ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಎರಡು ವರ್ಷಗಳಿಂದ ಬಾಕಿ ಉಳಿದಿರುವ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಕೋಲಾ ತಾಲೂಕಿನ ಉಳವರೇ ಗ್ರಾಮದ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ.
ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಯಾಗದ್ದರಿಂದ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್, ಪತ್ರ ಚಳವಳಿ ಆರಂಭಿಸಲು ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಕಟ್ಟಡ ಕಾರ್ಮಿಕರ ಮಕ್ಕಳು ಪತ್ರ ಬರೆದಿದ್ದಾರೆ.
ಬಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಧನಸಹಾಯ ನೀಡುವ ಬದಲು, ಕಾರ್ಮಿಕ ಇಲಾಖೆ ಕಿಟ್‌ಗಳನ್ನು ಹಂಚುತ್ತಿದೆ. ಇದರಿಂದ ನೂರಾರು ಕೋಟಿ ವ್ಯವಹಾರ ಕಾರ್ಮಿಕ ಇಲಾಖೆಯಲ್ಲಿ ನಡೆದ ಬಗ್ಗೆ ತನಿಖೆಯಾಗಬೇಕು ಎಂದು ಚಳುವಳಿಗೆ ಸ್ಥಳೀಯವಾಗಿ ಕರೆ ನೀಡಿದ್ದ ಕಾರ್ಮಿಕ ಮುಖಂಡ ಶಾಂತರಾಮ್ ನಾಯಕ್ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗೆ ಬರೆದ ಪತ್ರ ಚಳುವಳಿಯ ನೇತೃತ್ವವನ್ನು ಸಂಘದ ಮುಖಂಡರಾದ ಮೋಹಿನಿ ಗೌಡ, ರಾಧಾ ಗೌಡ ವಹಿಸಿದ್ದರು.