ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಮಕ್ಕಳಿಗೆ ಗ್ರಂಥಾಲಯ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಪ್ರೇರೆಪಿಸಬೇಕು. ಪಠ್ಯದ ಜೊತೆ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಪ್ರಾದೇಶಿಕ ಶಿಕ್ಷಣ ಇಲಾಖೆ ಆಯುಕ್ತ ಆಕಾಶ್ ಎಸ್. ಹೇಳಿದರು.
ಔರಾದ ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಬುಧವಾರ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.
ಪ್ರಾಥಮಿಕ ಶಾಲೆಯಲ್ಲಿನ ಅಡುಗೆ ಕೋಣೆ, ಸ್ಮಾರ್ಟ್ ಕ್ಲಾಸ್, ಶೌಚಾಲಯ, ಆಹಾರ ದಾಸ್ತಾನು ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಲೆಯ ಅಂದ ಚಂದ ಹಾಗೂ ಸ್ವಚ್ಛತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅಂದ ಚಂದಕ್ಕೆ ಹಣದ ಕ್ರೋಢಿಕರಣ ಮಾಹಿತಿ ಪಡೆದು ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದರು.
ಶಿಕ್ಷಕಿ ರೂಪಾ ಕಾರ್ಯಕ್ಕೆ ಮೆಚ್ಚುಗೆ :
ಎಕಲಾರ ಗ್ರಾಮದ ಡಿ.ಎಡ್ ಪೂರ್ಣಗೊಳಿಸಿದ ರೂಪಾ ಶಾಲಾ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಉಚಿತ ಸೇವೆ ಸಲ್ಲಿಸುತ್ತಿರುವ ವಿಷಯ ತಿಳಿದ ಅವರು, ಶಿಕ್ಷಕಿ ರೂಪಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದೀರಾ? ಬೀದರ್ | ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಬರ ಘೋಷಣೆ: ಸಚಿವ ಈಶ್ವರ ಖಂಡ್ರೆ
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಸಿ.ಎಸ್ ಮುಧೋಳ, ಬಿಇಒ ಮಕ್ಸೂದ್ ಅಹ್ಮದ್, ಬಿಆರ್‌ಸಿ ಪ್ರಕಾಶ ರಾಠೋಡ್, ಇನಾಯತಲಿ ಸೌದಾಗರ್, ಇಸಿಒ ಈಶ್ವರ ಕ್ಯಾದೆ, ಬಲಭೀಮ ಕುಲಕರ್ಣಿ, ಸಿಆರ್‌ಪಿ ಮಹಾದೇವ ಘುಳೆ, ಗಫರಖಾನ್ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಯಶವಂತರಾವ, ಸೂರ್ಯಕಾಂತ ನಾಗೂರೆ, ಬಾಲಾಜಿ ಅಮರವಾಡಿ, ಅಂಕುಶ ಪಾಟೀಲ್, ಶಿವರಾಜ ಬಿರಾದಾರ್, ಸಿದ್ದಾರೆಡ್ಡಿ, ವೀರಶೆಟ್ಟಿ, ಶ್ರೀಮಂತ, ವಿಜಯಲಕ್ಷ್ಮಿ, ಸಿದ್ದೇಶ್ವರಿ ಸೇರಿದಂತೆ ಇನ್ನಿತರರಿದ್ದರು.