ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಪ್ರಗತಿಪರ ಸಂಘಟನೆ ಮುಖಂಡರುಗಳು ಬುದ್ಧನ ಬೆಳಕು ನಾಟಕೋತ್ಸವ ಪೂರ್ವ ಭಾವಿ ಸಭೆ ನಡೆಸಿತು. ʼಬುದ್ದನಬೆಳಕುʼ ನಾಟಕವನ್ನು ಬಂಧುತ್ವ ಕಲಾತಂಡದಿಂದ ರಾಜ್ಯದ ವಿವಿಧ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ನಾಟಕೋತ್ಸವ ಪ್ರದರ್ಶನ ನೀಡಲಿದೆ.
ವಿಕಾಸ್ ಆರ್. ಮೌರ್ಯ ಅವರ ವಿರಚಿತ, ಡಿಂಗ್ರಿ ನರೇಂದ್ರ ಅವರ ನಿರ್ದೇಶನದ ನಾಟಕ, ನವೆಂಬರ್ ೦9, ಗುರುವಾರ ಸಂಜೆ 6ಗಂಟೆಗೆ ಪಟ್ಟಣದ ಬಯಲು ರಂಗಮಂದಿರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಗೌತಮ ಬುದ್ದ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಅಭಿಮಾನಿಗಳು ವಿವಿಧ ಸಂಘಸಂಸ್ಥೆಯ ಮುಖಂಡರುಗಳು,ವಿದ್ಯಾರ್ಥಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಮುಖಂಡ ವಕೀಲ ಟಿ.ಬಸವರಾಜ್ ಮರೇನಹಳ್ಳಿ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಧನ್ಯಕುಮಾರ್, ಕಾನನಕಟ್ಟೆ ಪ್ರಭು, ಕಲ್ಲೇಶ್ ರಾಜ್ ಪಟೇಲ್, ಪ್ರಾಂಶುಪಾಲ ನಾಗಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ಶಂಭುಲಿಂಗಪ್ಪ, ಹನುಮಂತಾಪುರ ಶಿವಕುಮಾರ್, ವಕೀಲ ಸಣ್ಣಒಬಯ್ಯ, ನಾಗೇಶ್, ಲುಕ್ಟ್ರಾನ್ ಖಾನ್, ಎ.ಪಿ. ನಿಂಗಪ್ಪ, ರಾಜಪ್ಪ ವ್ಯಾಸಗೊಂಡನಹಳ್ಳಿ, ಸತೀಶ್, ಮಾದಿಹಳ್ಳಿ ಮಂಜುನಾಥ್, ಗೋಗುದ್ದು ತಿಪ್ಪೇಸ್ವಾಮಿ, ಹನುಮಂತಪ್ಪ, ಬಡಪ್ಪ, ಪರುಶರಾಮ್, ಅನ್ವರ್ ಅಲಿ ಸೇರಿದಂತೆ ಹಲವರು ಇದ್ದರು.