ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಗೆ ಔರಾದ್ ತಾಲೂಕಿನ ಕೌಡಗಾಂವ್ ಸರ್ಕಾರಿ ಪ್ರೌಢ ಶಾಲೆಯ ಪ್ರೀತಿ ಚಂದ್ರಕಾಂತ ಮತ್ತು ಸುಶೀಲಕುಮಾರ ಅಮರ ಆಯ್ಕೆಯಾಗಿದ್ದಾರೆ. ನ. 25 ರಂದು ಗದಗ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬೀದರ ನಗರದ ಎಸ್.ಎಸ್.ಕೆ ಸಭಾಂಗಣದಲ್ಲಿ ಪ್ರೌಢ ಶಾಲಾ ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಯುವ ಸಂಸತ್ತು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೀದರ ಜಿಲ್ಲೆಯ 5 ತಾಲೂಕಿನ ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭಾಪತಿ, ಮುಖ್ಯಮಂತ್ರಿ, ಸಂಪುಟ ಸಚಿವರು, ವಿರೋಧ ಪಕ್ಷದ ನಾಯಕ, ಆಡಳಿತ ಪಕ್ಷದ ಶಾಸಕ, ವಿರೋಧ ಪಕ್ಷದ ಶಾಸಕ ಹೀಗೆ ಸುಮಾರು 12 ವಿದ್ಯಾರ್ಥಿಗಳು ಪಾತ್ರ ನಿರ್ವಹಿಸಿ ಉತ್ತಮವಾಗಿ ವಿಷಯ ಮಂಡಿಸಿ ಸಮಯ ಪ್ರಜ್ಞೆ, ಧೈರ್ಯ ತೋರಿದರು.
ದೈನಂದಿನ ಸಮಸ್ಯೆಗಳಾದ ಆರೋಗ್ಯ, ಶಿಕ್ಷಣ, ಪೌರ ಕಾರ್ಮಿಕರ ಸಮಸ್ಯೆ, ಸಾರಿಗೆ ಸಮಸ್ಯೆ, ಅರಣ್ಯ ರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಭಾಗವಹಿಸಿದ 12 ಮಕ್ಕಳಲ್ಲಿ ಮುಖ್ಯಮಂತ್ರಿಯಾಗಿ ಪ್ರೀತಿ ಚಂದ್ರಕಾಂತ, ವಿರೋಧ ಪಕ್ಷದ ನಾಯಕನಾಗಿ ಅಜಯಕುಮಾರ ಆನಂದ, ಆರೋಗ್ಯ ಮಂತ್ರಿಯಾಗಿ ಸುಶಿಲಕುಮಾರ ಅಮರ್, ಅರಣ್ಯ ಮಂತ್ರಿಯಾಗಿ ಮಹಾಂತೇಶ ಚಂದ್ರಕಾಂತ, ಶಿಕ್ಷಣ ಮಂತ್ರಿಯಾಗಿ ಗಣೇಶ ದತ್ತಾತ್ರಿ ಹಾಗೂ ಸಾರಿಗೆ ಮಂತ್ರಿಯಾಗಿ ಕಾವ್ಯ ಸಂಜುಕುಮಾರ ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾಮಾಜಿಕ ಅಸಮಾನತೆ ನಿವಾರಣೆಗೆ ಅಂಬೇಡ್ಕರ್ ಕೊಡುಗೆ ಅಪಾರ : ಪ್ರೇಮಸಾಗರ ದಾಂಡೇಕರ್
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಇಸಿಓ ಸಂಜಪ್ಪ ಮಾಣೂರೆ ಮತ್ತು ಶಿಕ್ಷಕ ಉಮೇಶ ದುಬಲಗುಂಡಿ, ಗೋಪಾಲರಾವ ಪಡವಳಕರ ಹಾಗೂ ಹುಡಗೆ ಗುಂಡಪ್ಪಾ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.