“ಟೊಯೋಟಾ ಮೊಬಿಲಿಟಿ ಫೌಂಡೇಶನ್ ಜಾಗತಿಕವಾಗಿ ನಡೆಸಿದ ಸುಸ್ಥಿರ ನಗರಗಳ ಸ್ಪರ್ಧೆಯಲ್ಲಿ ಬೆಂಗಳೂರು ಆಯ್ಕೆಯಾಗಿರುವುದು ನಮಗೆಲ್ಲ ಹೆಮ್ಮೆ ತರಿಸಿದೆ” ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ, “ವಿಶ್ವದ 46 ನಾನಾ ದೇಶಗಳ 150 ನಗರಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅದರಲ್ಲಿ ಬೆಂಗಳೂರು ಸೇರಿದಂತೆ 10 ನಗರಗಳನ್ನು ಈ ಸುಸ್ಥಿರ ನಗರಗಳ ಸ್ಪರ್ಧೆಯಲ್ಲಿ ಆಯ್ಕೆ ಮಾಡಲಾಗಿದೆ” ಎಂದು ಹೇಳಿದೆ.
“ಸಂಚಾರ ದಟ್ಟಣೆ ನಿರ್ವಹಣೆ, ಮೂಲಭೂತ ಸೌಕರ್ಯಗಳ ಆಧುನೀಕರಣ, ಅಪಘಾತಗಳ ತಡೆಗಟ್ಟುವ ಸಲುವಾಗಿ ಬ್ರ್ಯಾಂಡ್ ಬೆಂಗಳೂರು, ಸುಗಮ ಸಂಚಾರ ಬೆಂಗಳೂರು ವರದಿಯಂತೆ ಬೆಂಗಳೂರಿನ ಸಂಚಾರ ವ್ಯವಸ್ಥೆಯ ಆಧುನೀಕರಣಕ್ಕೆ ಟೊಯೋಟಾ ಮೊಬಿಲಿಟಿ ಫೌಂಡೇಶನ್ ಮುಂದಿನ 5 ವರ್ಷಗಳವರೆಗೆ ಸಹಾಯ ಮಾಡಲಿದೆ” ಎಂದು ಮಾಹಿತಿ ನೀಡಿದೆ.
“ಪಾದಚಾರಿಗಳಿಗೆ, ಸೈಕಲ್ ಬಳಕೆದಾರರಿಗೆ ಸುರಕ್ಷತೆ ಒದಗಿಸುವುದು ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಹೊಸ ವ್ಯವಸ್ಥೆ ಮಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರೆಷರ್ ಕುಕ್ಕರ್‌ನಲ್ಲಿ ಡ್ರಗ್ಸ್ ತಯಾರು ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ
ಸ್ಪರ್ಧೆಯಲ್ಲಿ ಆಯ್ಕೆಗೊಂಡ 10 ನಗರಗಳು
- ಡೆಟ್ರಾಯಿಟ್, ಯುನೈಟೆಡ್ ಸ್ಟೇಟ್ಸ್
- ಫೋರ್ಟಲೆಜಾ, ಬ್ರೆಜಿಲ್
- ಮೆಡೆಲಿನ್, ಕೊಲಂಬಿಯಾ
- ಮೆಕ್ಸಿಕೋ ಸಿಟಿ, ಮೆಕ್ಸಿಕೋ
- ನ್ಯೂ ಓರ್ಲಿಯನ್ಸ್, ಯುನೈಟೆಡ್ ಸ್ಟೇಟ್ಸ್
- ಸೆಬೆರಾಂಗ್ ಪೆರೈ, ಮಲೇಷ್ಯಾ
- ವಾರಣಾಸಿ, ಭಾರತ
- ವೆನಿಸ್, ಇಟಲಿ
- ಯಾರ್ಕ್, ಯುನೈಟೆಡ್ ಕಿಂಗ್ಡಮ್
- ಬೆಂಗಳೂರು