ಧಾರವಾಡ | ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬ

Date:

Advertisements

ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಸೋಮವಾರ ನವೆಂಬರ್ 13ರಂದು ತಮ್ಮ ಮನೆಯಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದ್ದಾರೆ.

ಈ ಕುರಿತು ಸಲ್ಮಾಬಾನು ನದಾಪ್ ಮಾತನಾಡಿ ಸಮಾಜದಲ್ಲಿ ಇಂದು ಹಿಂದೂ-ಮುಸ್ಲಿಂ ಬೇರೆಮಾಡಿ ಒಡೆದು ಆಳುವ ಕುತಂತ್ರದಲ್ಲಿ ರಾಜಕಾರಣಿಗಳು ಮುಳಿಗಿದ್ದಾರೆ. ಯಾವುದೇ ಆಚರಣೆ ಆಗಲಿ, ಎಲ್ಲರೂ ಆಚರಿಸಬಹುದು. ಅದಕ್ಕೆ ಸಂವಿಧಾನವು ಸಮಾನವಾದ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನಾವು ದೀಪಾವಳಿ ಆಚರಣೆ ಮಾಡುತ್ತಿದ್ದೇವೆ ಎಂದರು.

ನಾವು ದಸರಾ, ನಾಗರಪಂಚಮಿ ಹಬ್ಬಗಳನ್ನೂ ನಾವು ಆಚರಿಸುತ್ತೇವೆ. ವರ್ಷಕ್ಕೊಮ್ಮೆ ಎಲ್ಲಮ್ಮನ ಗುಡ್ಡಕ್ಕೂ ಹೋವುತ್ತೇವೆ. ಇದರ ಹಿಂದಿನ ಮೂಲ ಉದ್ದೇಶ, ಭಾವೈಕೈತೆ.

Advertisements

ಭಾವೈಕೈತೆ ಸಮಾಜದಲ್ಲಿ ಕ್ರಮೇಣ ಕ್ಷೀಣಿಸುತ್ತ ಹೊರಟಿದೆ. ಭಾತೃತ್ವವು ಇಲ್ಲದಂತಾಗುತ್ತಿದೆ. ಹೀಗಾಗಬಾರದು ಎಂದು, ನಾವೆಲ್ಲರೂ ಒಂದು ಎಂಬ ಭಾವನೆ ನಮ್ಮೆಲ್ಲರಲ್ಲಿ ಮೂಡಲಿ ಎಂಬ ಭಾವನೆ ನಮ್ಮದಾಗಿದೆ. ನಮಗೆಲ್ಲ ದೇವರು ಒಬ್ಬನೆ, ದೇವರು ಜಾತಿ ಮಾಡಿಲ್ಲ. ಆದರೆ, ನಾವು ಜಾತಿ ಎಂದು ಕಿತ್ತಾಡುವುದು ಸರಿಯಲ್ಲ ಎಂದು ತಮ್ಮ ಮನದ ಮಾತು ವ್ಯಕ್ತ ಪಡಿಸಿದರು.

ಸಾಮಾನ್ಯವಾಗಿ ತಮ್ಮ‌ ತಮ್ಮ ಧರ್ಮದ ಆಚರಣೆಗಳು ತಮ ತಮಗೇ ಸೀಮಿತ ಎಂಬ ಭಾವನೆ ಹುಟ್ಟುತ್ತಿರುವ ಈ ಕಾಲದಲ್ಲಿ ಉತ್ತರಕರ್ನಾಟಕದ ಮುಸ್ಲಿಂ ಬಾಂಧವರು ದೀಪಾವಳಿ ಹಬ್ಬವನ್ನು ಹಿಂದೂಗಳು ಆಚರಿಸುವಂತೆ ಆಚರಿಸಿ ಭಾವೈಕ್ಯತೆ ಮೆರೆದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X