ವಿಜಯೇಂದ್ರ ಆಯ್ಕೆ | ಬಿಜೆಪಿಯ ಹಿರಿಯರು ಅಸಮಾಧಾನ, ಸಿಟ್ಟು, ನೋವನ್ನು ನುಂಗಿಕೊಂಡು ಮೌನವಾಗಿದ್ದೇಕೆ?

Date:

Advertisements

ಯುವ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಲವರು ಅವರ ನೇಮಕವನ್ನು ಸಂಭ್ರಮಿಸುತ್ತಿದ್ದರೆ, ಹಿರಿಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿ, ಈಗ ಮೌನಕ್ಕೆ ಶರಣಾಗಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿರುವ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಿಸಿರುವುದನ್ನು ಹಿರಿಯರು ಮತ್ತು ಪಕ್ಷಕ್ಕಾಗಿ ದುಡಿದ ಹಿಂದಿನ ಪೀಳಿಗೆಯ ಬಿಜೆಪಿ ನಾಯಕರು ‘ರಾಜಕೀಯ ಅಪ್ರಸ್ತುತಿ’ ಎಂದಿದ್ದಾರೆ. 2028ರಲ್ಲಿ ಪಕ್ಷದ ಮುಖ್ಯಮಂತ್ರಿಯಾಗುವ ಅವಕಾಶವನ್ನು ಹಿರಿಯ ನಾಯಕರು ಕಳೆದುಕೊಳ್ಳಬಹುದು ಎಂಬ ಮಾತುಗಳೂ ಇವೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ವಿ.ಸೋಮಣ್ಣ, ಮಾಜಿ ಕೇಂದ್ರ ಸಚಿವ ಬಸನಗೌಡ ಯತ್ನಾಳ್, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮಂತ್ರಿಗಳಾದ ಆರ್. ಅಶೋಕ್, ಅಶ್ವತ್ಥನಾರಾಯಣ್, ಸುನಿಲ್ ಕುಮಾರ್, ಶ್ರೀರಾಮುಲು ಮತ್ತು ಇನ್ನೂ ಅನೇಕ ನಾಯಕರು ರಾಜ್ಯಾಧ್ಯಕ್ಷರಾಗಬಹುದು ಎಂದು ಹೇಳಲಾಗಿತ್ತು. ಅಲ್ಲದೆ, ಅವರೆಲ್ಲರೂ ವಿಜಯೇಂದ್ರ (47) ಅವರಿಗಿಂತ ವಯಸ್ಸು ಮತ್ತು ರಾಜಕೀಯ ಅನುಭವದಲ್ಲಿ ಹಿರಿಯರು. ಆದರೆ, ಈಗ ಅವರೆಲ್ಲರೂ ಮೊದಲ ಬಾರಿಗೆ ಶಾಸಕನಾಗಿರುವ ವಿಜಯೇಂದ್ರ ಅವರಿಂದ ಸಲಹೆ, ಸೂಚನೆ, ನಿರ್ದೇಶನಗಳನ್ನು ತೆಗೆದುಕೊಳ್ಳಬೇಕಾಗಿದೆ. ಜೊತೆಗೆ, ಪೂರ್ವನಿಯೋಜಿತವಾಗಿ 2028ರ ವಿಧಾನಸಭಾ ಚುನಾವಣೆಯಲ್ಲಿ ಅವರೇ ಮುಖ್ಯಮಂತ್ರಿ ಮುಖವೂ ಆಗಬಹುದು ಎಂಬ ಮಾತುಗಳಿವೆ. ಹಿರಿಯರಿಗೆ ಇದು ಅರಗಿಸಿಕೊಳ್ಳುವುದಕ್ಕೆ ಕಷ್ಟವಾದರೂ, ಅಸಮಾಧಾನವನ್ನು ಹೊರಹಾಕದೆ, ನೋವನ್ನು ನುಂಗಿಕೊಳ್ಳಬೇಕಾದ, ಮೌನಕ್ಕೆ ಶರಣಾಗಬೇಕಾದ ಸನ್ನಿವೇಶವಾಗಿದೆ.

ಆ ಕಾರಣದಿಂದಾಗಿಯೇ ಆ ಹಿರಿಯರೆಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಅವರೆಲ್ಲರೂ ತಮ್ಮ ರಾಜಕೀಯ ಭವಿಷ್ಯಕ್ಕೆ ಧಕ್ಕೆ ತರುವಂತಹ ಯಾವುದೇ ಹೇಳಿಕೆಗಳನ್ನು ನೀಡಬಾರದೆಂಬ ಹೈಕಮಾಂಡಿನ ಮೌಖಿಕ ಆದೇಶಕ್ಕೆ  ಮೌನ ತಾಳಿದ್ದಾರೆ.

Advertisements

ಎಲ್ಲಕ್ಕಿಂತ ಮುಖ್ಯವಾಗಿ, ರಾಜ್ಯದಲ್ಲಿ ಯಡಿಯೂರಪ್ಪನವರ ವರ್ಚಸ್ಸನ್ನು ಬದಿಗೊತ್ತಿ, ಕೋಮುವಾದಿ ದಾಳದೊಂದಿಗೆ ಬಿಜೆಪಿಯನ್ನು ಗಟ್ಟಿಗೊಳಿಸಬೇಕೆಂದು ವಂಚುಹಾಕಿದ್ದ ಆರ್‌ಎಸ್‌ಎಸ್‌ಗೆ ವಿಜಯೇಂದ್ರ ಆಯ್ಕೆ ನುಂಗಿ, ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಸಿ, ಕೋಮುವಾದಿ ಧೋರಣೆ, ಮುಸ್ಲಿಂ ವಿರೋಧಿ ನಡೆಗಳು, ದ್ವೇಷ ಭಾಷಣಗಳ ಮೂಲಕ ಸರ್ಕಾರ ನಡೆಸಲಾಗಿತ್ತು. ಸರ್ಕಾರದ ಚುಕ್ಕಾಣಿ ಕೇಶವ ಕೃಪಾದಲ್ಲಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಮತ್ತೆ ಯಡಿಯೂರಪ್ಪ ಕುಟಂಬದ ಕೈಗೆ ಬಿಜೆಪಿ ಚುಕ್ಕಾಣಿ ಮರಳಿದೆ. ಇದು ಆರ್‌ಎಸ್‌ಎಸ್‌ಗೆ ಸಹಿಸಲಾಗಿದ್ದರೂ, ಸಂಘ ಮೌನವಾಗಿದೆ.

ಸಂಘಪರಿವಾರದ ಹಿನ್ನೆಲೆಯ ಬ್ರಾಹ್ಮಣ ನಾಯಕರಾದ ಬಿ.ಎಲ್. ಸಂತೋಷ್, ಪ್ರಲ್ಹಾದ್ ಜೋಷಿ, ಸುರೇಶ್ ಕುಮಾರ್, ನಾಗೇಶ್, ರವಿ ಸುಬ್ರಹ್ಮಣ್ಯ, ತೇಜಸ್ವಿ ಸೂರ್ಯರು ಅಗಿಯಲೂ ಆಗದೆ, ಉಗುಳಲೂ ಆಗದೆ ಒದ್ದಾಡುತ್ತಿದ್ದಾರೆ.

ಪಕ್ಷದ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ‘ವಿಜಯೇಂದ್ರ ಅವರಿಗೆ ನೀಡಿರುವುದು ಅಧಿಕಾರವಲ್ಲ, ಜವಾಬ್ದಾರಿ’ ಎಂದಷ್ಟೇ ಹೇಳಿದ್ದಾರೆ. ವಿಜಯೇಂದ್ರ ಅವರ ಆಯ್ಕೆಯ ಫಲಿತಾಂಶ ಲೋಕಸಭೆ ಚುನಾವಣೆ ನಂತರ ತಿಳಿಯಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.  ಹಿರಿಯ ಲಿಂಗಾಯತ ಮುಖಂಡ ಬಸವರಾಜ ಬೊಮ್ಮಾಯಿ, ವಿ ಸೋಮಣ್ಣ, ಮೌನ ಮುರಿದಿಲ್ಲ. ಯತ್ನಾಳ್ ಮತ್ತು ನಿರಾಣಿಯಂತಹ ಬಾಯಿಬಡುಕರು ಬಡಿದಾಡಿಕೊಂಡಿದ್ದೂ ನಡೆದಿದೆ. ಇನ್ನು ಕೆಲವರು ಅವರ ಉನ್ನತಿಯ ಬಗ್ಗೆ ತೆರೆಮರೆಯಲ್ಲಿ ಕೋಪ ವ್ಯಕ್ತಪಡಿಸಿದ್ದಾರೆ. ಹಲವರು ಪಕ್ಷವು ತಾನು ಮಾಡಿದ ತಪ್ಪಿಗೆ ಬೆಲೆ ತೆರುತ್ತದೆ ಎನ್ನುತ್ತಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರು ತಮ್ಮ ನಿಷ್ಠಾವಂತ ಬೆಂಬಲಿಗರಲ್ಲಿ ಒಬ್ಬರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದಿತ್ತು. ಆದರೆ, ಅವರು ತಮ್ಮ ಮಗನನ್ನು ಆಯ್ಕೆ ಮಾಡಿರುವುದು ಕೆಟ್ಟ ನಿದರ್ಶನವಾಗಿದೆ ಎಂದು ಕೆಲವರು ಹೇಳಿದ್ದಾರೆ.

“ಬಲವಂತವಾಗಿ ಅಧಿಕಾರದಿಂದ ಕೆಳಗಿಳಿದ ನಂತರ ಬಿಜೆಪಿ ವಿರುದ್ಧ ಯಡಿಯೂರಪ್ಪನವರ ಕೋಪವು 2023ರಲ್ಲಿ ಪಕ್ಷವು ಹೀನಾಯವಾಗಿ ಸೋಲುವಂತೆ ಮಾಡಿತು. ಈಗ, 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರ ಸಾಮೂಹಿಕ ಕೋಪವು ಏನು ಮಾಡಬಹುದು. ಕಾದು ನೋಡಬೇಕು” ಎಂದು ವಿಶ್ಲೇಷಕರೊಬ್ಬರು ಹೇಳಿದ್ದಾರೆ.

”ಯಾರಿಗೂ ಕೋಪವಿಲ್ಲ. ಇದೆಲ್ಲವೂ ರಾಜಕೀಯ ಲೆಕ್ಕಾಚಾರವಾಗಿದೆ. ವಿಜಯೇಂದ್ರ ಅವರಿಗಿಂತ ಚಿಕ್ಕ ವಯಸ್ಸಿನಲ್ಲೇ ಅನಂತ್‌ಕುಮಾರ್‌ ಪಕ್ಷದ ಅಧ್ಯಕ್ಷರಾಗಿದ್ದರು. ಅವರು ಬಿಜೆಪಿಯ ಸ್ಥಾನಗಳನ್ನು 40 ರಿಂದ 87ಕ್ಕೆ ಹೆಚ್ಚಿಸಿದ್ದರು. ವಯಸ್ಸು ಮತ್ತು ಹಿರಿತನ ಮುಖ್ಯವಲ್ಲ. ಈಗಿನ ‘ಪವರ್ ಪಾಲಿಟಿಕ್ಸ್’ನಲ್ಲಿ ವಿಜಯೇಂದ್ರ ಉತ್ತಮ ಆಯ್ಕೆ” ಎಂದು ಪಕ್ಷದ ಮುಖ್ಯ ವಕ್ತಾರ ಮಹೇಶ್ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X