ಶಿವಮೊಗ್ಗ | ಉರ್ದು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಹಿತ್ಯ ಕಮ್ಮಟ

Date:

Advertisements

ಭದ್ರಾವತಿ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಹಿತ್ಯ ಕಮ್ಮಟವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಂಯುಕ್ತಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ, ಕಾರ್ಯಕ್ರಮದ ಗಣ್ಯರೆಲ್ಲರು ತಾಯಿ ಭುವನೇಶ್ವರಿಗೆ ದೀಪಾ ಹಚ್ಚುವುದರ ಮೂಲಕ ಕಾ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನೀವು ನಿಮ್ಮ ಮಾತೃ ಭಾಷೆ ಉರ್ದುವನ್ನ ಮೊದಲು ಪ್ರೀತಿಸಬೇಕು. ಯಾರೇ ಆದರೂ ಮೊದಲಿಗೆ ತಮ್ಮ ಮಾತೃ ಭಾಷೆಗೆ ಪ್ರೀತಿಸಬೇಕು. ಮಾತೃ ಭಾಷೆಯನ್ನ ಯಾರು ಸಮರ್ಪಕವಾಗಿ ಅರ್ಥಮಾಡಿಕೊಳ್ಳುತ್ತಾರೋ ಅವರು ಇತರ ಎಲ್ಲಾ ಭಾಷೆ ಕಲಿಯೋದು ಸುಲಭವಾಗುತ್ತೆ. ಈ ಕನ್ನಡ ರಾಜ್ಯೋತ್ಸವದಂದು ಒಂದು ಪಣವನ್ನು ತೋಡುವುದುರ ಮೂಲಕ ಮಾತೃ ಭಾಷೆಯೊಂದಿಗೆ, ಕನ್ನಡವನ್ನು ಕೂಡ ನಮ್ಮ ಮಾತೃಭಾಷೆಯಂತೆ ಪ್ರೀತಿಸಬೇಕು. ಕನ್ನಡಕ್ಕೆ ಅಭಿಮಾನ ಕರ್ನಾಟಕಕ್ಕೆ ಗೌರವವನ್ನ ಕೊಡಬೇಕು ಎಂದರು.

Advertisements

ಅನೇಕ ಉರ್ದು ಕವಿಗಳು, ಶಿಶುನಾಳ ಶರೀಫ್, ಕೆ.ಎಸ್. ನಿಸಾರ್ ಅಹಮದ್ ಆಗಿರಬಹುದು ಮತ್ತು ಕೆ.ಎಸ್. ನರಸಿಂಹಸ್ವಾಮಿ ಆಗಿರಬೋದು ಹಾಗೇ ಈಗಿನ ಹಂಪಿ ವಿಶ್ವವಿದ್ಯಾಲಯದ ರೆಹಮತ್ ತರೀಕೆರೆ ಇರಬಹುದು. ಹೀಗೆ, ಅನೇಕ ಸಾಧು ಸಂತರು, ಕವಿಗಳು, ಉರ್ದು ಮಾತೃಭಾಷೆ ಆದರೂ, ಕನ್ನಡದಲ್ಲಿ ಸಾಧನೆ ಮಾಡಿದ್ದಾರೆ. ನಾವು ಕೂಡ ಇವರ ಆದರ್ಶವನ್ನು ಪ್ರೇರಣೆಯಾಗಿಸಿಕೊಂಡು ಕನ್ನಡದಲ್ಲಿ ಸಾಧಿಸ ಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಹಸೀನಾ ಸಂಶೋಧನಾ ಉಪನ್ಯಾಸಕರು ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ, ಇವರು ಮಾತನಾಡಿ, 19ನೇ ಶತಮಾನದ ಸಂತ ಖಾದರಿ ಪಿರ ಇವರು ಉತ್ತರ ಕರ್ನಾಟಕದವರು ಇವರ ಕನ್ನಡದ ಬಗ್ಗೆ ಅಭಿಮಾನದ ಕುರಿತು ಜಾನಪದದಲ್ಲಿ ಇಂದಿಗೂ ಇದೆ ಎಂದು ಸ್ಮರಿಸಿಕೊಂಡರು, ಇವರು ಚತುರವರ್ಣ ವ್ಯವಸ್ಥೆ ಆಗಿರಬಹುದು, ಹಿಂದೂ ಮುಸಲ್ಮಾನ್ ಬಾಂಧವ್ಯ ಕುರಿತು ಹೀಗೆ ಅನೇಕದರ ಬಗ್ಗೆ ಖಾದರಿ ಪಿರ ಅವರು ಹೇಳಿರೋದನ್ನ ನೆನಪಿಸಿಕೊಂಡರು. ಆದರೆ ಇಂದು ನಮಗೆ ಕನ್ನಡ ಸರಿಯಾಗಿ ಮಾತಾಡಕ್ಕೆ ಬರದಿರುವುದು ದುರದೃಷ್ಟ ಎಂದು ಬೇಸರ ವ್ಯಕ್ತಪಡಿಸುತ್ತ, ಹಿಂದಿನ ಕಾಲದಿಂದಲೂ ಕನ್ನಡದ ವೈಭವ ಶ್ರೀಮಂತಿಕೆ ಕುರಿತು, ತತ್ವಪದಗಳಲ್ಲಿ, ವಚನಗಳಲ್ಲಿ ಶ್ರೇಷ್ಠನು ಶ್ರೇಷ್ಠ ವಾಕ್ಯಗಳನ್ನ ಕೊಟ್ಟಿದ್ದಾರೆ.

ನಾವೆಲ್ಲ ಕನ್ನಡ ನಾಡಿನಲ್ಲಿ ಹುಟ್ಟಿದಮೇಲೆ ಕನ್ನಡ ಮಾತಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಮತ್ತೆ ಬಸವಣ್ಣರವರ ವಚನ ಮತ್ತು ಅಕ್ಕಮಹಾದೇವಿಯವರ ವಚನ, ಕನಕದಾಸರ ಕೀರ್ತನೆ,ಆಲೂರ್ ವೆಂಕಟರಾಯರ ಕರ್ನಾಟಕದ ಗತ ವೈಭವ , ಕರ್ನಾಟಕ ಏಕೀಕರಣ ಚಳುವಳಿ, ಹೀಗೆ ಅನೇಕ ವಿಚಾರಗಳನ್ನು ಸ್ಮರಿಸುತ್ತ ವಿದ್ಯಾರ್ಥಿಗಳಿಗೆ ವಚನಗಳನ್ನು ಉದಾಹರಣೆಯಾಗಿ ನೀಡಿದರು. ಎಲ್ಲರಿಗೂ ಶುಭವಾಗಲಿ ಈ ಶಾಲೆಯ ಕೀರ್ತಿ ಎಲ್ಲಡೆ ಹರಡುವಂತೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಡಿ. ಮಂಜುನಾಥ್ ಮಾತನಾಡಿ, ನಾವು ಪ್ರತಿನಿತ್ಯ ನಾಡಗೀತೆ ಹೇಳುವಾಗ ಸಾರ್ವಜನಾಂಗದ ಶಾಂತಿಯ ತೋಟ ಎಂದು ಹೇಳುತ್ತೇವೆ ಸಾರ್ವಜನಾಂಗದ ಶಾಂತಿಯ ತೋಟ ಆಗಬೇಕು ಎಂದರೆ ಪರಸ್ಪರ ಒಬ್ಬರಿಗೊಬ್ಬರು ಆಗಬೇಕು, ಕನ್ನಡ ಗೊತ್ತಿಲದವರಿಗೆ ಕನ್ನಡ ಹೇಳಿ ಕಲಿಸುವ ಕೆಲಸವಾಗಬೇಕು. ಮಕ್ಕಳೇ ಭವಿಷ್ಯದ ಭಾರತ. ನಾವು ಪ್ರತಿದಿವಸ ಪ್ರತಿಯೊಂದು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಬೋಧನೆಯನ್ನ ಮಾಡಿ ಮೌಲ್ಯಮಾಪನ ಮಾಡಿ ಸರಿ ತಪ್ಪುಗಳನ್ನ ಮಕ್ಕಳಿಗೆ ತಿಳಿಸಿ ತಿದ್ದುವ ಕಲಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ಶಾಸಕ ಸಂಗಮೇಶ್ ಅವರು ಸಹೋದರ, ಜಗನ್ನಾಥ ಮಾತನಾಡಿ ಮಕ್ಕಳಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅರಿವು ಮೂಡಿಸುವ ಕೆಲಸ. ಒಂದು ಒಳ್ಳೆಯ ಕಾರ್ಯಕ್ರಮ. ತುಂಬಾ ಸಂತೋಷ ತಂದಿದೆ. ಇದು ನಮ್ಮ ರಾಜ್ಯ ಭಾಷೆ, ಆಡಳಿತ ಭಾಷೆ, ಎಲ್ಲರೂ ಕೂಡ ಇದನ್ನು ಕಡ್ಡಾಯವಾಗಿ ಕಲಿಯಬೇಕು. ವಿದ್ಯಾರ್ಥಿಗಳಿಗೆ ಇದರಿಂದ ಮುಂದಿನ ದಿನಗಳಲ್ಲಿ ಬಹಳಷ್ಟು ಅನುಕೂಲವಾಗಲಿದೆ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಸುಧಾಮಣಿ, ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯ ಶಿಕ್ಷಕರು ಶಹನಾ ಫಾತಿಮಾ, ಹಳೆನಗರದ ಮೌಲಾನಾ ಆಜಾದ್ ಮಾದರಿ ಶಾಲೆ ಮುಖ್ಯ ಶಿಕ್ಷಕ ಅನಿಲ್.ಪಿ. ಯು, ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು ಕೋಕಿಲಾ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ರೇವಣಪ್ಪ‌ ಕಾರ್ಯಕ್ರಮದಲ್ಲಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X