ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸಿದ್ಧನಹೊಸಹಳ್ಳಿ ಬಳಿ ನಡೆದಿದೆ.
ರಾಜೇಶ್ (45), ಹೆಗ್ಗಡದೇವನಪುರದ ಧನರಾಜ್ (24) ಮೃತ ದುರ್ದೈವಿಗಳು. ಇನ್ನು ಬೈಕ್‌ನಲ್ಲಿದ್ದ ಶಂಕರ್, ಮಹೇಶ್ ಎಂಬುವರಿಗೆ ಗಂಭೀರ ಗಾಯಗಳಾಗಿವೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಮಾದನಾಯಕನಹಳ್ಳಿ ಠಾಣೆಯ ಪೊಲೀಸರೊಬ್ಬರು, “ನ.10ರ ತಡರಾತ್ರಿ 12 ಗಂಟೆಗೆ ಈ ಅಪಘಾತ ಸಂಭವಿಸಿದೆ. ಕಡಬಗೆರೆ ಕಡೆಯಿಂದ ಒಂದು ಬೈಕ್ ಬರುತ್ತಿತ್ತು. ಎದುರುಗಡೆಯಿಂದ ತ್ರಿಬಲ್ ರೈಡಿಂಗ್‌ನಲ್ಲಿ ಮತ್ತೊಂದು ಬೈಕ್ ಬರುತ್ತಿತ್ತು. ಕಡಬಗೆರೆ ಕಡೆಯಿಂದ ಬಂದ ಸಿಂಗಲ್ ರೈಡ್ ಬೈಕ್‌ನ ಮುಂದೆ ಬಸ್ ತೆರಳುತ್ತಿತ್ತು. ಈ ಬಸ್ ಅನ್ನು ಓವರ್ ಟೇಕ್ ಮಾಡಲು ಹೋಗಿ ಎದುರುಗಡೆ ಬರುತ್ತಿರುವ ತ್ರಿಬಲ್ ರೈಡ್‌ನ ಬೈಕ್‌ಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್‌ಗಳ ವಾಹನ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಹಸಿರು ಪಟಾಕಿ ಬಳಸಿ: ಪೊಲೀಸ್ ಆಯುಕ್ತ ದಯಾನಂದ
“ಗಾಯಗೊಂಡವರ ಪೈಕಿ ಒಬ್ಬರು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದರು.
ಈ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ.