ಅಂಗನವಾಡಿಯಲ್ಲಿ ಮಕ್ಕಳಿಗೆ ಕಲಿಕೆಯೊಂದಿಗೆ ಉತ್ತಮ ಪೌಷ್ಟಿಕ ಆಹಾರ ಒದಗಿಸುವುದರ ಮೂಲಕ ಅವರನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿ ಮಾಡಬೇಕುʼ ಎಂದು ಶಾಸಕ ಚಂದ್ರು ಕೆ ಲಮಾಣಿ ತಿಳಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಉಳ್ಳಟ್ಟಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
“ನಾನು ನೂತನವಾಗಿ ಶಾಸಕನಾಗಿ ತಮಗೆಲ್ಲರಿಗೂ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿತ್ತು. ಆದರೆ ಆ ಕಾರ್ಯ ವಿಳಂಬವಾಗಿದೆ. ಈ ಅಂಗನವಾಡಿ ಉದ್ಘಾಟನೆ ಕಾರ್ಯಕ್ರಮ ಖುಷಿ ತಂದಿದೆ” ಎಂದರು.
“ಅಂಗನವಾಡಿಗೆ ಒಂದು ಫ್ಯಾನ್, ಶೌಚಾಲಯ, ವಿದ್ಯುತ್, ನೀರಿನ ಸರಬರಾಜು ಬಹಳ ಮುಖ್ಯ, ಅವೆಲ್ಲವೂ ಅಚ್ಚುಕಟ್ಟಾಗಿವೆ. ಹಾಗೆಯೇ ಕಟ್ಟಡವನ್ನೂ ಕೂಡ ಬಹಳ ಸುಸಜ್ಜಿತವಾಗಿ ಕಟ್ಟಿದ್ದಾರೆ” ಎಂದು ಅಭಿನಂದಿಸಿದರು.
ಯುವನಾಯಕ ಕೃಷ್ಣ ಲಮಾಣಿಯವರ ಕಾರ್ಯವನ್ನು ಸಾಘ್ಲಿಸಿ ಮಾತನಾಡಿದ ಅವರು, ಊರಿನ ಹಿರಿಯರು ನನ್ನ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆಂದು ಭರವಸೆ ನೀಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಮೃತ್ಯುಂಜ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಮಲ್ಲೂರ, ದೊಡ್ಡೂರ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಚಂದ್ರಶೇಖರ ಈಳಿಗೇರ, ನಿಂಗಪ್ಪ ಬಂಕಾಪೂರ, ಕೃಷ್ಣ ಲಮಾಣಿ, ಊರಿನ ಹಿರಿಯರು ಎಲ್ ಪಿ ಲಮಾಣಿ, ಶೇಖರಪ್ಪ ಲಮಾಣಿ, ಶೇಖರಗೌಡ ಪಾಟೀಲ್, ಮುದಕನಗೌಡ ಪಾಟೀಲ್, ಬಸವನಗೌಡ ಪಾಟೀಲ್, ರಮೇಶ ಲಮಾಣಿ, ಅಪ್ಪು ಲಮಾಣಿ, ಎನ್ ಎಚ್ ಹಡಪದ, ಗುಡ್ಡಪ್ಪ ಹಡಪದ, ರವಿ ಭಜಕ್ಕನವರು, ರವಿರಾಜ ಈಳಿಗೇರ, ಅಂಗನವಾಡಿಯ ಶಿಕ್ಷಕಿಯವರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಲಕ್ಷ್ಮೇಶ್ವರ ಸಿಟಿಜನ್ ಜರ್ನಲಿಸ್ಟ್: ಮಲ್ಲೇಶ ಮಣ್ಣಮ್ಮನವರ