ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಹಾಗೂ ಮಾದಕ ವಸ್ತುಗಳನ್ನು ಸಾಗಣೆ ಮಾಡುವ ಪ್ರಕರಣಗಳು ಹೆಚ್ಚಳವಾಗಿ ಕಂಡುಬರುತ್ತಿವೆ. ಅಕ್ರಮವಾಗಿ ಚಿನ್ನ, ಡ್ರಗ್ಸ್ ಸೇರಿದಂತೆ ಹಲವು ನಿರ್ಬಂಧಿತ ವಸ್ತುಗಳನ್ನು ಸಾಗಾಟ ಮಾಡಲು ದುಷ್ಕರ್ಮಿಗಳು ನಾನಾ ರೀತಿಯಲ್ಲಿ ಯತ್ನಿಸುತ್ತಿದ್ದಾರೆ.
ಪ್ಯಾಂಟ್ ಜೀಪ್, ಬ್ಲೌಸ್ ಸೇರಿದಂತೆ ಅನೇಕ ಅನ್ಯ ದಾರಿಗಳ ಮೂಲಕ ಅಕ್ರಮವಾಗಿ ವಸ್ತುಗಳನ್ನು ಸಾಗಿಸಲು ಪ್ರಯತ್ನಿಸುತ್ತಾರೆ. ಇದೀಗ ಬರೋಬ್ಬರಿ ₹3 ಕೋಟಿ ಮೌಲ್ಯದ 5 ಕೆಜಿ ಚಿನ್ನವನ್ನು ಗುದನಾಳದಲ್ಲಿ ಕ್ಯಾಪ್ಸುಲ್ ಮಾದರಿಯಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸಿದ ಐವರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಜತೆಗೆ ಆರೋಪಿಗಳಿಂದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
#IndianCustomsAtWork
Bengaluru Air Customs seized 5.135kg gold worth Rs.3.09 Cr from 7 Pax coming from Kuwait,Dubai,Sharjah,Abu Dhabi and Bangkok on 7.11.2023/ 8.11.2023.Modus included concealment in form of capsules in rectum,ladies Purse handle and undergarments.5 arrested. pic.twitter.com/wqco2N1DEX— Bengaluru Customs (@blrcustoms) November 9, 2023
ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ನವೆಂಬರ್ 7 ಮತ್ತು 8 ರಂದು ಕುವೈತ್, ದುಬೈ, ಶಾರ್ಜಾ, ಅಬುಧಾಬಿ ಮತ್ತು ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕರನ್ನು ತಪಾಸಣೆ ಮಾಡಿದ್ದಾರೆ. ಮಹಿಳೆಯರ ವ್ಯಾನಿಟ್ ಬ್ಯಾಗ್‌ನ ಹಿಡಿಕೆ ಮತ್ತು ಒಳಉಡುಪಿನ ಅಕ್ರಮವಾಗಿ ಸಾಗಾಟಣೆ ಮಾಡಲು ಯತ್ನಿಸಿದ್ದು, ಕೂಡಲೇ ಪ್ರಯಾಣಿಕರನ್ನು ವಶಕ್ಕೆ ಪಡೆದ ಅಧಿಕಾರಿಗಳು ತಪಾಸಣೆ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ: ಎಲ್ಲೆಲ್ಲಿ? ಇಲ್ಲಿದೆ ನೋಡಿ
ನವೆಂಬರ್ 8 ರಂದು ನಡೆದ ಮತ್ತೊಂದು ಪ್ರಕರಣದಲ್ಲಿ ಆರೋಪಿ ಪ್ಯಾಂಟ್ ಜಿಪ್ ಒಳಗಡೆ ₹18 ಲಕ್ಷ ಮೌಲ್ಯದ 284 ಗ್ರಾಂ ಚಿನ್ನವನ್ನು ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದನು. ಸದ್ಯ ಆರೋಪಿಯಿಂದ ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ಜಪ್ತಿ ಮಾಡಿದ್ದಾರೆ.