ ಅಡಿಯಲ್ಲಿ ನಿರ್ವಾಹಕರು ಮಹಿಳಾ ಪ್ರಯಾಣಿಕರಿಗೆ ವಾಹನಗಳಲ್ಲಿ ಚೀಟಿ ವಿತರಣೆ, ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತನೆ, ಶಕ್ತಿ ಯೋಜನೆ ಅಡಿಯಲ್ಲಿ ದಾಖಲಾತಿಗಳ ಪರಿಶೀಲನೆ, ವಾಹನಗಳಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಚೀಟಿ ವಿತರಣೆ, ಸಂಸ್ಥೆಯ ವಾಹನಗಳ ಸ್ವಚ್ಛತೆ ಸೇರಿದಂತೆ ಹಲವು ಮಾನದಂಡಗಳ ಮೇಲೆ ಚಾಲಕ ಹಾಗೂ ನಿರ್ವಾಹಕರನ್ನು ಬಿಎಂಟಿಸಿ ಎಂಡಿ ಸತ್ಯವತಿಯವರು ಶ್ಲಾಘಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಹಲವು ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ

ಬೆಳೆನಷ್ಟ ಪರಿಹಾರ ಒದಗಿಸುವುದು, ಬೆಳೆವಿಮೆ ಕಂತು ತುಂಬುವ ಅವಧಿಯನ್ನು ಮುಂದುವರೆಸಬೇಕು. ಬೆಳೆವಿಮೆ...

ಧರ್ಮಸ್ಥಳ ಪ್ರದೇಶದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣ: ಸಾಕ್ಷಿ ದೂರುದಾರನ ಬಂಧನ

ಧರ್ಮಸ್ಥಳ ಪ್ರದೇಶದಲ್ಲಿ ಹಲವು ಕಡೆಗಳಲ್ಲಿ ಅಕ್ರಮವಾಗಿ ಮೃತದೇಹ ಹೂತು ಹಾಕಲಾಗಿದೆ ಎಂಬ...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ನ್ಯಾ. ಶಿಲ್ಪ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗ್ರತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು ದುಡಿಮೆಗೆ...

ಕಲಬುರಗಿ | ಅತಿವೃಷ್ಟಿಯಿಂದ ಜಮೀನು ಜಲಾವೃತ; ಬೆಳೆ ಹಾನಿ ಪರಿಹಾರದ ನಿರೀಕ್ಷೆಯಲ್ಲಿ ರೈತರು

ಕಳೆದ ಕೆಲ ದಿನಗಳಿಂದ ಕಲಬುರಗಿ ಜಿಲ್ಲೆಯಾದ್ಯಂತ ಸತತ ಸುರಿದ ಮಳೆಯಿಂದಾಗಿ ತೊಗರಿ,...

Download Eedina App Android / iOS

X