ಭಾರತ ವಿಶ್ವಕಪ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಪನೌತಿ ಎಂಬ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ. ಪನೌತಿ ಎಂದರೇ ಅಪಶಕುನ ಎಂದರ್ಥ. ಚಂದ್ರಯಾನ ವಿಫಲವಾದಾಗ ಕಾಂಗ್ರೆಸ್‌ನವರು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪನೌತಿ ಎಂದು ಕರೆದಿದ್ದರು. ಇದೀಗ, ನಟ ಕಿಶೋರ್ ಅವರು ”ಪನೌತಿಯಿಂದ ಸೋಲುವುದು ಎಷ್ಟು ಸುಳ್ಳೊ, ಜೈಶ್ರೀರಾಮನಿಂದ ಗೆಲ್ಲುವುದೂ ಅಷ್ಟೇ ಸುಳ್ಳು” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಪರ ಮತ್ತು ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ. ”ಇಂದಿನ ವ್ಯವಸ್ಥೆಯ ವ್ಯಂಗ್ಯವೇನೆಂದರೆ ಸಜ್ಜನರ ಆಟ ಎಂದು ಕರೆಯಲ್ಪಡುವ ಕ್ರಿಕೆಟ್‌ನಲ್ಲೂ, ಪ್ರೇಕ್ಷಕರನ್ನು ಜೈ ಶ್ರೀರಾಮ್ ಎಂದು ಧಾರ್ಮಿಕ ಘೋಷಣೆಗಳನ್ನು ಕೂಗುವ ಮಟ್ಟಕ್ಕೆ ತಂದಿಟ್ಟವರು ಪನೌತಿಯ ಪ್ರಭಾವವನ್ನೂ ಹೆಗಲಿಗೇರಿಸಿಕೊಳ್ಳಲೇಬೇಕು” ಎಂದು ನಟ ಹುಲಿ ಕಿಶೋರ್ ಕುಮಾರ್ ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಮರು ನೇಮಕ
”ಹೊಲಸು ಧರ್ಮಾಂಧ ರಾಜಕಾರಣದಿಂದ ಮೂಢನಂಬಿಕೆಯ ಕೂಪದಲ್ಲಿ ತಳ್ಳಲ್ಪಟ್ಟು ಮೂರ್ಖರಾದ ನಾವು ತಿಳಿದುಕೊಳ್ಳಬೇಕಿರುವುದು ನಿಜವಾದ ಪನೌತಿ ಈ ದೇಶವನ್ನು ವಿನಾಶದಂಚಿಗೆ ತಳ್ಳುತ್ತಿರುವ ಧರ್ಮಾಂಧತೆ, ಮೂಢನಂಬಿಕೆ, ಬಡತನ, ಅಸಮಾನತೆ, ನಿರುದ್ಯೊಗ ಮತ್ತು ಭ್ರಷ್ಟಾಚಾರಗಳು ಎಂದು” ಎಂದು ಹೇಳಿದ್ದಾರೆ.
Bang On👍
What is the relation between panauti, sriram and cricket total nonsense
ನಿಮ್ಮ ಅನಿಸಿಕೆ ಪ್ರಕಾರ ಧರ್ಮಾಂಧತೆ ಹಿಂದೂಗಳಲ್ಲಷ್ಟೆ ಇದೆಯೋ ಹೇಗೆ?
ನಮ್ಮಲ್ಲಿ ಇದ್ದಕ್ಕಿದ್ದಾಗೆ ಉದ್ಬವ ಮೂರ್ತಿಗಳಾಗಿ ತಮಗೆ ತೋಚುದಂಗೆ ಹೇಳೋಕೆ ಶುರುಮಾಡುತ್ತಾರೆ ಅವರ ಬಗ್ಗೆ ತಾತ್ಸಾರ ಮನೋಬಾವ ಬೆಳಸಿಕೊಳ್ಳಬೇಕು ಯಾಕೆಂದ್ರೆ ಇವರೆಲ್ಲ ದೇಶಕ್ಕೆ ಅಥವಾ ಮಾನವ ಕುಲಕ್ಜೆ ಒಳೇಯದನ್ನ ಬಯಸೋರಲ್ಲ ಮತ್ತು ನಾವು ಅಪೇಕ್ಷಿಸಲೂ ಬಾರದೂ
Only we as Hindus face such troublesome ideologies because they too want to be popular. Make same statements with others and you will be nowhere
ನಿಮ್ಮ ಕುರುಡು ವಿಶ್ಲೇಷಣೆಯ ಪ್ರಕಾರ ಶ್ರೀರಾಮ ದೇವರನ್ನು ಪ್ರಾರ್ಥಿಸುವುದು ಕುರುಡು ನಂಬಿಕೆಯಾಗಿದ್ದರೆ ಮತ್ತೇನು ಕುರುಡು ನಂಬಿಕೆ ಅಲ್ಲ? ಒಂದು ಗಾದೆ ಇದೆ “ಒಳ್ಳೆಯ ಬಟ್ಟೆ ಧರಿಸಿದ ಮೂರ್ಖ ಮಾತನಾಡುವವರೆಗೂ ಸ್ಮಾರ್ಟ್ ಆಗಿ ಕಾಣುತ್ತಾನೆ” ನೀವು ಆ ಗಾದೆಗೆ ಸರಿಹೊಂದುತ್ತೀರಿ.
ಅವಕಾಶಗಳು ಕಡಿಮೆ ಆದಾಗ ಈ ತರಹ ಹೇಳಿಕೆ ಕೊಟ್ಟು ಮತ್ತೆ ಅವಕಾಶಗಳನ್ನು ಪಡೆಯುವದು ಈಗ ಸಾಮಾನ್ಯ ಆಗಿದೆ..ಈ ಮೂಡನು ಇದೆ ಸಾಲಿಗೆ ಸೇರುತ್ತಾನೆ.. ಧರ್ಮದ ಆಧಾರದ ಮೇಲೆ ಹುಟ್ಟಿರುವ ಪಾಕಿಸ್ತಾನ್ ಇಸ್ಲಾಮಿಕ್ ರಾಷ್ಟ್ರ ಆಗಿದೆ..ಭಾರತ ಹಿಂದೂ ರಾಷ್ಟ್ರ ಏಕೆ ಆಗಬಾರದು?