ಶಬರಿಮಲೆಗೆ ತೆರಳುವ ಭಕ್ತರು/ಪ್ರಯಾಣಿಕರ ಅನುಕೂಲಕ್ಕಾಗಿ ಡಿ.1 ರಿಂದ ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೆ) ಮಾರ್ಗದಲ್ಲಿ ವೋಲ್ವೊ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತಿಳಿಸಿದೆ.
ಬೆಂಗಳೂರು ಕೇಂದ್ರಿಯ ವಿಭಾಗದ ವತಿಯಿಂದ ಈ ಬಸ್‌ಗಳು ಕಾರ್ಯಾಚರಣೆ ನಡೆಸಲಿದ್ದು, ಡಿ.1ರಿಂದ ಬಸ್‌ಗಳ ಸಂಚಾರ ಆರಂಭವಾಗಲಿದೆ. ಬೆಂಗಳೂರು –ನಿಲಕ್ಕಲ್ (ಪಂಪಾ-ಶಬರಿಮಲೆ) ವೋಲ್ವೋ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 1.50ಕ್ಕೆ ಹೊರಟು, ಮರುದಿನ ಬೆಳಿಗ್ಗೆ 6.45ಕ್ಕೆ ನೀಲಕ್ಕಲ್ ತಲುಪುತ್ತದೆ.
ಈ ಸುದ್ದಿ ಓದಿದ್ದೀರಾ? ಶಿವಾಜಿನಗರ | ಕುಸಿದುಬಿದ್ದ ಬಿಬಿಎಂಪಿ ನರ್ಸರಿ ಶಾಲೆ ಕಟ್ಟಡ; 80 ಮಕ್ಕಳು ಅಪಾಯದಿಂದ ಪಾರು
ಅದೇ ದಿನ ಸಂಜೆ 6ಕ್ಕೆ ನೀಲಕ್ಕಲ್‌ದಿಂದ ಮತ್ತೊಂದು ಬಸ್ ಹೊರಟು ಮರುದಿನ ಬೆಳಿಗ್ಗೆ 10ಕ್ಕೆ ಬೆಂಗಳೂರು ತಲುಪುತ್ತದೆ. ಪ್ರಯಾಣ ದರ ವಯಸ್ಕರಿಗೆ ₹1,600 ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.