ಬರಗಾಲದ ಪರಿಸ್ಥಿತಿಯಲ್ಲಿ ಜನರಿಗೆ ಊರು ಬಿಡುವುದೊಂದೇ ದಾರಿ ಎಂಬ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದಿಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.
ಉತ್ತರ ಕರ್ನಾಟಕದ ರೈತರು ಗುಳೆ ಹೋಗುವುದನ್ನು ಟ್ವೀಟ್ ಮಾಡಿರುವ ಬಿಜೆಪಿ, “ಉತ್ತರ ಕರ್ನಾಟಕದ ರೈತರು ಗುಳೆ ಹೋಗುತ್ತಿದ್ದಾರೆ. ಬರ ಮತ್ತು ಸಾಲಬಾಧೆಯಿಂದ ಕಂಗೆಟ್ಟಿರುವ ರೈತ ಸಮುದಾಯಕ್ಕೆ ತಮ್ಮ ಜೀವ ಉಳಿಸಿಕೊಳ್ಳಲು ಈಗ ಊರು ಬಿಡುವುದೊಂದೇ ದಾರಿ ಎಂಬ ಪರಿಸ್ಥಿತಿ ತಂದಿಟ್ಟಿದೆ ಕಾಂಗ್ರೆಸ್ ಸರ್ಕಾರ” ಎಂದು ಕಿಡಿಕಾರಿದೆ.
ಉತ್ತರ ಕರ್ನಾಟಕದ ಜಾಗೀರು ಪಡೆದವರಂತೆ ವರ್ತಿಸುವ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಗಾಢ ನಿದ್ರೆಯಲ್ಲಿ ಬಿಟ್ಟು, ಸಾಮಾಜಿಕ ಜಾಲತಾಣ ಜಾಲಾಡುವುದರಲ್ಲೇ ವ್ಯಸ್ಥರಾಗಿದ್ದಾರೆ” ಎಂದು ವಾಗ್ದಾಳಿ ನಡೆಸಿದೆ.
ಉತ್ತರ ಕರ್ನಾಟಕದ ರೈತರು ಗುಳೆ ಹೋಗುತ್ತಿದ್ದಾರೆ.
ಬರ ಮತ್ತು ಸಾಲಬಾಧೆಯಿಂದ ಕಂಗೆಟ್ಟಿರುವ ರೈತ ಸಮುದಾಯಕ್ಕೆ ತಮ್ಮ ಜೀವ ಉಳಿಸಿಕೊಳ್ಳಲು ಈಗ ಊರು ಬಿಡುವುದೊಂದೇ ದಾರಿ ಎಂಬ ಪರಿಸ್ಥಿತಿ ತಂದಿಟ್ಟಿದೆ ಕಾಂಗ್ರೆಸ್ ಸರ್ಕಾರ.
ಉತ್ತರ ಕರ್ನಾಟಕದ ಜಾಗೀರು ಪಡೆದವರಂತೆ ವರ್ತಿಸುವ @PriyankKharge ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಗಾಢ… pic.twitter.com/vlsxABibLI
— BJP Karnataka (@BJP4Karnataka) November 16, 2023