ಚಳ್ಳಕೆರೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಬರುತ್ತಿದ್ದ ಪತ್ನಿ ಮೇಲೆ ಪತಿಯೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚೆನ್ನಮ್ಮನಾಗತಿಹಳ್ಳಿ ಗ್ರಾಮದ 30ವರ್ಷದ ಕುಮಾರ್, ಆತನ ಪತ್ನಿ ಆಶಾ (25) ಕಳೆದ ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ಎರಡು ವರ್ಷದ ದಾಂಪತ್ಯ ಜೀವನ ನಡೆಸಿದ ನಂತರ ದಾಂಪತ್ಯದಲ್ಲಿ ಒಡಕು ಮೂಡಿ ಹೆಂಡತಿ ಆಶಾ, ವಿವಾಹ ವಿಚ್ಚೇದನಕ್ಕೆ ಕೋರ್ಟ್ ಮೊರೆ ಹೊಗಿದ್ದರು.
ನ.24ರಂದು ವಿಚ್ಛೇದನ ಮೊಕದ್ದಮೆ ಸಂಭಂದ ಚಳ್ಳಕೆರೆ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ, ಮುಂಜಾನೆ ಬಸ್ ನಿಲ್ದಾಣದಲ್ಲಿ ಆಶಾ ಬಸ್ ನಿಂದು ಇಳಿದು ಬರುತ್ತಿದ್ದ. ಈ ವೇಳೆ ಕಾದು ಕುಳಿತಿದ್ದ ಗಂಡ ಕುಮಾರ್ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಹಲ್ಲೆಗೊಳಗಾದ ಆಶಾ ತಲೆಗೆ ಮತ್ತು ಕೈಗೆ ತೀವ್ರ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು. ಸಾವು ಬದುಕಿನ ಮದ್ಯೆ ಹೋರಾಟ ನಡೆಸಿದ್ದ ಆಕೆಯನ್ನು ನಂತರ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ..
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಕಾರ್ಯಪ್ರವೃತ್ತರಾದ ಚಳ್ಳಕೆರೆ ಪೊಲೀಸರು ಆರೋಪಿ ಗಂಡನನ್ನು ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡೆದಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ತನಿಖೆ ನಂತರ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.