ಶಿವಮೊಗ್ಗದಲ್ಲಿ ನಗರದಲ್ಲಿ ದೀಪಾವಳಿ ಸಂಭ್ರಮ ಜೋರಾಗಿದ್ದು, ಈ ಬಾರಿ ನಗರದ ಫ್ರೀಡಂ ಪಾರ್ಕ್ ಒಂದರಲ್ಲಿ ಮಾತ್ರ ಪಟಾಕಿ ಮಳಿಗೆಗೆ ವ್ಯವಸ್ಥೆ ಮಾಡಿದ್ದಾರೆ. 60 ಪಟಾಕಿ ಮಳಿಗೆಗೆ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
“ಕಳೆದ ಬಾರಿ ನೆಹರೂ ಸ್ಟೇಡಿಯಂ ಮತ್ತು ಸೈನ್ಸ್ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಈ ಬಾರಿ ಫ್ರೀಡಂ ಪಾರ್ಕ್‌ನಲ್ಲಿ ಪಾರ್ಕಿಂಗ್, ಪಟಾಕಿ ಸ್ಟಾಲ್, ಐಸ್‌ಕ್ರೀಮ್, ಜ್ಯೂಸ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಅನುಕೂಲಕರವಾಗಿವೆ” ಎಂದು ಗ್ರಾಹಕರು ಈ ದಿನ.ಕಾಮ್ ಜೊತೆ ಅಭಿಪ್ರಾಯ ಹಂಚಿಕೊಂಡರು.
“ಸುರಕ್ಷಿತ ಕ್ರಮಕ್ಕೆ ಹೆಚ್ಭು ಆದ್ಯತೆ ನೀಡಿದ್ದು, ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಗಾಂಧಿ ಬಜಾರ್‌ನ ಮುಖ್ಯ ದ್ವಾರದಲ್ಲಿ ವಾಹನ ಸಂಚಾರ ದಟ್ಟಣೆ ಆಗದಂತೆ ಪೊಲೀಸರು ಕ್ರಮ ವಹಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಭಾರತೀಯತೆಯ ಜೊತೆಗೆ ಭ್ರಾತೃತ್ವ ಭಾವನೆಯನ್ನೂ ಬೆಳಸಿಕೊಳ್ಳಬೇಕು: ವೈದ್ಯೆ ರೇಖಾ ಪಾಟೀಲ್
“ಕಳೆದ ಬಾರಿಗಿಂತ ಈ ಬಾರಿ ಪಟಾಕಿ ಬೆಲೆ ತುಸು ದುಬಾರಿಯಾಗಿದೆ. ಇಲ್ಲಿ ಹಣ್ಣು ಹೂವುಗಳ ಬೆಲೆಯೂ ದುಬಾರಿಯಾಗಿದೆ” ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದರು.