ರಚಿನ್‌ ರವೀಂದ್ರ ರೀತಿ ಶ್ರೇಯಸ್‌ ಅಯ್ಯರ್‌ಗೂ ಕೂಡ ಇದೆ ಕರ್ನಾಟಕದ ನಂಟು

Date:

Advertisements

ನ್ಯೂಜಿಲೆಂಡ್ ದೇಶದ ಪರ ಅಮೋಘ ಪ್ರದರ್ಶನ ನೀಡಿರುವ ಆರಂಭಿಕ ಆಟಗಾರ ರಚಿನ್‌ ರವೀಂದ್ರ ಕರ್ನಾಟಕದ ಬೆಂಗಳೂರು ಮೂಲದವರೆಂದು ಕ್ರಿಕೆಟ್ ಪ್ರಿಯರಿಗೆ ಗೊತ್ತಾಗಿದೆ. ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ರೀತಿ ಸ್ಪೋಟಕ ಆಟವಾಡುತ್ತಿರುವ ಉದಯೋನ್ಮುಖ ಪ್ರತಿಭೆ ಶ್ರೇಯಸ್‌ ಅಯ್ಯರ್ ಅವರಿಗೂ ಕೂಡ ಕರ್ನಾಟಕದ ನಂಟಿದೆ.

ಈಗಾಗಲೇ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಹಾಗೂ ನೆದರ್ಲಾಂಡ್ಸ್‌ ವಿರುದ್ಧ ಸತತ ಎರಡು ಶತಕ ಹಾಗೂ ಟೂರ್ನಿಯಲ್ಲಿ ಮೂರು ಅರ್ಧ ಶತಕದೊಂದಿಗೆ 526 ರನ್‌ ಬಾರಿಸಿರುವ 28 ವರ್ಷದ ಶ್ರೇಯಸ್‌  ಮುಂಬೈನವರು ಎಂದು ಬಹುತೇಕರಿಗೆ ತಿಳಿದಿಲ್ಲ.

ಆದರೆ ಈ ಸ್ಫೋಟಕ ಆಟಗಾರನಿಗೆ ನಮ್ಮ ಕರ್ನಾಟಕದ ಸಂಬಂಧವಿರುವುದು ಹಲವರಿಗೆ ತಿಳಿದಿಲ್ಲ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಚೆಂಬೂರಿನಲ್ಲಿ ಜನಿಸಿರುವ ಶ್ರೇಯಸ್‌ ತಂದೆ ಸಂತೋಷ್ ಅಯ್ಯರ್ ಉದ್ಯಮಿಯಾಗಿದ್ದಾರೆ. ಕೇರಳದ ತ್ರಿಶೂರ್‌ ಮೂಲದವರಾದ ಇವರು ಹಲವು ವರ್ಷಗಳ ಹಿಂದೆಯೇ ಮುಂಬೈನಲ್ಲಿ ನೆಲೆಗೊಂಡಿದ್ದಾರೆ.

Advertisements

ಶ್ರೇಯಸ್‌ ಅವರ ತಾಯಿ ರೋಹಿಣಿ ಮೂಲತಃ ಮಂಗಳೂರಿನ ಕಿನ್ನಗೋಳಿಯವರು. ಸುಮಾರು ವರ್ಷಗಳ ಹಿಂದೆಯೆ ಉದ್ಯೋಗದ ನಿಮಿತ್ತ ತಮ್ಮ ಪೋಷಕರೊಂದಿಗೆ ಮುಂಬೈಗೆ ತೆರಳಿರುವ ರೋಹಿಣಿ ಅವರು ಸಂತೋಷ್ ಅಯ್ಯರ್ ಅವರೊಂದಿಗೆ ಪ್ರೇಮ ವಿವಾಹವಾಗಿ ಮುಂಬೈನ ಚೆಂಬೂರಿನಲ್ಲಿ ನೆಲಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಬೆಂಗಳೂರಿನ ತಮ್ಮ ಪೂರ್ವಜರ ಬಗ್ಗೆ ಮೆಲುಕು ಹಾಕಿದ ರಚಿನ್ ರವೀಂದ್ರ

ತುಳು ಚಿತ್ರವೊಂದರ ಪೋಸ್ಟರ್ ಬಿಡುಗಡೆಯ ಸಂಬಂಧ ಫೆಬ್ರವರಿಯಲ್ಲಿ ಮಂಗಳೂರಿಗೆ ಆಗಮಿಸಿದ್ದ ಶ್ರೇಯಸ್‌ ಅಯ್ಯರ್ ತಮ್ಮ ಮಂಗಳೂರಿನ ನಂಟಿನ ಬಗ್ಗೆ ಹೇಳಿಕೊಂಡಿದ್ದರು.

“ನನ್ನ ತಾಯಿ ಕೂಡ ತುಳುನಾಡಿನವರು. ಮಂಗಳೂರಿನ ಕಟೀಲು ಸಮೀಪದ ಕಿನ್ನಿಗೋಳಿಯವರು. ತಮ್ಮ ಕುಟುಂಬ ಆಗಾಗ ನನ್ನ ತಾಯಿಯ ಊರಿಗೆ ಆಗಮಿಸುವುದಿದೆ” ಎಂದು ಹೇಳಿದ್ದರು.

ನ್ಯೂಜಿಲೆಂಡ್ ದೇಶದ ಪರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಟವಾಡುತ್ತಿರುವ ರಚಿನ್ ರವೀಂದ್ರ ಅವರ ಪೋಷಕರು 90 ರ ದಶಕದಲ್ಲಿ ಕೆಲಸದ ನಿಮಿತ್ತ ನ್ಯೂಜಿಲೆಂಡ್‌ಗೆ ತೆರಳಿ ಸದ್ಯ ಅಲ್ಲಿನ ನಾಗರಿಕರಾಗಿದ್ದಾರೆ.

“ನಾನು ಬೆಂಗಳೂರಿಗೆ ಬಂದಾಗ ನನ್ನ ಪುರ್ವಜರಾದ ಅಜ್ಜ-ಅಜ್ಜಿಯವರ ಮನೆಗೆ ಭೇಟಿ ನೀಡುತ್ತೇನೆ. ಇಲ್ಲಿನ ದಿನಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ” ಎಂದು ರಚಿನ್‌ ರವೀಂದ್ರ ಹೇಳಿದರು.

ವಿಶ್ವಕಪ್‌ ಟೂರ್ನಿಯ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯಗಳು ಬೆಂಗಳೂರಿನಲ್ಲಿ ನಡೆದಿದ್ದ ಸಂದರ್ಭದಲ್ಲಿ ಉದ್ಯಾನ ನಗರಿಗೆ ಆಗಮಿಸಿದ್ದ ರಚಿನ್ ತಮ್ಮ ಅಜ್ಜಿ ತಾತನ ಮನೆಗೆ ಭೇಟಿ ನೀಡಿದ್ದರು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ

ಗೃಹಲಕ್ಷ್ಮೀ ಯೋಜನೆಯಡಿ ಮಂಗಳೂರು ತಾಲೂಕಿನಲ್ಲಿ ಪ್ರಸ್ತುತ  85044  ಫಲಾನುಭವಿಗಳು ನೋಂದಣಿಯಾಗಿದ್ದು, ಈವರೆಗೆ...

ದ.ಕ. | ಲಾರ್ವಾ ತಾಣಗಳು ಕಂಡುಬಂದರೆ ದಂಡ: ಮನಪಾ ಆಯುಕ್ತರ ಸೂಚನೆ

ಡೆಂಗ್ಯು ಜ್ವರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ಅದರ ನಿಯಂತ್ರಣ...

ಮಂಗಳೂರು | ಪಿಎಂ ಸ್ವನಿಧಿ ಸಾಲ ಯೋಜನೆ ಮುಂದುವರಿಸಲು ಒತ್ತಾಯಿಸಿ ಸಿಐಟಿಯು ಪ್ರತಿಭಟನೆ

ಬೀದಿಬದಿ ವ್ಯಾಪಾರಿಗಳ ಸ್ವಾವಲಂಬಿ ಬದುಕಿಗಾಗಿ ಜಾರಿ ಮಾಡಿದ್ದ ಪಿಎಂ ಸ್ವನಿಧಿ ಸಾಲ...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

Download Eedina App Android / iOS

X