ಕೇಂದ್ರ ಗೃಹ ಸಚಿವಾಲಯವು ಮಣಿಪುರ ರಾಜ್ಯದ ಹಲವು ಮೈತೇಯಿ ಉಗ್ರಗಾಮಿ ಸಂಘಟನೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ “ಕಾನೂನುಬಾಹಿರ ಸಂಘಟನೆಗಳು” ಎಂದು ಘೋಷಿಸಿದೆ. ಅಧಿಸೂಚನೆಯ ಪ್ರಕಾರ, ಆದೇಶವು ಸೋಮವಾರದಿಂದ ಜಾರಿಗೆ ಬರಲಿದ್ದು, ಐದು ವರ್ಷಗಳ ಅವಧಿಗೆ ನಿಷೇಧ ಜಾರಿಯಲ್ಲಿರುತ್ತದೆ.
ಪ್ರತ್ಯೇಕತಾವಾದಿ, ವಿಧ್ವಂಸಕ, ಭಯೋತ್ಪಾದಕ ಮತ್ತು ಹಿಂಸಾತ್ಮಕ ಚಟುವಟಿಕೆಗಳನ್ನು ನಿಗ್ರಹಿಸಲು 9 ಮೈತೇಯಿ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಸಂಘಟನೆಗಳು ಮಣಿಪುರದಲ್ಲಿ ಭದ್ರತಾ ಪಡೆಗಳು, ಪೊಲೀಸರು ಮತ್ತು ನಾಗರಿಕರ ಮೇಲೆ ದಾಳಿಯಲ್ಲಿ ತೊಡಗಿವೆ ಎಂದು ಸರ್ಕಾರ ನಂಬುತ್ತದೆ ಎಂದು ತಿಳಿಸಲಾಗಿದೆ.
ಮೈತೇಯಿ ಉಗ್ರಗಾಮಿ ಸಂಘಟನೆಗಳ ಚಟುವಟಿಕೆಗಳನ್ನು “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕಾರಕವೆಂದು ಪರಿಗಣಿಸಲಾಗಿದೆ ಮತ್ತು ಅವು ಕಾನೂನುಬಾಹಿರ ಸಂಘಗಳಾಗಿವೆ” ಎಂದು ಸಚಿವಾಲಯ ಹೇಳಿದೆ.
ಈ ಸುದ್ದಿ ಓದಿದ್ದೀರಾ? ದಯವಿಟ್ಟು ಬಿಟ್ಟುಬಿಡಿ, ನನಗೆ ನಾಲ್ಕು ಹೆಣ್ಣುಮಕ್ಕಳಿದ್ದಾರೆ ಎಂದು ಅಂಗಲಾಚಿದರೂ ಅತ್ಯಾಚಾರವೆಸಗಿದ ರಾಕ್ಷಸರು
ಈ ಸಂಘಟನೆಗಳು ತಮ್ಮ ಪ್ರತಿಪಾದಿತ ಗುರಿಯಾಗಿ, “ಸಶಸ್ತ್ರ ಹೋರಾಟದ ಮೂಲಕ ಮಣಿಪುರವನ್ನು ಭಾರತದಿಂದ ಬೇರ್ಪಡಿಸುವ ಮೂಲಕ ಸ್ವತಂತ್ರ ರಾಷ್ಟ್ರವನ್ನು ಸ್ಥಾಪಿಸುವುದು ಮತ್ತು ಅಂತಹ ಪ್ರತ್ಯೇಕತೆಗೆ ಮಣಿಪುರದ ಸ್ಥಳೀಯ ಜನರನ್ನು ಪ್ರಚೋದಿಸುವುದು” ಎಂದು ಗೃಹ ಸಚಿವಾಲಯ ಉಲ್ಲೇಖಿಸಿದೆ.
ಸಚಿವಾಲಯವು ನಿಷೇಧವನ್ನು ಸಮರ್ಥಿಸುತ್ತಾ, “ಮೈತೇಯಿ ಉಗ್ರಗಾಮಿ ಸಂಘಟನೆಗಳ ಮೇಲೆ ತಕ್ಷಣದ ನಿಗ್ರಹ ಮತ್ತು ನಿಯಂತ್ರಣವಿಲ್ಲದಿದ್ದರೆ, ಅವರು ತಮ್ಮ ಪ್ರತ್ಯೇಕತಾವಾದಿ, ವಿಧ್ವಂಸಕ, ಭಯೋತ್ಪಾದಕ ಮತ್ತು ಹಿಂಸಾತ್ಮಕ ಚಟುವಟಿಕೆಗಳನ್ನು ಹೆಚ್ಚಿಸಲು ತಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಅವಕಾಶವನ್ನು ತೆಗೆದುಕೊಳ್ಳುತ್ತಾರೆ” ಎಂದು ತಿಳಿಸಿದೆ.
MHA bans nine Meitei extremist organisations that mostly operate in Manipur
— Press Trust of India (@PTI_News) November 13, 2023
ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿರುವ ಹಿನ್ನೆಲೆಯಲ್ಲಿ ಗೃಹ ಸಚಿವಾಲಯದ ನಿಷೇಧ ಜಾರಿಗೊಳಿಸಿದೆ. ಮೇ 3 ರಿಂದ ಮಣಿಪುರದಲ್ಲಿ ಕನಿಷ್ಠ 178 ಜನರು ಸಾವನ್ನಪ್ಪಿದ್ದು, 50,000 ಜನರು ಸ್ಥಳಾಂತರಗೊಂಡಿದ್ದಾರೆ.