2022ನೇ ಸಾಲಿನ ‘ಡಾ. ಎಚ್. ಗಿರಿಜಮ್ಮ ಪ್ರಶಸ್ತಿ’ಗೆ ಡಾ. ಕೆ.ಸುಶೀಲಾ ಅವರ ‘ವೈದ್ಯೆಯೊಬ್ಬರ ನೆನಪಿನಂಗಳದಿಂದ’ ಹಾಗೂ ಡಾ. ಪ್ರೇಮಲತಾ ಬಿ. ಅವರ ‘ಐದು ಬೆರಳುಗಳು’ ಕಥಾಸಂಕಲನ ಆಯ್ಕೆಯಾಗಿವೆ.
ಡಾ. ಗಿರಿಜಮ್ಮ ಪ್ರಶಸ್ತಿಗೆ 2022ರಲ್ಲಿ ಪ್ರಕಟವಾದ ವೈದ್ಯ ಸಾಹಿತ್ಯ ಮತ್ತು ವೈದ್ಯೇತರ ಸಾಹಿತ್ಯ ವಿಭಾಗದಿಂದ ಕೃತಿಗಳನ್ನು ವೈದ್ಯಲೇಖಕಿಯರಿಂದ ಆಹ್ವಾನಿಸಲಾಗಿತ್ತು.
ಈ ಪ್ರಯುಕ್ತ ರಾಜ್ಯಾದ್ಯಂತ ಸಾಕಷ್ಟು ಕೃತಿಗಳು ಬಂದಿದ್ದು ಅಂತಿಮವಾಗಿ ವೈದ್ಯ ಸಾಹಿತ್ಯದಿಂದ ಡಾ.ಕೆ.ಸುಶೀಲಾ ಅವರ ‘ವ್ಯದ್ಯೆಯೊಬ್ಬರ ನೆನಪಿನಂಗಳದಿಂದ’ ಹಾಗೂ ವೈದ್ಯೇತರ ಸಾಹಿತ್ಯ ವಿಭಾಗದಿಂದ ಡಾ. ಪ್ರೇಮಲತಾ ಬಿ ಅವರ ‘ಐದು ಬೆರಳುಗಳು’ ಕಥಾ ಸಂಕಲನ ಕೃತಿಗಳು ಆಯ್ಕೆಯಾಗಿವೆ. 25,000ರೂ. ನಗದು ಮತ್ತು ಸ್ಮರಣ ಫಲಕಗಳನ್ನು ಪ್ರಶಸ್ತಿಯು ಒಳಗೊಂಡಿರುತ್ತದೆ.
ಆಯ್ಕೆ ಸಮಿತಿಯಲ್ಲಿ ಹಿರಿಯ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಮತ್ತು ವೈದ್ಯರಾದ ಡಾ. ಆರ್.ಕೆ.ಸರೋಜ, ಡಾ. ನಾ.ಸೋಮೇಶ್ವರ ಹಾಗೂ ಹಿರಿಯ ಕವಯಿತ್ರಿ ಡಾ. ಎಚ್.ಎಲ್.ಪುಷ್ಪ ಇದ್ದು ತೀರ್ಪುಗಾರರಾಗಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 9, ಶನಿವಾರ ಸಂಜೆ 05:00ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಂದ್ರಶೇಖರ್ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.