ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ತೆರಿಗೆ ಪಾವತಿ ಮಾಡುವುದನ್ನು ಸುಲಭಗೊಳಿಸಲು, ಪಾಲಿಕೆಯು ಬಾಕಿ ಆಸ್ತಿ ತೆರಿಗೆ ಹೊಂದಿರುವ ಮಾಲೀಕರುಗಳಿಗೆ ಎಸ್‌ಎಮ್‌ಎಸ್ ಮೂಲಕ ಸಂದೇಶ ಮತ್ತು ಪತ್ರ/ನೋಟಿಸ್ ಕಳುಹಿಸಲಾಗುತ್ತಿದೆ. ನಾಗರಿಕರು ಆನ್‌ಲೈನ್ ಮುಖಾಂತರ ಸುಲಭವಾಗಿ ಆಸ್ತಿ ತೆರಿಗೆ ಪಾವತಿಸಿ” ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಹೇಳಿದರು.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಆಸ್ತಿ ತೆರಿಗೆಯು ಬಿಬಿಎಂಪಿಯ ಪ್ರಾಥಮಿಕ ಮತ್ತು ಪ್ರಮುಖ ಆದಾಯದ ಮೂಲವಾಗಿದೆ. ಪಾಲಿಕೆಯ ಕಾರ್ಯನಿರ್ವಹಣೆ ಮತ್ತು ಸೇವೆ ವಿತರಣೆಗೆ ನಿರ್ಣಾಯಕವಾಗಿದೆ. ಎಲ್ಲ ಮಾಲೀಕರು ತಮ್ಮ ಸ್ವತ್ತಿಗೆ ಆಸ್ತಿ ತೆರಿಗೆಯನ್ನು ತ್ವರಿತವಾಗಿ ಪಾವತಿಸಬೇಕು ಎಂದು ವಿನಂತಿಸುತ್ತೇವೆ” ಎಂದರು.
“ಆಸ್ತಿತೆರಿಗೆಯನ್ನು ಸುಲಭವಾಗಿ ಪಾವತಿಸಲು ನಾಗರಿಕರು ಆನ್‌ಲೈನ್ ಲಿಂಕ್ https://bbmptax.karnataka.gov.in ಅನ್ನು ಬಳಸಬಹುದು. ಅಥವಾ ನಾಗರಿಕರಿಗೆ ಯಾವುದೇ ಪ್ರಶ್ನೆಗಳು ಇದ್ದರೆ ಅಥವಾ ಮಾಹಿತಿಯ ಅಗತ್ಯವಿದ್ದರೆ, ನಮ್ಮ ಸಹಾಯವಾಣಿ 1533 ಸಂಖ್ಯೆಗೆ ಕರೆ ಮಾಡಿ. ಸಹಾಯ ಮಾಡಲು ಮತ್ತು ಸ್ಪಷ್ಟೀಕರಣವನ್ನು ಒದಗಿಸಲು ನಾವು ಸದಾ ಸಿದ್ದರಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಲಸದಿಂದ ತೆಗೆದಿದ್ದಕ್ಕೆ ಪ್ರತಿಮಾರನ್ನು ಕೊಲೆಗೈದ ಕಾರು ಚಾಲಕ ಕಿರಣ್
“ನಮ್ಮ ಪ್ರೀತಿಯ ನಗರದ ಅಭಿವೃದ್ಧಿಗಾಗಿ, ನಾಗರಿಕರು ಮತ್ತು ಬಿಬಿಎಂಪಿಯು ಒಂದಾಗಿ ಕೈಜೋಡಿಸಿ ಕುಟುಂಬವಾಗಿ ಕೆಲಸ ಮಾಡಿ ನಮ್ಮ ಜವಾಬ್ದಾರಿಗಳನ್ನು ಪೂರೈಸೋಣ” ಎಂದರು.