ಯುವಕರ ಎರಡು ಗುಂಪುಗಳ ನಡುವೆ ವೈಯಕ್ತಿಕ ಕಾರಣಕ್ಕೆ ಗಲಾಟೆ ನಡೆದಿದ್ದು, ಮೂವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದ ಜೆಪಿ ನಗರ ಬಡಾವಣೆಯಲ್ಲಿ ನಡೆದಿದೆ.
ಟಿಪ್ಪು ನಗರದ ನಿವಾಸಿ ಸಮೀರ್ (23), ಫರಾಜ್ (24) ಮೇಲೆ ಹಲ್ಲೆ ಯಾಗಿದ್ದು, ಜೆಪಿ ನಗರದ ಮೊಹಮ್ಮದ್ ಖಾಲಿದ್ ಅಲಿಯಾಸ್ ಸೋನು (19) ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.
ಗಾಯಾಳುಗಳನ್ನ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವೈಯಕ್ತಿಕ ಕಾರಣಕ್ಕೆ ಗಲಾಟೆ ನಡೆದಿದೆ ಎಂದು ಪೊಲೀಸರು ಅನುಮಾಣ ವ್ಯಕ್ತಪಡಿಸಿದ್ದು, ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಜೆ.ಪಿ. ನಗರದ ಜಂಡೆಕಟ್ಟೆ ಬಳಿ ಕಾರ್ಯಕ್ರಮ ಒಂದರಲ್ಲಿ ಈ ಯುವಕರು ಭಾಗವಹಿಸಿದ್ದರು. ಈ ವೇಳೆ ಸಮೀರ್, ಫರಾಜ್, ಸಲ್ಲು, ಸೇಬು, ಸೋನು, ಕತ್ರು ಇವರ ಟೀಮ್ ನಡುವೆ ನ.09ರ ರಾತ್ರಿ ಗಲಾಟೆ ನಡೆದಿದೆ. ಪರಸ್ಪರ ಗುರಾಯಿಸಿಕೊಂಡು ಮಾತಿಗೆ ಮಾತು ಬೆಳೆದು ಪರಿಸ್ಥತಿ ವಿಕೋಪಕ್ಕೆ ತಿರುಗಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿನಿಡಿದ್ದಾರೆ.
ನ.09ರ ರಾತ್ರಿ ಜೆ.ಪಿ.ನಗರದ ಬಳಿ ಈ ಘಟನೆ ನಡೆದಿದೆ. 15 ದಿನಗಳ ಹಿಂದೆ ಇದೇ ಎರಡು ಗುಂಪಿನ ನಡುವೆ ಗಲಾಟೆ ನಡೆದಿತ್ತು. ಅದರ ಮುಂದುವರೆದ ಬಾಗವಾಗಿ ನಿನ್ನೆ ಮತ್ತೆ ಗಲಾಟೆಯಾಗಿದೆ ಎಂಬ ಮಾತು ನಗರದಲ್ಲಿ ಕೇಳಿಬರುತ್ತಿದೆ.