ದೀಪಾವಳಿ ಸಂಭ್ರಮದ ನಡುವೆ ಹಲವಾರು ಮನೆಗಳಲ್ಲಿ ಕತ್ತಲು ಆವರಿಸಿದೆ. ಪಟಾಕಿ ಸಿಡಿತದಿಂದ ಹಲವರು ಕಣ್ಣು ಕಳೆದುಕೊಂಡಿರುವ ಘಟನೆಗಳು ನಡೆದಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಟಾಕಿ ಸಿಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಪ್ರದೀಪ್ (30) ಮೃತಪಟ್ಟಿದ್ದಾರೆ.
ಪ್ರದೀಪ್ ಅವರು ಮಂಗಳವಾರ ರಾತ್ರಿ ತಮ್ಮ ಮನೆಯ ಎದುರು ಪಟಾಕಿ ಹಚ್ಚುತ್ತಿದ್ದರು. ಈ ವೇಳೆ, ಪಟಾಕಿ ಕಿಡಿಯೊಂದು ಪಟಾಕಿಗಳಿದ್ದ ಬಾಕ್ಸ್‌ಗೆ ಬಿದ್ದಿದೆ. ಪರಿಣಾಮ ಬಾಕ್ಸ್‌ನಲ್ಲಿದ್ದ ಎಲ್ಲ ಪಾಟಾಕಿಗಳೂ ಒಟ್ಟಿಗೆ ಸಿಡಿದಿವೆ. ಬಳಿಯೇ ಇದ್ದ ಪ್ರದೀಪ್‌ಗೆ ಗಂಭೀರ ಗಾಯಗಳಾಗಿವೆ.
ಪ್ರದೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.
ಪ್ರದೀಪ್ ಅವರ ಜೊತೆಗಿದ್ದ ಮೂವರು ಮಕ್ಕಳಿಗೂ ಗಾಯಗಳಾಗಿವೆ.