ಸತ್ತು ಹೋಗಿದ್ದೇನೆ ಎಂದು ಎಲ್ಲರನ್ನು ನಂಬಿಸಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಸದ್ಯ ಸಿಸಿಬಿ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.
ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ರೌಡಿ. ಈತ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್.
ಈ ರೌಡಿಶೀಟರ್ ಮಲ್ಲಿ ಕಾಡುಬೀಸನಹಳ್ಳಿ ಸೋಮನ ಡ್ರೈವರ್ ಕೊಲೆ ಪ್ರಕರಣದ ಆರೋಪಿಯಾಗಿದ್ದನು. ಜತೆಗೆ, ರಾಜಾನುಕುಂಟೆಯಲ್ಲಿ ನಡೆದ ಇನ್ನೊಂದು ಕೊಲೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದನು.
ಕೊಲೆ ಮಾಡಿದ ನಂತರ ಕಳೆದ ಎರಡು ವರ್ಷಗಳಿಂದ ಈತ ತಾನು ಸತ್ತಿರುವುದಾಗಿ ಎಲ್ಲರನ್ನು ನಂಬಿಸಿ ಪೊಲೀಸರಿಂದ ತಲೆಮರೆಸಿಕೊಂಡಿದ್ದನು.
ಈತನ ಬಗ್ಗೆ ಆತನ ಮನೆಯವರ ಬಳಿ ಪೊಲೀಸರು ವಿಚಾರಿಸಿದಾಗ ಆತ ಸತ್ತಿದ್ದಾನೆ ಎಂದು ದಾಖಲೆಗಳನ್ನು ತೋರಿಸುತ್ತಿದ್ದರು. ಇನ್ನು ಆತನ ಗೆಳೆಯರು ಮತ್ತು ಪರಿಚಯಸ್ಥರನ್ನು ವಿಚಾರಿಸಿದಾಗಲೂ ಕೂಡಾ ಅವರು ಸತ್ತಿದ್ದಾನೆ ಎಂದು ಹೇಳುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿರುವವರ ಬಳಿ ದೊರೆತ ಕೆಜಿ ಚಿನ್ನ
ಅನುಮಾನಗೊಂಡ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದರು. ಬಳಿಕ, ಊರೂರು ಸುತ್ತಾಡಿಕೊಂಡು ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನನ್ನು ಪತ್ತೆ ಮಾಡಿದ್ದಾರೆ.