ಕೊಡಗು | ಸಿಪಿಐ(ಎಂಎಲ್‌)ಆರ್‌ಐ ಜಿಲ್ಲಾ ಸಮಿತಿಯಿಂದ ಯುವಜನರ ಕಾರ್ಯಗಾರ

Date:

Advertisements

ಪ್ರಸ್ತುತ ಸಮಾಜದಲ್ಲಿ ಯುವಜನರ ಸಮಸ್ಯೆಗಳು ಮತ್ತು ಕೋಮುವಾದಿ ಸರ್ವಾಧಿಕಾರಿಗಳ ನೀತಿಗಳ ಬಗ್ಗೆ, ಯುವ ಜನಾಂಗ ಡೋಂಗಿ ರಾಜಕಾರಣಿಗಳ, ಆರ್‌ಎಸ್ಎಸ್, ಸಂಘ-ಪರಿವಾರದ ಕೈ ಗೊಂಬೆಯಾಗದೆ ಎಂದು ಕಾಮ್ರೇಡ್  ಬಿ.ಆರ್. ರಂಗಸ್ವಾಮಿ ಹೇಳಿದರು.

ಕೊಡಗಿನ ಕುಶಾಲನಗರದಲ್ಲಿ ನ.13ರಂದು ಸಿಪಿಐ(ಎಂಎಲ್‌)ಆರ್‌ಐ ಜಿಲ್ಲಾ ಸಮಿತಿ ಯುವಜನರ ಕಾರ್ಯಗಾರವನ್ನು ವೈ.ಎ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿತ್ತು. ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ನೂರಕ್ಕೂ ಹೆಚ್ಚು ಯುವ ಜನರು, ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಬಿ.ಆರ್. ರಂಗಸ್ವಾಮಿ ಮಾತನಾಡಿದರು.

ಇಡೀ ಸಿಸ್ಟಮ್ ಅನ್ನು ಅರ್ಥಮಾಡಿಕೊಳ್ಳಬೇಕು ನಮಗೆ ರಾಜಕೀಯ ಪಕ್ಷಗಳು ಅವುಗಳ ಅಧಿಕಾರಗಳು ಬದಲಾದರೆ ಸಾಲದು? ಶತಶತಮಾನಗಳಿಂದ ಈ ದೇಶದ ಅಧಿಕಾರ, ಸಂಪತ್ತು ಎಲ್ಲವನ್ನೂ ಒಂದೇ ವರ್ಗ, ಶ್ರೀಮಂತ, ಬಂಡವಾಳಶಾಹಿ, ಕಾರ್ಪೊರೇಟ್  ಶಕ್ತಿಗಳೇ ಅನುಭವಿಸಿ ಕೊಂಡು ಬರುತ್ತಿರುವ ವ್ಯವಸ್ಥೆ ಬದಲಾಗಬೇಕು. ಆಗ ಮಾತ್ರ ನಮ್ಮ ಸಮಾನತೆ ಸಾಧ್ಯ ಎಂದರು.

Advertisements

ಡಾ. ಪದ್ಮಶ್ರೀ ಮಾತನಾಡಿ, ಯುವಜನರು ಸೆಲ್ ಫೋನ್ ದಾಸರಾಗಿದ್ದಾರೆ. ಸೆಲ್ ಅಂದರೆ ಜೈಲು. ಮೊಬೈಲ್ ಜೈಲಿನೊಳಗೆ ಸಿಲುಕಿದ್ದಾರೆ. ಜಿಯೋ ಕಂಪನಿ ಅವರನ್ನು ನಿಯಂತ್ರಣ ಮಾಡುತ್ತಿದೆ. ಸಮಾಜದ, ತಂದೆ, ತಾಯಿಗಳ ಮಾತುಗಳನ್ನು ಕೇಳಲಾರದಷ್ಟು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಆದರೂ, ಕೂಡ ಸೆಲ್ ಫೋನ್ ಒಳಗಡೆ ಬರುವ ಅಹಿತಕರ ಘಟನೆಗಳಿಗೆ, ಜನವಿರೋಧಿ ನೀತಿಗಳಿಗೆ, ಬೆತ್ತಲೆ ಮೆರವಣಿಗೆ, ಅತ್ಯಾಚಾರದ ವಿರುದ್ಧ, ಬಡವರ ಶೋಷಣೆಯ ವಿರುದ್ಧ ಸೆಲ್ ಫೋನ್‌ನಲ್ಲಿಯೇ ಉತ್ತರ ನೀಡಬಹುದು. ಆದರೆ, ಅದನ್ನು ಮಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಮ್ರೆಡ್ ಡಿ.ಎಸ್. ನಿರ್ವಾಣಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತಾ  ಕೊಡಗು, ಮಲೆನಾಡಿನ ಭಾಗದ ದುಡಿಯುವ ಯುವ ಜನಾಂಗದ ಸಮಸ್ಯೆಗಳ ಬಗ್ಗೆ ವಿವರವಾಗಿ ಮಾತನಾಡಿದರು.

ಕಾರ್ಯಗಾರದ ವೇದಿಕೆಯಲ್ಲಿ ಸಿಪಿಐಎಂಎಲ್ಆರ್ಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ವೈ.ಎಂ.ಸುರೇಶ್, ಜಗದೀಶ್, ಎಚ್.ಜೆ.ಪ್ರಕಾಶ್, ವೈ.ಪಿ.ಮೋಹನ, ಮುತ್ತಣ್ಣ ಸೌಂದರ್ಯ, ಇಂದಿರಾ ಬಾಬು ಇತರರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X