ಗ್ರಾಮವು ಅವ್ಯವಸ್ಥೆಗಳ ತಾಣವಾಗಿದೆ. ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಸಿಬೇಕೆಂದು ಒತ್ತಾಯಿಸಿ ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ ಮಾಡೋಳ್ಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಡಿಎಸ್ಎಸ್ ಮುಖಂಡ ಹನಮಂತ ಮಾದರ, “ಗ್ರಾಮದಲ್ಲಿ ಅನೇಕ ಸಮಸ್ಯೆಗಳಿವೆ. ಭಗತ್ ಸಿಂಗ್ ನಗರದಲ್ಲಿ ಮೊರಂ ರಸ್ತೆ ಹದಗೆಟ್ಟಿದೆ. ಕೇರಿ ಓಣಿಗೆ ಎರಡು ತಿಂಗಳದರೂ ನೀರು ಪೂರೈಕೆ ಆಗಿಲ್ಲ. ಲಕ್ಷವ್ವ ನಂದಿ ಇವರ ಮನೆಯ ಪಕ್ಕದಲ್ಲಿ ಗಟಾರ ಹದಗೆಟ್ಟಿದೆ. ನೀರು ಅಲ್ಲೆ ನಿಂತು ಮನೆ ಕುಸಿಯುವಂತಾಗಿದೆ” ಎಂದು ಹೇಳಿದ್ದಾರೆ.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಶೌಚಾಲಯ ಇಲದೇ ಇರುವುದರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕುರಿತು ಡಿಎಸ್ಎಸ್ ವತಿಯಿಂದ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯತಿ ಸದಸ್ಯರಾಗಲಿ ಸ್ಪಂದಿಸದೇ ಇದ್ದುದರಿಂದ ಇಂದು ಪ್ರತಿಭಟನೆ ನಡೆಸಿದ್ದೇವೆ. ಒಂದು ವೇಳೆ ಈ ಸಮಸ್ಯೆಗಳನ್ನು ಈಡೇರಿಸದೇ ಹೋದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಯಮನೂರ ಮಾದರ, ಮುತ್ತಪ್ಪ ಮಾದರ, ಮಂಜುನಾಥ ಮಾದರ, ಪರಸಪ್ಪ ಈರಗಾರ, ಮುನ್ನಸಾಬ್, ಮಲ್ಲು, ಸಲ್ಮಾನ್, ರಾಜು, ಮಲ್ಲಪ್ಪ, ಮಂಜು ನಾ ಮಾದರ ಇನ್ನೂ ಅನೇಕರು ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತ್ ಸದಸ್ಯರು ಬಸವರಾಜ ಜಕನೂರ್, ರಾಜುಗೌಡ ಮುದುಗೌಡ್ರ್ ಉಪಸ್ಥಿತರಿದ್ದರು.
Good ನಾವು ನಿಮಗೆ ಸಫೋರ್ಟ್ ಮಾಡ್ತೀವಿ ಜೈ ಭೀಮ್ ವಂದನೆಗಳು brothers