ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಬರದ ನಡುವೆಯೂ ಬೆಳೆದಿದ್ದ ಅಲ್ಪಸ್ವಲ್ಪ ಬೆಳೆಯೂ ಆನೆ ದಾಳಿಯಿಂದ ಹಾಳಾಗಿದೆ. ತುರ್ತಾಗಿ ರೈತರಿಗೆ ಪರಿಹಾರದ ವ್ಯವಸ್ಥೆ ಮಾಡಬೇಕೆಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯ ನಾಯ್ಕ್ ಆಗ್ರಹಿಸಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಂಜರಿಕೊಪ್ಪ, ಮಲೆ ಶಂಕರ, ಸಂಪಿಗೆ ಹಳ್ಳ, ತಮ್ಮಡಿ ಹಳ್ಳಿ, ಎರೆಬಿಸು ಗ್ರಾಮಗಳಿಗೆ ಭೇಟಿ ನೀಡಿ ಆನೆ ದಾಳಿಗೆ ತುತ್ತಾಗಿರುವ ಬೆಳೆಹಾನಿ ಸ್ಥಳ ಪರಿಶೀಲಿಸಿ ಮಾತನಾಡಿದರು.
ಅದೇ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಕರೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸರ್ಕಾರ ರೈತರ ಸಮಸ್ಯೆಯನ್ನು ಪೂರ್ಣವಾಗಿ ಅಲಕ್ಷಿಸಿದೆ: ಅಲ್ಕೋಡ್ ಹನುಮಂತಪ್ಪ
ಈ ಸಂದರ್ಭದಲ್ಲಿ ತಮಡಿಹಳ್ಳಿ ಪಂಚಾಯತ್ ಅಧ್ಯಕ್ಷ ಪ್ರಕಾಶ್, ಮಲೆ ಶಂಕರದ ನಾರಾಯಣ ಗೌಡ್ರು ಹಾಗೂ ಕುಂಸೆ ಬಸಪ್ಪ ಸೇರಿದಂತೆ ಇತರರು ಇದ್ದರು.