ಅತಿಥಿ ಉಪನ್ಯಾಸಕರ ಸೇವೆ ಕಾಯಂಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವಿಜಯಪುರ ಜಿಲ್ಲಾ ಘಟಕದಿಂದ ತರಗತಿಗಳನ್ನು ಬಹಿಷ್ಕರಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಮಹದೇವ್ ಮುರುಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಡಬ್ಬಿ, ಕಾಲೇಜುಗಳ ಅತಿಥಿ ಉಪನ್ಯಾಸಕರಾಗಿ ಸುಮಾರು 10-15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸೇವಾ ಭದ್ರತೆ ಒದಗಿಸಬೇಕು. ಎಲ್ಲ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಒಳಗಾಗಿ ಈಡೇರಿಸದಿದ್ದರೆ, ಅಧಿವೇಶನದ ಸಂದರ್ಭದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಘದ ಗೌರವಾಧ್ಯಕ್ಷ ಡಾ. ಆನಂದ ಕುಲಕರ್ಣಿ, ಡಾ. ಎಸ್.ಐ. ಎಂಬತ್ತಾನಾಳ, ಆರ್.ಬಿ. ನಾಗರೆಡ್ಡಿ, ಎಸ್.ಡಿ. ಬಿರಾದಾರ್, ಮುಜಾವರ್, ಐ. ಆರ್. ಎರನಾಳ, ಎಸ್.ಎಸ್. ಅಂಗಡಿ, ಶಿವಕುಮಾರ್ ಬಿ.ಯು, ಅರ್ಜುನ್ ಲಂಬಾಟೆ, ಜಿ.ಕೆ. ಯೋಗೇಶ್, ಎಂ. ವೀರೇಶ್, ಡಾಕ್ಟರ್ ರಮೇಶ್ ತೇಲಿ, ಭೀಮರಾಯ ಡವಳೇಶ್ವರ್, ಕೆ.ಎಂ. ರಾಠೋಡ್, ಎಸ್ ಎಂ ಸಿಂಹಸನಮಟ, ರೂಪ ಕಮದಾಳ, ದೀಪಾ ಶ್ರೀ ತೋರಟ, ಲೀಲಾ ವಿಟಿ, ಶಕೀರ ಕಿತ್ತೂರ, ರೇಣುಕಾ ಹೆಬ್ಬಾಳ್, ತೇಜಸ್ವಿನಿ ಇತರರಿದ್ದರು.