ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (UNHCR) ಪ್ರಕಾರ, ಸುಡಾನ್‌ನ ವೆಸ್ಟ್ ಡಾರ್ಫುರ್‌ನಲ್ಲಿರುವ ಅರ್ಡಮಾಟಾದಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ (ಆರ್‌ಎಸ್‌ಎಫ್) ಸಂಘರ್ಷದಿಂದಾಗಿ ಕಳೆದ ಆರು ತಿಂಗಳಲ್ಲಿ 800 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಮತ್ತು 4.8 ಮಿಲಿಯನ್ ಮಂದಿ ಸ್ಥಳಾಂತರಗೊಂಡಿದ್ದಾರೆ. 1.2 ಮಿಲಿಯನ್ ಜನರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.
ವಿಶ್ವಸಂಸ್ಥೆಯ ಹೇಳಿಕೆಯ ಪ್ರಕಾರ, ಡಾರ್ಫರ್ ಪ್ರದೇಶದಾದ್ಯಂತ ಹೆಚ್ಚುತ್ತಿರುವ ಹಿಂಸಾಚಾರವು ಎರಡು ದಶಕಗಳ ಹಿಂದೆ ಮಾಡಿದ ದೌರ್ಜನ್ಯಗಳ ಪುನರಾವರ್ತನೆಯಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.
ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ ಅರ್ಡಮಾಟಾ ಶಿಬಿರಗಳನ್ನು ಕೂಡ ಆರಂಭಿಸಿದೆ. ಅಂಥ ಸುಮಾರು ನೂರು ಶೆಲ್ಟರ್‌ಗಳನ್ನು ನಾಶಗೊಳಿಸಲಾಗಿದ್ದು, ವಿಶ್ವಸಂಸ್ಥೆಯ ಪರಿಹಾರ ವಸ್ತುಗಳ ವ್ಯಾಪಕ ಲೂಟಿ ನಡೆಯುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಜನಾಂಗೀಯತೆಯೆ ಆಧಾರದ ಮೇಲೆ ದಾಳಿ ಸೇರಿದಂತೆ, ಡಾರ್ಫುರ್‌ನಲ್ಲಿ ಸಂಘರ್ಷ ಮುಂದುವರಿದರೆ, ಅದು ಯುದ್ಧಾಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಕೆ ಕಾರಣವಾಗಬಹುದು. ಅದರ ಪರಿಣಾಮವಾಗಿ ನಿರಂತರ ಲೈಂಗಿಕ ಹಿಂಸೆ, ಅನಿಯಂತ್ರಿತ ಹತ್ಯೆಗಳು, ಸುಲಿಗೆ ಮತ್ತು ನಿರ್ದಿಷ್ಟ ಜನಾಂಗೀಯ ಗುಂಪುಗಳನ್ನು ಗುರಿಯಾಗಿಸುವ ವರದಿಗಳ ಬಗ್ಗೆ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.