ಶಿವಮೊಗ್ಗ | ಸಮಾಜದಲ್ಲಿ ಅರಿವಿನ ಮೌಲ್ಯಗಳನ್ನು ಎತ್ತಿ ಹಿಡಿಯೋ ಕೆಲಸವಾಗಬೇಕು: ಲೇಖಕ ಯೋಗೇಶ್‌ ಮಾಸ್ಟರ್‌

Date:

Advertisements

ಪ್ರಸ್ತುತ ಸಮಾಜದಲ್ಲಿ ವಿದ್ಯಾವಂತರು ಸುಮ್ಮನೆ ಕೂರಬಾರದು. ಸಮಾಜದಲ್ಲಿ ಅರಿವಿನ ಮಾದರಿ ಮೌಲ್ಯಗಳನ್ನು ಎತ್ತಿ ಹಿಡಿಯೋ ಕೆಲಸವಾಗಬೇಕು. ಸಮಾಜದಲ್ಲಿ ವಸ್ತುವನ್ನು ಬಳಸಬೇಕು, ವ್ಯಕ್ತಿ ಅಂದರೆ ಮನುಷ್ಯರನ್ನು ಪ್ರೀತಿಸುವ ಕೆಲಸವಾಗಬೇಕು ಎಂದು ಸಾಹಿತಿ ಮತ್ತು ಲೇಖಕ ಯೋಗೇಶ್‌ ಮಾಸ್ಟರ್‌ ಹೇಳಿದರು.

ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಸಂಜೆ ನಡೆದ ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮೊಹಮ್ಮದ್, ಪ್ರವಾದಿ ಪ್ರವಚನ, ಸಿರತ್ ಪ್ರವಚನ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ನಾವು ಜನರನ್ನು ಬಳಸಿಕೊಳ್ಳುವ ಹಕ್ಕು ಹೊಂದಿಲ್ಲ. ಹಾಗೆಯೇ ಧರ್ಮ ಯಾವುದೇ ಇರಲಿ ರಾಮ ಅನ್ನಲಿ, ಅಲ್ಲಾಹ್ ಅನ್ನಲಿ ಪ್ರೇಮದಿಂದ ಹೇಳಿ ಎಂದು ಪ್ರವಾದಿ ಹೇಳಿದ್ದಾರೆ” ಎಂದು ಸ್ಮರಿಸಿದರು.

Advertisements

“ಪ್ರಸ್ತುತ ನಮಗೆ ಬೇಕಿರೋದು ಪ್ರೀತಿ, ಶಾಂತಿಯ ಸಮಾಜ, ಕೋಮು ದ್ವೇಷ ಬೇಡ. ಇದೊಂದು ಶಾಪಗ್ರಸ್ತ ಸಮಾಜ ಹಾಗಾಗಿ ಜೀವನದ ಕೊನೆಯವರೆಗೂ ಅರಿವು ಹಂಚಿಕೊಳ್ಳಲು ಸಿದ್ದವಿರಬೇಕೆಂದು ಪ್ರವಾದಿ ಹೇಳುತ್ತಾರೆ” ಎಂದು ಪ್ರವಾದಿ ವಿಚಾರ ಧಾರೆ ನೆನಪಿಸಿದರು.

“ಧರ್ಮ ಎನ್ನುವುದು ಅರ್ಥ ಸನ್ಮಾರ್ಗ ಅಷ್ಟೇ, ಅದು ಉಪನಿಷತ್ ಆಗಿರಬಹುದು, ಅಲ್ಲಮ ಆಗಿರಬಹುದು, ಪ್ರವಾದಿ ಪೈಗಂಬರ್ ಎಲ್ಲರೂ ಕೂಡ ಸನ್ಮಾರ್ಗದಲ್ಲಿ ನಡೆಯರಿ ಎಂದೇ ಹೇಳಿದ್ದಾರೆ. ಪ್ರಸ್ತುತ ಯುದ್ಧ ಅನ್ನುವುದು ಒಂದು ದಂಧೆಯಾಗಿದೆ. ಇಲ್ಲಿ ಸಾವು ನೋವಿಗೆ ಬೆಲೆ ಇಲ್ಲವೆಂದು ಪ್ರವಾದಿ ಹೇಳುತ್ತಾರೆ. ಎಷ್ಟು ಸ್ಥಾನ ಮಾನ ಎಷ್ಟು ಸಂಪಾದನೆ ಇದ್ದರೂ ಅರಿವು ಇಲ್ಲವಾದಲ್ಲಿ ಅದು ವ್ಯರ್ಥ, ಯಾರು ಸದ್ವಿನಿಯೋಗ ಮಾಡುತ್ತಾರೋ ಅಂತಹವರಲ್ಲಿ ಅಸೂಯೆ ಇರುವುದಿಲ್ಲವೆಂದು ಪ್ರವಾದಿ ಹೇಳುತ್ತಾರೆ. ನಾವು ವಿಷ ತಿಂದು ಬೇರೆ ಅವರು ಸಾಯಲಿ ಎಂದು ಬಯಸುವುದು ದುರದೃಷ್ಟ ಸಂಗತಿ” ಎಂಬ ಒಂದು ಉದಾಹರಣೆ ನೀಡುತ್ತಾ ಮಾತನಾಡಿದರು.

“ನೀನು ಬಾಳು ಬೇರೆ ಅವರಿಗೆ ಬದಕಲು ಬಿಡು. ನೆಮ್ಮದಿಯಿಂದ ಬದುಕಿ ಮುಂದಿನ ಪೀಳಿಗೆಗೆ ಒಂದು ಉತ್ತಮ ದಾರಿ ಮಾಡಿಕೊಡಬೇಕೇ ಹೊರತು ಮುಂದಿನ ಪೀಳಿಗೆ ನರಳುವಂತೆ, ಶಪಿಸುವಂತೆ ಆಗಬಾರದು” ಎಂದರು.

ಪ್ರವಾದಿ ವಿಚಾರ ಧಾರೆ ಮತ್ತು ಪ್ರಸ್ತುತ ಹಿಂದೂಸ್ತಾನಿಗೆ ಹೇಗೆ ಹೋಲಿಕೆಯಾಗುತ್ತೆ ಎನ್ನುವುದನ್ನು ಸಿಂಧು ಭೈರವಿ ರಾಗ ಅರೇಬಿಯಾದ ಪ್ರವಾದಿ ಕವಿತೆಯಲ್ಲಿ ಬರುವ ಒಂದು ಪ್ರಸಂಗ ವಿವರಿಸುತ್ತ ಅರೇಬಿಯಾದ ಪ್ರವಾದಿ ಗೀತೆಯಿಂದ ಇದು ಬಂದಿದೆ ಎಂದು ಉಲ್ಲೆಕಿಸಿದರು.

ಸಮಾಜದಲ್ಲಿ ಶಾಂತಿ ಸೌಹಾರ್ದದ ಬಗ್ಗೆ ವಿವರಿಸಿ ಪ್ರವಾದಿಯ ಬಗ್ಗೆ ಸ್ವತಃ ಮಾಸ್ಟರ್ ಅವರೇ ರಚಿಸಿರುವ ಗೀತೆ ಹೇಳುವ ಮೂಲಕ ಮಾತನ್ನು ಮುಗಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ.ಶುಭ ಮರವಂತೆ ಮಾತನಾಡಿ, ಯೋಗೇಶ್ ಮಾಸ್ಟರ್ ಮತ್ತು ಮೊಹಮ್ಮದ್ ಮಹಮದ್ ಕುಂಞ ಮತ್ತು ಪತ್ರಿಕಾ ಮಾಧ್ಯಮ ಮಿತ್ರರಿಗೆ ಸ್ವಾಗತ ಕೋರುತ್ತಾ ಜಮಾತೆ ಇಸ್ಲಾಮಿ ಹಿಂದ್ ಇವರಿಂದ ಒಳ್ಳೆಯ ಕಾರ್ಯಕ್ರಮ ಮೂಡಿಬರುತ್ತಿದ್ದೂ ಹೀಗೆ ಮುಂದುವರಿಯಲಿ ಎಂದರು.

ಸೌಹಾರ್ದತೆ ಬಗ್ಗೆ ಮಾತಾಡುತ್ತ “ಗಾಂಧಿ, ಬುದ್ಧ, ಬಸವ, ಪೈಗಂಬರ್ ಪ್ರತಿಯೊಬ್ಬರೂ ಒಳ್ಳೆಯದನ್ನೇ ಹೇಳಿದ್ದು, ಕುವೆಂಪು ಅವರೂ ಕೂಡ ಸಮಾಜದಲ್ಲಿ ಎಲ್ಲರು ಜಾತಿ ಧರ್ಮ ಬದಿಗೊತ್ತಿ ಎಲ್ಲರೂ ಒಂದಾಗಿ ಬಾಳಬೇಕೆಂದು ಹೇಳಿದ್ದಾರೆ. ಕುವೆಂಪು ಅವರು ನಮ್ಮ ಜಿಲ್ಲೆಯವರು ಇಂತಹ ನೆಲ ನಮ್ಮದು ಎಂಬದು ಹೆಮ್ಮೆ ಹಾಗೂ ಸಂತೋಷ” ಎಂದರು.

“ಪ್ರವಾದಿಯವರು ಸಮಾಜದಲ್ಲಿ ಅನೇಕ ಸುಧಾರಣೆ ತಂದರು. ಇಸ್ಲಾಂ ಎಂದರೆ ಅರ್ಥ ಶಾಂತಿ. ಬಾಲ್ಯದಲ್ಲಿ ತಂದೆ ತಾಯಿ ಕಳೆದುಕೊಂಡು ಅನೇಕ ನೋವು ದುಃಖಗಳ ನಡುವೆ ಜಗತ್ತಿಗೆ ಸೌಹಾರ್ದತೆ ಸಾರಿದ ವ್ಯಕ್ತಿ ಎಂದರೆ ಪ್ರವಾದಿಯವರು ಮಾತ್ರ” ಎಂದರು.

“ಬಸವಣ್ಣ ಮತ್ತು ಪ್ರವಾದಿಯವರ ಚಿಂತನೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬಹಳಷ್ಟು ಹೋಲಿಕೆ ಸಾಮರಸ್ಯವಿದೆ. ಪ್ರವಾದಿ ಅವರದ್ದು ಸರಳ ವಿನಮ್ರ ವ್ಯಕ್ತಿತ್ವ. ಅವರ ಸಾರ ಸಂದೇಶ ತಿಳಿದರೆ ಸಮಾಜದಲ್ಲಿ ಶಾಂತಿ ನೆಲಸುವುದು. ನಾವು ನಮ್ಮ ಮನಸಿನ ಗೋಡೆಯಿಂದ ಆಚೆ ಬರಬೇಕು. ಇಸ್ಲಾಂ ಸಾರದಲ್ಲಿ ಬಡವರು ನಿರ್ಗತಿಕರಿಗೆ ಒಂದು ಒಳ್ಳೆ ಕೆಲಸ ಮಾಡಬೇಕೆಂಬ ಪ್ರೇರಣೆ ನೀಡುತ್ತದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಹಮ್ಮದ್ ಕುಂಞ ಮಾತನಾಡಿ, “ಸಮಾಜದಲ್ಲಿ ಪ್ರವಾದಿ ಹೇಳಿರೋದು ಬುದ್ದಿವಂತರು, ಜ್ಞಾನಿಗಳು ಸುಮ್ಮನೆ ಇರಬಾರದು. ಸಮಾಜವನ್ನು ಎಚ್ಚರಿಸುವ ಕೆಲಸವಾಗಬೇಕು, ಯಾಕೆಂದರೆ ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ” ಎಂದರು.

“ಬದುಕು ಬಹಳ ಪವಿತ್ರ ಮತ್ತು ಜವಾಬ್ದಾರಿ. ಹಾಗಾಗಿ ಎಚ್ಚರ ಬಹಳ ಮುಖ್ಯ. ಹಾಗೆಯೇ ಅಪರಿಚಿತ ಅನ್ಯಾಯ ಯಾವುದೇ ಭೇದ ಭಾವ, ಸಂಘರ್ಷ ಇರಬಾರದು. ಇದಕ್ಕೆ ಒಂದು ಉದಾಹರಣೆ ನೀಡುತ್ತಾ ನಮ್ಮಲ್ಲಿ ನಾವೇ ಗೆರೆ ಎಳೆದುಕೊಂಡಿದ್ದೇವೆಯೇ ಹೊರತು ದೇವರಲ್ಲ. ಹಾಗಾಗಿ ಮನುಷ್ಯ ಸಂಬಂಧ ಬಹಳ ಶ್ರೇಷ್ಠ ಮತ್ತು ಮುಖ್ಯ” ಎಂದರು.

“ಯೋಗೇಶ್ ಮಾಸ್ಟರ್ ಅವರ ʼನನ್ನ ಅರಿವಿನ ಪ್ರವಾದಿʼ ಪುಸ್ತಕ ಅತ್ಯುತ್ತಮ ಪುಸ್ತಕ. ಸಮಾಜದಲ್ಲಿ ಮೌಲ್ಯ ಎತ್ತಿ ಹಿಡಿಯುವ ಕರ್ತವ್ಯ ವಾಗಬೇಕೆಂಬ ಸಂದೇಶ ಸಂತಸ ತಂದಿದೆ. ಡಾ. ಶುಭ ಮರವಂತೆ ಅವರು ಸಮಾಜದಲ್ಲಿ ಅರಿವು ಮತ್ತೆ ಸಾಮಾಜಿಕ ಜವಾಬ್ದಾರಿ ಬಗ್ಗೆ ಸುಂದರ ವಿಚಾರಗಳನ್ನು ತಿಳಿಸಿರುವುದು ಸಂತಸ ತಂದಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿದ್ಯಾರ್ಥಿಗಳು ಕನ್ನಡದ ಕಥೆ-ಕಾದಂಬರಿ ಓದಬೇಕು: ಶಾಸಕ ಎಂ. ಕೃಷ್ಣಪ್ಪ

“ಪ್ರವಾದಿಯವರು ಪ್ರೀತಿಯಿಂದ ಬದುಕುವುದನ್ನು ಕಲಿಸಿದರು. ಪ್ರವಾದಿಯವರ ಕಾಲದಲ್ಲಿ ಮಹಿಳೆಯರಿಗೆ ಸ್ಥಾನಮಾನ ಹೆಚ್ಚಾಗಿತ್ತು. ನಮಾಜ಼್ ಮಾಡಲು ಅವಕಾಶವಿತ್ತು. ಮಹಿಳೆ ಎಂದರೆ ವ್ಯಾಪಾರದ ವಸ್ತು ಅಲ್ಲ, ಗಂಡಸಿನ ಬಯಕೆ ತೀರಿಸುವ ವ್ಯಕ್ತಿಯೂ ಅಲ್ಲ, ಮಹಿಳೆಯರಿಗೂ ಸ್ಥಾನ ಮಾನ ಮತ್ತು ಕಡ್ಡಾಯ ಶಿಕ್ಷಣ ಇದೆಯೆಂದು ಪ್ರವಾದಿ ಅವರು ಮಾದರಿ ಸಮಾಜ ಕಟ್ಟಿ ತೋರಿಸಿದವರು” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X