ಅಪ್ರಾಪ್ತ ಬಾಲಿಕಿಯ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ತೊರೆಬೊಮ್ಮನಹಳ್ಳಿ ಗ್ರಾಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಲೆ ನ.4ರಂದು ಸಮೂಹಿಕ ಅತ್ಯಾಚಾರ ನಡೆಸಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುನೀತ್, ಮಂಜುನಾಥ್ ಹಾಗೂ ಸಿದ್ದಾರ್ಥ ಬಂಧಿತ ಆರೋಪಿಗಳು. ಈ ಮೂವರ ವಿರುದ್ಧ ಬಾಲಕಿಯ ಪೋಷಕರು ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. “ಮೂವರು ಕಾಮುಕರು ತಮ್ಮ ಮಗಳನ್ನು ಪುಸಲಾಯಿಸಿ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ” ಎಂದು ದೂರಿನಲ್ಲಿ ವಿರಿಸಿದ್ದಾರೆ.
ಘಟನೆಯ ವಿವರ
ಬಾಲಕಿ ಮೈಸೂರಿನಲ್ಲಿ ನಡೆದ ಯುವ ದಸರಾದಲ್ಲಿ ಭಾಗಿಯಾಗಿದ್ದರು. ಆ ವೇಳೆ, ಪುನೀತ್ ಎಂಬಾತ ಆಕೆಗೆ ಪರಿಚಯವಾಗಿದ್ದ. ಆಕೆಯನ್ನು ಪ್ರೀತಿಸುತ್ತಿರುವುದಾಗಿ ಪೀಡಿಸುತ್ತಿದ್ದ.
ನ.4ರಂದು ಸುಮಾರು 11 ಗಂಟೆಗೆ ನನ್ನ ಮಗಳನ್ನು ಕೆ.ಎಂ ದೊಡ್ಡಿಯಿಂದ ಮದ್ದೂರಿಗೆ ಕರೆದೊತಯ್ದಿದ್ದ ಪುನೀತ್, ಮದ್ದೂರಿನಲ್ಲಿ ಹಣ್ಣಿನ ಜ್ಯೂಸ್ ಕುಡಿಸಿದ್ದಾನೆ. ಬಳಿಕ , ಆಕೆಯನ್ನು ಶಿವಪುರದ ಲಾಡ್ಜ್‌ವೊಂದಕ್ಕೆ ಕರೆದುದೊಯ್ದು ಪುನೀತ್ ಅತ್ಯಾಚಾರವೆಸಗಿದ್ದಾನೆ. ನಂತರ, ಆತನ ಸ್ನೇಹಿತ ಮಂಜುನಾಥ ಹಾಗೂ ಸಿದ್ಧಾರ್ಥ ಕೂಡ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಕೃತ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕಸಿಕೊಂಡು ಬೆದರಿಕೆ ಹಾಕಿದ್ದಾರೆ. ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್‌ಮೇಲೆ ಮಾಡಿದ್ದಾರೆ. ವಿಡಿಯೋವನ್ನು ಮಗಳಿಗೆ ಕಳುಹಿಸಿ ನಾವು ಕರೆದಾಗೆಲ್ಲ ಬರಬೇಕೆಂದು ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಪೋಷಕರು ವಿವರಿಸಿದ್ದಾರೆ.
ಮೂವರು ಅತ್ಯಾಚಾರಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 114, 323, 324, 363, 360, 367 ಮತ್ತು ಪೋಕ್ಸೋ ಹಾಗೂ ಅಟ್ರಾಸಿಟಿ ಪ್ರಕರಣ ದಾಖಲಿಕೊಂಡಿರುವ ಮದ್ದೂರು ಪೊಲೀಸರು, ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.