ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಈ ಹಿಂದಿನ ರಾಜ್ಯ ಸರ್ಕಾರ ಜಾರಿಗೊಳಿಸಿದ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ, ಪರ್ಯಾಯ ಜನಪರ ನೀತಿಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿ ನವೆಂಬರ್ 26ರಿಂದ 28ರವರೆಗೆ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಅಖಿಲ ಭಾರತ ಜಂಟಿ ಕಾರ್ಮಿಕ ಸಂಘಗಳ (ಜೆಸಿಟಿಯು) ನೇತೃತ್ವದಲ್ಲಿ ರಾಜಭವನ್ ಚಲೋ ಮಹಾಧರಣಿ ನಡೆಸಲಾಗುವುದು ಎಂದು ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಂಚಾಲಕ ಕೆ ಜಿ ವಿರೇಶ ಹೇಳಿದರು.
ರಾಯಚೂರಿನ ಅಂಬೇಡ್ಕರ್ ಸರ್ಕಲ್‌ನಲ್ಲಿ ಪ್ರಾಂಚಾರಾಂದೋಲನಾ ಅಂಗವಾಗಿ ಹೋರಾಟದ ಪೋಸ್ಟ್‌ರ್ ಮತ್ತು ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
“2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಮೋದಿ ಸರ್ಕಾರ ಆಕ್ರಮಣಕಾರಿಯಾಗಿ ಅನುಸರಿಸುತ್ತಿರುವ ಕಾರ್ಪೊರೇಟ್‌ಪರ ಧೋರಣೆಗಳು ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ಹಾಗೂ ದೇಶ ವಿರೋಧಿಯಾಗಿವೆ. ಇಂತಹ ವಿದ್ವಾಂಸಕ ಹಾಗೂ ವಿನಾಶಕಾರಿ ನೀತಿಗಳಿಂದ ಜನತೆಯನ್ನು ರಕ್ಷಿಸಿ ದೇಶವನ್ನು ಉಳಿಸುವ ಸಲುವಾಗಿ ಜಂಟಿ ಹಾಗೂ ಪರಸ್ಪರ ಸಹಭಾಗಿತ್ವದ ಘೋಷಣೆಯನ್ನು ಎಸ್‌ಕೆಎಂ ಮತ್ತು ಜೆಸಿಟಿಯು ರಾಷ್ಟ್ರ ಮಟ್ಟದಲ್ಲಿ ಹೋರಾಟಕ್ಕೆ ಕರೆ ನೀಡಿದೆ” ಎಂದರು.
“ಹೋರಾಟಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಹಾಗೂ ವಿಧ್ಯಾರ್ಥಿ ಯುವಜನರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಈ ನೀತಿಗಳನ್ನು ಕೈ ಬಿಡಲು ಒತ್ತಾಯಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕಾರ್ಖಾನೆಯಿಂದ ಉದ್ಯೋಗ ಸಿಕ್ಕಿಲ್ಲವೆಂದು ಭೂಮಿ ನೀಡಿದ್ದ ರೈತ ಆತ್ಮಹತ್ಯೆ
ಈ ಸಂದರ್ಭದಲ್ಲಿ ಹೆಚ್ ಪದ್ಮಾ, ಮಲ್ಲನಗೌಡ, ಪ್ರಭಾಕರ್ ಪಾಟೀಲ್, ಬೂದೆಯ್ಯ ಸ್ವಾಮಿ, ಖಾಜಾ ಅಸ್ಲಂ, ಕರಿಯಪ್ಪ ಅಚ್ಚೋಳಿ, ಡಿ ಎಸ್ ಶರಣಬಸವ, ಅಣಪ್ಪ, ಮಹೇಶ್, ಶ್ರೀನಿವಾಸ ಕಲವಲದೂಡ್ಡಿ, ಬಸವಲಿಂಗ ಹಟ್ಟಿ, ವರಲಕ್ಷ್ಮೀ, ಅಂಜಿನೇಯ್ಯ ಕುರುಬದೂಡ್ಡಿ, ಮಾರೆಪ್ಪ ಹರವಿ, ದಾಸ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು.
ವರದಿ : ಹಫೀಜುಲ್ಲ