ಡಿಸಿಪಿ ಕಚೇರಿ ಎದುರಿನಲ್ಲೇ ಕಿಡಿಗೇಡಿಯೊಬ್ಬ ಯುವತಿಯ ಬಟ್ಟೆ ಎಳೆದಾಡಿ ಅಶ್ಲೀಲವಾಗಿ ನಡೆದುಕೊಂಡ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ನವೆಂಬರ್ 6ರ ರಾತ್ರಿ 10.40ರ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಾತ್ರಿ ವೇಳೆ, ಯುವತಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಳು. ಈ ವೇಳೆ, ಕಿಡಿಗೇಡಿ ಯುವಕ ಬೈಕ್ನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಯುವತಿ ಸೌತ್ ಎಂಡ್ ಸರ್ಕಲ್ನಲ್ಲಿರುವ ಡಿಸಿಪಿ ಕಚೇರಿ ಎದುರು ಬರುತ್ತಿದ್ದಂತೆ, ಯುವಕ ರಸ್ತೆಯಲ್ಲಿ ಆಕೆಯ ಬಟ್ಟೆಯನ್ನು ಎಳೆದಾಡಿ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ. ಆಕೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದವರ ಮೇಲೆ ಸಿಸಿಬಿ ದಾಳಿ
ಸ್ವಲ್ಪ ಸಮಯದ ಬಳಿಕ ಗಾಡಿಯ ಸಮೇತ ಪರಾರಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಡಿಗೇಡಿ ಯುವಕನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.