ತುಮಕೂರು | ಅಸಮಾನತೆ ವಿರುದ್ಧ ಜನ ಧಂಗೆ ಏಳುವ ಸಾಧ್ಯತೆಯಿದೆ: ಸಚಿವ ಕೆ ಎನ್ ರಾಜಣ್ಣ

Date:

Advertisements

ಪ್ರಸ್ತುತದಲ್ಲಿ ಎಲ್ಲೆಡೆ ಅಸಮಾನತೆ ಕಾಣುತಿದ್ದು, ಇದು ತೊಲಗದಿದ್ದರೆ ಜನರು ದಂಗೆ ಏಳುವ ಸಾಧ್ಯತೆಯಿದೆ. ಸಂಪತ್ತಿನ ಸಮಾನ ಹಂಚಿಕೆಯಾಗದರ ಜೊತೆಗೆ ಉದ್ಯೋಗ, ರಾಜಕೀಯ, ಅರ್ಥಿಕ ಕ್ಷೇತ್ರಗಳಲ್ಲಿಯೂ ಅಸಮಾನತೆ ಎದ್ದು ಕಾಣುತ್ತಿದ್ದು, ಜನರು ಧಂಗೆ ಏಳಬಾರದು ಎಂದಾದರೆ ಪತ್ರಿಕೆಗಳು ಎಚ್ಚರಿಸುವ ಕೆಲಸ ಮಾಡಬೇಕು. ಜನತೆಗೆ ಮತ್ತು ಅಧಿಕಾರಸ್ಥರಿಗೆ ವಾಸ್ತವದ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು” ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಅಭಿಪ್ರಾಯಪಟ್ಟರು.

ತುಮಕೂರು ನಗರದ ಕನ್ನಡ ಭವನದಲ್ಲಿ ನಡೆದ ಬೆವರಹನಿ ಪ್ರಾದೇಶಿಕ ದಿನ ಪತ್ರಿಕೆಯ 6ನೇ ವಾರ್ಷಿಕೋತ್ಸವ ಹಾಗೂ ಓದುಗರೊಂದಿಗಿನ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿದರು.

“ತುಮಕೂರಿನಲ್ಲಿ ವಿಜಯವಾಣಿ ಪತ್ರಿಕೆ ನಡೆಸುತಿದ್ದ ಗುಂಡೂರಾಯರ ಕಾಲದಿಂದಲೂ ನನಗೆ ಪತ್ರಿಕೋದ್ಯಮದ ಪರಿಚಯವಿದೆ. ಆದರೆ ದೃಶ್ಯ ಮಾಧ್ಯಮಗಳು ಬಂದ ನಂತರ, ಮುದ್ರಣ ಮಾಧ್ಯಮಗಳು ಮಂಕಾಗುತ್ತಿರುವ ಈ ಕಾಲದಲ್ಲಿಯೂ ಜನರ ವಿಶ್ವಾಸ ಉಳಿಸಿಕೊಂಡಿವೆ. ಸತ್ಯ ಹೇಳಿದರೆ ಕೆಂಗಣ್ಣಿಗೆ ಗುರಿಯಾಗಬೇಕಾದ ಸ್ಥಿತಿಯಿದ್ದರೂ ತಮ್ಮ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ. ಹೋರಾಟದ ಮನೋಭಾವನೆ ಇರುವ ವ್ಯಕ್ತಿ ಸಮಾಜಮುಖಿಯಾಗಿರುತ್ತಾನೆ ಎಂಬುದಕ್ಕೆ ಬೆವರಹನಿ ಪತ್ರಿಕೆಯ ಸಂಪಾದಕ ಕುಚ್ಚಂಗಿ ಪ್ರಸನ್ನ ಅವರು ಉದಾಹರಣೆಯಾಗಿದ್ದಾರೆ. ತಮ್ಮ ಪತ್ರಿಕೆಯ ಮೂಲಕ ಸಮಾಜಮುಖಿ ಹೋರಾಟಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ” ಎಂದು ಹೇಳಿದರು.

Advertisements

“ವಿಧಾನಪರಿಷತ್ ಎಂಬುದು ಬುದ್ದಿಜೀವಿಗಳು, ಚಿಂತಕರು, ದನಿ ಇಲ್ಲದ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದಕ್ಕೆ ಹೆಚ್ಚಿನ ಅವಕಾಶ ಇರುವ ವೇದಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಾಣುತ್ತಿಲ್ಲ. ಎಂಎಲ್‌ಸಿ ಚುನಾವಣೆ ಅಥವಾ ನೇಮಕದ ಮಾನದಂಡ ಬದಲಾದರೆ ಸರಿಹೋಗಬಹುದು. ಎಷ್ಟೋ ರಾಜ್ಯಗಳಲ್ಲಿ ಮೇಲ್ಮನೆ ಎಂಬುದೇ ಇಲ್ಲ. ಕರ್ನಾಟಕದಲ್ಲಿ ಇರುವ ಮೇಲ್ಮನೆಗೆ ಅವಕಾಶ ವಂಚಿತ ಸಮುದಾಯಗಳ ಧ್ವನಿಗಳು ಆಯ್ಕೆಯಾದರೆ ಹೆಚ್ಚಿನ ಗೌರವ ಬರಲಿದೆ” ಎಂದರು.

ಶಾಸಕ ಜಿ ಬಿ ಜ್ಯೋತಿ ಗಣೇಶ್ ಮಾತನಾಡಿ, “ದೇಶದಲ್ಲಿ ಎಡಪಂಥೀಯ, ಬಲಪಂಥೀಯ, ಕೇಂದ್ರಪಂಥೀಯ ವಾದಗಳು ಸಾಕಷ್ಟಿವೆ. ಆದರೆ ಇವೆಲ್ಲವುಗಳ ಗುರಿ ದೇಶದ ಅಭಿವೃದ್ದಿಯ ಕಡೆಗೇ ಇರಬೇಕು. ಜನರ ರಕ್ಷಣೆ, ಅವರಿಗೆ ಸ್ವಾಭಿಮಾನದ ಬದುಕು ನಿರ್ಮಿಸುವುದಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ದೇಶದ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡಬೇಕು” ಎಂದರು.

ಬೆವರಹನಿ ಪತ್ರಿಕೆಯ ಸಂಪಾದಕ ಕುಚ್ಚಂಗಿ ಪ್ರಸನ್ನ ಮಾತನಾಡಿ, “ತುರ್ತುಪರಿಸ್ಥಿತಿಯನ್ನು ವಿರೋಧಿಸಿದ ಪಕ್ಷವೇ ಇಂದು ಅಧಿಕಾರದಲ್ಲಿದ್ದರೂ, ಜನತೆಯ ಮೇಲೆ ಪರೋಕ್ಷ ತುರ್ತು ಪರಿಸ್ಥಿತಿಯನ್ನು ಹೇರುತ್ತಿದೆ. ಇಸ್ರೇಲ್ ಮತ್ತು ಪಾಲೆಸ್ತೀನ್ ಯುದ್ಧ ಕೊನೆಗಾಣಬೇಕು. ಜೀವಹಾನಿ ನಿಲ್ಲಬೇಕೆಂದು ಪ್ರತಿಭಟನೆ ನಡೆಸಿದ ಪ್ರಗತಿಪರರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಸರ್ಕಾರಗಳು ಬದಲಾಗುವುದು ಮುಖ್ಯವಲ್ಲ. ಆಡಳಿತದಲ್ಲಿ ಬದಲಾವಣೆ ಕಾಣಬೇಕು.‌ ಇಂದು ರೈತ ಮತ್ತು ಪತ್ರಿಕೋದ್ಯಮಿ ಮಾತ್ರ ತಮ್ಮ ಉತ್ಪನ್ನಗಳ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ. ಇದು ಬದಲಾವಣೆ ಕಾಣಬೇಕಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | 57ನೇ ಕೃಷಿ ಎಂಜಿನಿಯರಿಂಗ್ ವಾರ್ಷಿಕ ಸಮ್ಮೇಳನ

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್.ನಿಂಗಪ್ಪ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ ಡಿ ಬಲರಾಮಯ್ಯ, ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷ ಪಿ ಮೂರ್ತಿ, ಚಿಂತಕ  ಕೆ ದೊರೈರಾಜು, ಸಿಐಟಿಯುನ ಬಿ.ಉಮೇಶ್, ಐಎಂಎ ಅಧ್ಯಕ್ಷ ಡಾ.ಹೆಚ್.ವಿ.ರಂಗಸ್ವಾಮಿ, ಸೈಯದ್ ಮುಜೀಬ್ ಸೇರಿದಂತೆ ಬಹುತೇಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X