ಗದಗ ನಗರದ ಪ್ರವಾಸಿ ಸ್ಥಳವಾಗಿರುವ ಬಿಷ್ಮಕೆರೆ ಸುತ್ತಲೂ ತಂತಿ ಬೇಲಿ ಹಾಕಬೇಕು ಎಂದು ಕರ್ನಾಟಕ ಪ್ರಜಾಪರ ವೇದಿಕೆ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಈ ವೇಳೆ ಮಾತನಾಡಿದ ಕರ್ನಾಟಕ ಪ್ರಜಾಪರ ವೇದಿಕೆ ಅಧ್ಯಕ್ಷ ರಫೀಕ್ ಧಾರವಾಡ, ನಗರದ ಪ್ರವಾಸಿ ತಾಣ ಭೀಷ್ಮಕೆರೆ ಸುತ್ತಲೂ ತಂತಿ ಬೇಲಿ ಹಾಕಬೇಕು. ಭೀಷ್ಮ ಕೆರೆಯಲ್ಲಿ ಸಣ್ಣ ಮಕ್ಕಳು ಮೀನು ಹಿಡಿಯಲು ಹೋಗುತ್ತಿದ್ದು, ಇದರಿಂದ ಮಕ್ಕಳು ನೀರಿಗೆ ಬಿದ್ದು ಅಪಾಯಕ್ಕೆ ಒಳಗಾಗುವ ಭೀತಿ ಇದೆ. ಒಬ್ಬ ಮಹಿಳೆ ಸಹ ನೀರಿಗೆ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ಘಟಿಸುತ್ತಿದ್ದು, ಇವುಗಳನ್ನು ತಡೆಯಲು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪ್ರವಾಸಿ ತಾಣ ಭೀಷ್ಮಕೆರೆ ಸುತ್ತಲೂ ತಂತಿ ಬೇಲಿ ಹಾಕಬೇಕು ಎಂದು ಆಗ್ರಹಿಸಿದರು.
ಈ ವಿಷಯವಾಗಿ ಗಮನ ಹರಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಆರಿಫ್ ಬಾ ಕಾತರಿಕಿ, ಗಣೇಶ್ ಕಬಾಡಿ, ರವಿ ದಡಕರ್, ಆಶೀಪ್ ಉಮನಾಬಿದ ಇತರರು ಉಪಸ್ಥಿತರಿದ್ದರು.