ಭಾರತೀಯ ಸಂಸ್ಕೃತಿಯ ಮೇಲೆ ಅತ್ಯಂತ ಪ್ರಭಾವ ಬೀರಿರುವ ಏಕೈಕ ಭಾಷೆ ಕನ್ನಡ. ಕನ್ನಡಕ್ಕಿಂತ ಪ್ರಾಚೀನವಾಗಿರುವ ಸಂಸ್ಕೃತ, ಪ್ರಾಕೃತ, ತಮಿಳು ಭಾಷೆಗಳು ಕೂಡ ಕನ್ನಡದಷ್ಟು ಪ್ರಭಾವ ಬೀರಿಲ್ಲ ಎಂದು ಶಿಕ್ಷಕ, ಸಾಹಿತಿ ಶಿವಲಿಂಗ ಹೇಡೆ ಅಭಿಪ್ರಾಯಪಟ್ಟರು.
ಔರಾದ ಪಟ್ಟಣದ ಅಮರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಕಂಪು ಕಾರ್ಯಕ್ರಮದಲ್ಲಿ ʼಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗಳʼ ಕುರಿತು ವಿಶೇಷ ಉಪನ್ಯಾಸ ನೀಡಿದರು.
“ರಾಮಾಯಣ, ಮಹಾಭಾರತ ಕಾಲದಿಂದಲೂ ಕನ್ನಡ ಭಾಷೆಯಿದೆ. ಅಶೋಕನ ಅನೇಕ ಶಾಸನಗಳು ಕನ್ನಡ ನೆಲದಲ್ಲಿ ದೊರಕಿವೆ. ಗ್ರೀಕ್ ಪ್ರಹಸನಗಳಲ್ಲಿ ಕನ್ನಡ ಶಬ್ದಗಳಿವೆ. ರಾಷ್ಟ್ರಕೂಟ, ಚಾಲುಕ್ಯರ ಕಾಲದಲ್ಲಿ ಕನ್ನಡ ನಾಡು ಅರ್ಧಭಾರತ ಭಾಗವನ್ನು ಒಳಗೊಂಡಿತ್ತು. ಕನ್ನಡಿಗರ ಸರಳ ಜೀವಿ, ಕಲೋಪಾಸಕರು ಆಗಿದ್ದಾರೆ. ಆದರೆ ಇಂದು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿದ್ದೇವೆ” ಎಂದು ವಿಷಾದ ವ್ಯಕ್ತಪಡಿಸಿದರು.
ಔರಾದ ಕಸಾಪ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಮೂಲಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,”ಅನ್ಯ ಭಾಷೆ ನಾವು ಕಲಿಯುತ್ತೇವೆ, ಹೊರತು ಅನ್ಯ ಭಾಷಿಕರಿಗೆ ಕನ್ನಡ ಭಾಷೆ ಕಲಿಸುವ ಕೆಲಸ ಮಾಡುವುದಿಲ್ಲ. ಅನ್ಯ ಭಾಷಿಕರಿಗೆ ಕನ್ನಡ ಭಾಷೆ ಕಲಿಸುತ್ತೇವೆಂದು ಇಂದೇ ಸಂಕಲ್ಪ ಮಾಡಬೇಕು” ಎಂದು ನುಡಿದರು.
ಕಸಾಪ ಅಧ್ಯಕ್ಷ ಡಾ.ಶಾಲಿವಾನ ಉದಗಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ತಾಲೂಕು ಕಸಾಪ ಸಂಚಾಲಕ ಅಶೋಕ ಶೆಂಬೆಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅನಾಥ ಮಕ್ಕಳ ತಂಗುದಾಣ ವಿರುದ್ಧ ಪ್ರಕರಣ ದಾಖಲು
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಸತೀಶ ಸಿಂಧೆ, ಉಪನ್ಯಾಸಕರಾದ ಎಂ.ಡಿ.ಅಜಮ್, ಕಸಾಪ ಯುವ ಘಟಕದ ಅಧ್ಯಕ್ಷ ಅಂಬದಾಸ ನೇಳಗೆ ಸೇರಿದಂತೆ ಪ್ರಮುಖರಾದ ಅನಿಲ ಮೇತ್ರೆ, ಶಿವಕುಮಾರ ಪಾಟೀಲ ಹಾಗೂ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.