ಬೆಂಗಳೂರು | ಬಸವ ತತ್ವದ ಮೇಲಿನ ದಾಳಿ ಖಂಡಿಸಿ ನ.22ಕ್ಕೆ ಸಭೆ; ಜಾಗತಿಕ ಲಿಂಗಾಯತ ಮಹಾಸಭಾ ಕರೆ

Date:

Advertisements

ಬಸವ ತತ್ವದ ಮೇಲೆ ಮುಂದುವರೆದ ದಾಳಿ ವಿರೋಧಿಸಿ ನ. 22ರ ಬೆಳಗ್ಗೆ 11ಕ್ಕೆ ಕರ್ನಾಟಕದ ಪ್ರಜ್ಞಾವಂತರ ಅನುಭವ ಮಂಟಪ ವೇದಿಕೆ ವತಿಯಿಂದ ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಪ್ರಗತಿಪರರು ಮತ್ತು ಬಸವಪರ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ವಿನಂತಿ ಮಾಡಿದೆ.

“ಗಣೇಶ ಪೂಜೆ ನಮ್ಮ ಸಂಸ್ಕೃತಿಯಲ್ಲ’’ ಎಂದು ಸಾಣೇಹಳ್ಳಿ ಮಠಾಧೀಶರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ಟರು ಅಸಭ್ಯ ಮತ್ತು ಅವಮಾನಕರವಾದ ಭಾಷೆಯಲ್ಲಿ ಹೇಳಿಕೆ ಕೊಟ್ಟು ಬರಹಗಳನ್ನು ಪ್ರಕಟಿಸಿದ್ದನ್ನು ಮತ್ತು ಪ್ರಶಾಂತ್ ಸಂಬರಗಿಯವರು ಸ್ವಾಮಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಿರುವುದನ್ನು ವಿರೋಧಿಸಿ ನಡೆದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನವೆಂಬರ್‌ 02ರಂದು ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಯದಲ್ಲಿ ಶಿವಧ್ವಜಾರೋಹಣ ಮಾಡಿ ತಮ್ಮ ಆಶೀರ್ವಚನ ನೀಡಿದ ಸಾಣೇಹಳ್ಳಿ ಮಠಾಧೀಶರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು “ವೇದಿಕೆ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಗಣೇಶನನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ. ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು. ಗಣಪತಿಯನ್ನು ಸ್ತುತಿಸುವುದು ಮೌಢ್ಯದ ಆಚರಣೆ, ವಚನಗಳನ್ನು ಪ್ರಸ್ತುತಪಡಿಸುವುದು ನಿಜವಾದ ಪ್ರಾರ್ಥನೆ ಎಂದು ಹೇಳಿದ್ದರು.

Advertisements

ಕಾರ್ಯಕ್ರಮಗಳ ಆರಂಭದಲ್ಲಿ ವಚನಗಳನ್ನೂ ಹಾಡಬಹುದೆಂದು ತೋರಿಸಿದವರು ಶಿವಕುಮಾರ ಸ್ವಾಮೀಜಿ ಎಂದು ತಿಳಿಸಿದ್ದರು. ಅಲ್ಲದೆ, ಶರಣರ ಪ್ರಕಾರ ಸ್ವಸಾಮರ್ಥ್ಯ, ಉತ್ತಮ ನಡವಳಿಕೆ ಹೊಂದಿದವರೇ ನಿಜವಾದ ದೇವರು. ನಮ್ಮನ್ನು ನಾವು ನಂಬಬೇಕು. ಶರಣರ ಆಶಯಗಳಂತೆ ಬದುಕಬೇಕು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಅಗತ್ಯವೆಂದು ಬಸವ ಅನುಯಾಯಿಗಳಿಗೆ ಮತ್ತು ಲಿಂಗಾಯತ ಧರ್ಮೀಯರಿಗೆ ಅರಿವು ಮೂಡಿಸುವ ಮತ್ತು ಶರಣರ ಹಾಗೂ ಅವರು ರಚಿಸಿದ ವಚನ ಸಾಹಿತ್ಯದ ಆಶೋತ್ತರಗಳನ್ನು ಪಾಲಿಸಲು ಕರೆಕೊಟ್ಟಿದ್ದರು.

ಶ್ರೀಗಳು ಶರಣ ಸಮೂಹಕ್ಕೆ ಕೊಟ್ಟ ಕರೆಯನ್ನು ತಪ್ಪಾಗಿ ಅರ್ಥೈಸಿ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ಟರು “ಉಪದ್ವ್ಯಾಪಿ, ಅನರ್ಥಕಾರಿ ಹೇಳಿಕೆ, ದೇವರ ಗೊಡವೆಗೆ ಹೋಗಬೇಡಿ, ಎಡಬಿಡಂಗಿ ಹೇಳಿಕೆ, ಚಲಾವಣೆಗೆ ಬರಲು ಈ ತರಹದ ಹೇಳಿಕೆ, ನಾಟಕ ಮಾಡಿಕೊಂಡಿರಿ” ಎಂಬಿತ್ಯಾದಿ ಅಸಭ್ಯ ಮತ್ತು ಕೀಳು ಅಭಿರುಚಿಯ ಶಬ್ದಗಳನ್ನು ಉಪಯೋಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ವಿಶ್ವವಾಣಿ ದಿನಪತ್ರಿಕೆಯಲ್ಲಿ ಬರಹಗಳನ್ನು ಪ್ರಕಟಿಸುವುದರ ಜೊತೆಗೆ ಮತ್ತೊಬ್ಬ ತಾನೇ ಅಪ್ಪಟ ಹಿಂದೂ ಕಾರ್ಯಕರ್ತನೆಂದು ಹೆಳಿಕೊಳ್ಳುವ ಪ್ರಶಾಂತ ಸಂಬರಗಿ ಎನ್ನುವವರು ಸ್ವಾಮಿಗಳ ವಿರುದ್ಧ ಅನಗತ್ಯ ಪೊಲೀಸ್ ದೂರು ದಾಖಲಿಸಿ ಸಾಣೇಹಳ್ಳಿ ಶ್ರೀಗಳಿಗೆ ಜೀವ ಭಯವನ್ನು ಉಂಟುಮಾಡುವ ಉದ್ಧಟತನ ಮಾಡಿದ್ದು, ಈ ಇಬ್ಬರೂ ಮಹನೀಯರಿಗೆ ಲಿಂಗಾಯತ ಧರ್ಮದ ತತ್ವಾದರ್ಶಗಳ ಅರಿವು ಇದ್ದಂತಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ತಿಳಿಸಿದೆ.

ಲಿಂಗಾಯತರ ಶಿವನಿಗೂ ಹಿಂದೂ ಧರ್ಮದಲ್ಲಿನ ಶಿವನಿಗೂ ಇರುವ ಮೂಲ ವ್ಯತ್ಯಾಸವೇ ತಿಳಿದಿಲ್ಲ ಮತ್ತು ತಿಳಿಯುವ ಪ್ರಯತ್ನವನ್ನೂ ಮಾಡದೆ ತಮಗೆ ತಿಳಿದಂತೆ ಹಾಗೂ ಮನಬಂದಂತೆ ಹೇಳಿಕೆ, ಅಂಕಣ ಬರಹ ಮತ್ತು ದೂರದರ್ಶನದಲ್ಲಿ ಹೇಳಿಕೆ ಕೊಡುವುದರ ಮೂಲಕ ಬಸವ ತತ್ವಾಧಾರಿತ ಲಿಂಗಾಯತ ಧರ್ಮದ ಗುರುಗಳಾದ ಹಾಗೂ ತಮ್ಮ ಧರ್ಮ ಪ್ರಸಾರದಲ್ಲಿ ತೊಡಗಿದ್ದ ಸಾಣೇಹಳ್ಳಿ ಮಠದ ಮಠಾಧೀಶರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಘನತೆಗೆ ಕುಂದುಂಟು ಮಾಡಿದ್ದು, ಸಾರ್ವಜನಿಕವಾಗಿ ಅವಮಾನಿಸಲಾಗಿದೆ. ಅವರು ಹೇಳದ ಮತ್ತು ಹೇಳಿದ ಮಾತುಗಳನ್ನು ತಿರುಚುವುದರ ಮೂಲಕ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಕ್ರೋಶ ಹೊರಹಾಕಿದೆ.

ಧರ್ಮಗಳ ಮಧ್ಯೆ ವೈಮನಸ್ಯ ಉಂಟಾಗುವಂತೆ ಪ್ರೇರೇಪಣೆ ಮಾಡುವ ಪ್ರಯತ್ನ ಮಾಡಿದ್ದು, ಇವೆಲ್ಲವುಗಳ ಹೊರತಾಗಿ ಸಾಂವಿಧಾನಿಕ ಹಕ್ಕಾಗಿರುವ ತಮ್ಮ ಧರ್ಮದ ಪ್ರಚಾರದಲ್ಲಿದ್ದ ಸ್ವಾಮೀಜಿಗಳಿಗೆ ಅಡಚಣೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಲಿಂಗಾಯತ ಧರ್ಮೀಯರು ಹಾಗೂ ಬಸವತತ್ವ ಅನುಯಾಯಿಗಳು ಘಾಸಿಗೊಂಡಿದ್ದಾರೆ. ಹಾಗಾಗಿ ನಾವುಗಳು ಇವರ ಹೇಳಿಕೆ ಮತ್ತು ಬರಹಗಳನ್ನು ಖಂಡಿಸುವುದರ ಜೊತೆಗೆ ವಿಶ್ವೇಶ್ವರ ಭಟ್ಟರು ಮತ್ತು ಪ್ರಶಾಂತ ಸಂಬರಗಿ ಅವರುಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ದೇವದಾಸಿ ತಾಯಂದಿರು ಸಾಮಾಜಿಕ ನ್ಯಾಯ ಪಡೆಯಲು ಮುಂದಾಗಬೇಕು: ಫಾ. ತಿಯೋಳ ಮಾಚ್ಯಾದ

“ಒಂದು ಧರ್ಮದ ಗುರುಗಳಿಗೆ ಅವಮಾನ ಮಾಡುವುದರ ಮೂಲಕ ಇಡೀ ಲಿಂಗಾಯತ ಸಮಾಜಕ್ಕೆ ಹಾಗೂ ಬಸವತತ್ವಕ್ಕೆ ಮಾಡಿರುವ ಇವರ ಈ ನಡವಳಿಕೆಯ ಮೇಲೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.

ಅಧ್ಯಕ್ಷರು ಪ್ರೊ. ವೀರಭದ್ರಯ್ಯ, ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಬೇವೂರ, ಕಾರ್ಯದರ್ಶಿ ನಾಗೇಂದ್ರಪ್ಪ ಕಲ್ಬುರ್ಗಿ, ಸಂಘಟನಾ ಕಾರ್ಯದರ್ಶಿ ಕೃಪಾಶಂಕರ್, ಸಂಚಾಲಕರು ಶಿವಕುಮಾರ ಸ್ವಾಮಿ ಸಿ ಎ, ಖಜಾಂಚಿ ರೇಣುಕಯ್ಯ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X