ಬ್ಯಾಂಕಾಕ್‌ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸೆಸ್ಟೋ ಬಾಲ್ ಟೂರ್ನಿಮೆಂಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸುಂಟಿಕೊಪ್ಪದ ಶಾಹಿಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಫಾ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಶಾಹಿಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಫಾ ಅವರು ಥೈಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ದ ಸೆಸ್ಟೋ ಬಾಲ್‌ನಲ್ಲಿನ ತಮ್ಮ ಚಾಕಾಚಕ್ಯತೆಯನ್ನು ಪ್ರದರ್ಶಿಸಿ ದೇಶಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಕೊಡಗು ಜಿಲ್ಲೆಯವರಾದ, ಸುಂಟಿಕೊಪ್ಪ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಕೆ.ಎ ಉಸ್ಮಾನ್ ಅವರ ಪುತ್ರ ಶಾಹಿಲ್ ಉಸ್ಮಾನ್ ಅವರು ಭಾರತ ತಂಡದ ಕ್ಯಾಪ್ಟನ್ ಆಗಿಯೂ ಕೂಡ ಕಾರ್ಯ ನಿರ್ವಹಿಸಿದ್ದಾರೆ.
ಸುಂಟಿಕೊಪ್ಪದ ಜಾವಮನೆ ಮುಸ್ತಫಾರವರ ಪುತ್ರ ಇರ್ಷಾದ್ ಮುಸ್ತಫಾ ಅವರು ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್‌ಗೆ ಪಾತ್ರರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಕೇರಳ ಗಡಿಯಲ್ಲಿ ಪೊಲೀಸರ ವಿರುದ್ಧ ಗುಂಡಿನ ಚಕಮಕಿ; ಮಾವೋವಾದಿಗಳೆಂದು ಶಂಕೆ
ಕೊಪ್ಪ ಗೇಟ್‌ನಲ್ಲಿ ಸ್ವಾಗತ ಈ ಟೂರ್ನಿಮೆಂಟ್‌ನಲ್ಲಿ ದೇಶಕ್ಕೆ ಬಂಗಾರದ ಪದಕಗಳನ್ನು ತಂದುಕೊಟ್ಟು ಕೊಡಗು ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿರುವ ಶಾಹೀಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಫಾ ಅವರು ನವೆಂಬರ್ 15ರಂದು ನವದೆಹಲಿಗೆ ಹಿಂತಿರುಗಿ ಬೆಂಗಳೂರು ಮೂಲಕ ಕೊಡಗಿನ ಹೆಬ್ಬಾಗಿಲು ಕೊಪ್ಪ ಗೇಟ್‌ಗೆ ಅಪರಾಹ್ನ 4.30ಕ್ಕೆ ತಲುಪಲಿದ್ದಾರೆ. ಅಲ್ಲಿಂದ ಸುಂಟಿಕೊಪ್ಪಕ್ಕೆ ಬೀಳ್ಕೊಡಲಾಗುವುದು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಕ್ರೀಡಾಭಿಮಾನಿಗಳು ಪಾಲ್ಗೊಳ್ಳುವಂತೆ ಮಡಿಕೇರಿ ತಾಲೂಕು ಅಧ್ಯಕ್ಷ ಅಶೋಕ್ ಆಳ್ವ,
ಕೋಶಾಧಿಕಾರಿ ಕಬೀರ್ ಅಹಮದ್ ಮನವಿ ಮಾಡಿದ್ದಾರೆ.