- ಹುಚ್ಚರ ತರ ಯತ್ನಾಳ್ ಏನೇನೋ ಮಾತಾಡ್ತಾರೆ
- ಯತ್ನಾಳ್ ಮಾತನಾಡುವ ಸಂಗತಿಗಳಿಗೆ ಬೆಲೆ ಇಲ್ಲ
ಮಂಗನಿಗೆ ಸಾರಾಯಿ ಕುಡಿಸಿ, ಅದರ ಬಾಲಕ್ಕೆ ಪಟಾಕಿ ಹಚ್ಚಿದ್ರೆ ಏನಾಗುತ್ತೋ ಆ ರೀತಿ ಹುಚ್ಚರ ತರ ಅವನು ಮಾತನಾಡ್ಕೊಂತ ಹೋಗುತ್ತಿದ್ದಾನೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಏಕವಚನದಲ್ಲೇ ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯತ್ನಾಳ್ ಮಾತನಾಡುವ ಸಂಗತಿಗಳಿಗೆ ಬೆಲೆ ಇಲ್ಲ. ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡಬೇಕು ಎಂದರು.
“ಅವರು ಬಿ ಎಸ್ ಯಡಿಯೂರಪ್ಪ ಕುಟುಂಬದಿಂದ ಹಿಡಿದು ಯಾರನ್ನೂ ಉಳಿಸಿಲ್ಲ. ಸ್ವಪಕ್ಷದ ನಾಯಕರ ವಿರುದ್ಧವೇ ನಾಲಿಗೆ ಹರಿಬಿಡುತ್ತಾರೆ. ನಾನೇ ಮುಂದಿನ ಮುಖ್ಯಮಂತ್ರಿ, ನಾನೇ ಮುಂದಿನ ರಾಜ್ಯಾಧ್ಯಕ್ಷ ಎಂಬುದು ಅವರ ಸ್ವಘೋಷಣೆ” ಎಂದು ತಿರುಗೇಟು ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಿಜೋರಾಂ ಪ್ರಚಾರಕ್ಕೆ ಮೋದಿ ಚಕ್ಕರ್; ಜನಾಕ್ರೋಶದ ಭಯವೇ?
“ಯತ್ನಾಳ್ ಹೇಳಿಕೆಯನ್ನು ನಮ್ಮ ರಾಜ್ಯ ನಾಯಕರಾಗಲಿ ಅಥವಾ ರಾಷ್ಟ್ರೀಯ ನಾಯಕರಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಅವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ” ಎಂದು ಹೇಳಿದರು.
ಬಿ ವೈ ವಿಜಯೇಂದ್ರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, “ದೀಪಾವಳಿ ಉಡುಗೊರೆಯಾಗಿ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಲಭಿಸಿದೆ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಅವರು ಯಶಸ್ಸು ಸಾಧಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ” ಎಂದು ತಿಳಿಸಿದರು.