ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿಯವರ ವರ್ಗಾವಣೆ ಸ್ವಾಗತಾರ್ಹ. ಸರ್ಕಾರ ಸರಿಯಾದ ಕ್ರಮ ತೆಗೆದುಕೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹುದ್ದೆ ಸಂವಿಧಾನಿಕ ಹುದ್ದೆ ಅಲ್ಲ. ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಸನ್ಮಾನ್ಯ ಷಡಕ್ಷರಿಯವರು ಕೋಟ್ಯಾಂತರ ರೂಪಾಯಿ ಮಣ್ಣು ಮಾಫಿಯ ಮಾಡಿ, ಬಿಜೆಪಿ ಎಜೇಂಟ್ ಆಗಿ ಸರ್ಕಾರಿ ನೌಕರರ ವರ್ಗಾವಣೆ ಮಾಫಿಯದಲ್ಲಿ ಭಾಗಿಯಾಗಿರುವದು ಸತ್ಯ ಎಂದು ಆರೋಪಿಸಿದೆ.
ಶಿವಮೊಗ್ಗದ ಅಬ್ಬಲಗೆರೆ ಮುದ್ದಣ್ಣನಾ ಕೆರೆಯಲ್ಲಿನ ಮಣ್ಣನ್ನು ಮಾಫಿಯ ಮಾಡಿದ್ದಾರೆ ಮತ್ತು ಎಸ್ಸಿ, ಎಸ್ಟಿ ಭೂಕಬಳಿಕೆಯಲ್ಲಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದು, ಎಂ.ಪಿ. ರಾಘವೇಂದ್ರ ಅವರು ವಿಶೇಷ ಕಾಳಜಿ ತೋರಿಸಿ ವರ್ಗಾವಣೆ ಹಿಂಪಡೆಯಬೇಕು ಎಂಬುದು ಸಮಂಜಸವಲ್ಲ. ಇವರನ್ನ ಬಂಧಿಸಿ ಶೀಘ್ರ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ ನಾವು ವಿರಾಮಿಸುವುದಿಲ್ಲವೆಂದು ನ್ಯಾಯ ಒದಗಿಸಬೇಕೆಂದು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಶಿವಮೊಗ್ಗ ಸಾಮಾಜಿಕ ಜಾಲತಾಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಡೂರ್ ಶಿವಣ್ಣ ಅಗ್ರಹಿಸಿದರು.
ಈ ಸಂದರ್ಭದಲ್ಲಿ ರುದ್ರೇಶಪ್ಪ ಸೇರಿ, ಕಾಂಗ್ರೆಸ್ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.