“ದಕ್ಷಿಣ ಕನ್ನಡ, ಚಾಮರಾಜನಗರ ಜಿಲ್ಲೆಗಳಲ್ಲಿ ಶನಿವಾರ (ನ.18) ಸಾಧಾರಣ ಮಳೆಯಾಗಲಿದೆ” ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ಕರಾವಳಿಯ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಬೀಸುವ ಸಾಧ್ಯತೆಯಿದೆ ಎಂದು ಹೇಳಿದೆ.
ದಕ್ಷಿಣ ಒಳನಾಡು ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಕೂಡ ಒಣಹವೆ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಿಥಿಲಿ ಚಂಡಮಾರುತ
ಬಂಗಾಳಕೊಲ್ಲಿಯಲ್ಲಿ ಮಿಧಿಲಿ ಚಂಡಮಾರುತ ಉದ್ಭವಿಸಿದ್ದು, ಈಗ ಬಾಂಗ್ಲಾದೇಶದ ಕರಾವಳಿಯನ್ನು ತಲುಪಿದೆ. ನ.18 ರಂದು ಯಾವುದೇ ಸಮಯದಲ್ಲಿ ಚಂಡಮಾರುತ ಕರಾವಳಿ ದಾಟಬಹುದು. ‘ಮಿಥಿಲಿ’ ಚಂಡಮಾರುತದ ಪ್ರಭಾವದಿಂದಾಗಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಿಜೋರಾಂ ಮತ್ತು ತ್ರಿಪುರಾದ ನಾನಾ ಸ್ಥಳಗಳಲ್ಲಿ ನ.18 ರಂದು ಭಾರೀ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ಮಾಹೆಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನ. 18ರಂದು ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ದಕ್ಷಿಣ ಅಸ್ಸಾಂನಲ್ಲಿ ಪ್ರತಿ ಗಂಟೆಗೆ 30-40 ಕಿ.ಮೀ ನಿಂದ 50 ಕಿ.ಮೀ. ವೇಗದಲ್ಲಿ ಒಂದು ಗಂಟೆಯವರೆಗೆ ಜೋರಾದ ಗಾಳಿ ಬೀಸುವ ಸಾಧ್ಯತೆ ಇದೆ.
ಮಳೆ ಕೊರತೆ
ರಾಜ್ಯದಲ್ಲಿ ಇದುವರೆಗೆ ಶೇ. 35ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಮಳೆ ಕೊರತೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡದಲ್ಲಿ ಶೇ.9, ಮೈಸೂರಿನಲ್ಲಿ ಶೇ.49, ಕೊಡಗು ಶೇ.18, ಹಾಸನ ಶೇ.13ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಮಳೆ ಕೊರತೆ ಮುಂದುವರಿದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ₹1.26 ಕೋಟಿ ಮೌಲ್ಯದ ಚಿನ್ನ ವಶ
ಉಡುಪಿಯಲ್ಲಿ ಶೇ. 25, ಉತ್ತರ ಕನ್ನಡ ಶೇ. 19, ಬೆಂ. ಗ್ರಾಮಾಂತರ ಶೇ. 16, ಬಳ್ಳಾರಿಯಲ್ಲಿ ಶೇ. 86, ರಾಯಚೂರು, ಯಾದಗಿರಿ ಶೇ. 82, ಬಾಗಲಕೋಟೆ ಶೇ. 85, ವಿಜಯಪುರ ಶೇ. 77, ಬೀದರ್ ಶೇ. 79, ಕಲಬುರಗಿ, ಹಾವೇರಿ ತಲಾ ಶೇ. 64, ಧಾರವಾಡ ಶೇ. 60, ಬೆಳಗಾವಿ ಶೇ. 79, ಕೋಲಾರ ಜಿಲ್ಲೆಯಲ್ಲಿ ಶೇ. 57ರಷ್ಟು ಮಳೆ ಕೊರತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.