ಬಣ್ಣ (ಪೇಂಟ್) ಬೆರೆಸುವ ಮಿಕ್ಸರ್‌ಗೆ ಮಹಿಳೆಯೊಬ್ಬರ ತಲೆ ಕೊದಲು ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶ್ವೇತಾ (33) ಮೃತ ದುರ್ದೈವಿ. ರಾಜಧಾನಿ ಬೆಂಗಳೂರಿನ ನೆಲಗದರನಹಳ್ಳಿಯ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ.
ಮೃತ ಶ್ವೇತಾ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಬಣ್ಣ ಬೆರೆಸುವ ಮಿಕ್ಸರ್‌ನಲ್ಲಿ ಬಣ್ಣ ಗಟ್ಟಿಯಾಗುತ್ತಿದ್ದ ಕಾರಣ ಏನಾಗಿದೆ ಎಂದು ಶ್ವೇತಾ ಮಿಕ್ಸರ್ ಒಳಗಡೆ ತಲೆ ಹಾಕಿ ನೋಡಿದ್ದಾರೆ. ಈ ವೇಳೆ, ಒಳಗಡೆ ಬಗ್ಗಿದಾಗ ಮಹಿಳೆಯ ಕೂದಲು ಮಿಕ್ಸರ್‌ಗೆ ಸಿಲುಕಿದೆ. ಈ ಸಮಯದಲ್ಲಿ ಮಹಿಳೆ ಎಷ್ಟೇ ಕೂಗಿದರೂ ಮಿಕ್ಸರ್ ಶಬ್ದಕ್ಕೆ ಯಾರಿಗೂ ಕೇಳಿಸಿಲ್ಲ. ಈ ವೇಳೆ ಮಹಿಳೆಯ ಕತ್ತು ಸಹ ಮಿಕ್ಸರ್ ಗ್ರೈಂಡರ್‌ನಲ್ಲಿ ಸಿಲುಕಿಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವವರು ಬಳಿಕ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಮೊಬೈಲ್ ಗೀಳು ಬಿಡು ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಪೀಣ್ಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, “ನ.7 ರಂದು ಈ ಘಟನೆ ನಡೆದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ತಿಳಿಸಿದರು.