ರಾಯಚೂರು | ಭತ್ತದ ಇಳುವರಿ ಕುಸಿತ; ಎಪಿಎಂಸಿಯಲ್ಲಿ ನೆರೆ ರಾಜ್ಯಗಳ ರೈತರ ಪಾರುಪತ್ಯ

Date:

Advertisements

ರಾಯಚೂರು ಜಿಲ್ಲೆಯಲ್ಲಿ ಭತ್ತದ ಇಳುವರಿ ಕುಸಿದಿರುವ ಕಾರಣದಿಂದ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರು ನಗರದ ರಾಜೇಂದ್ರ ಗಂಜ್‌ ಮಾರುಕಟ್ಟೆಯಲ್ಲಿ ಒಂದೇ ದಿನ ದಾಖಲೆಯ 66 ಸಾವಿರ ಚೀಲ ಭತ್ತ ಮಾರಾಟ ಮಾಡಿ ಉತ್ತಮ ಲಾಭ ಪಡೆದಿದ್ದಾರೆ.

ರಾಯಚೂರಿನ ಎಪಿಎಂಸಿಗೆ ಕಳೆದೊಂದು ವಾರದಿಂದ ಭತ್ತದ ಆವಕ ಹೆಚ್ಚಿದೆ. ಜಿಲ್ಲೆಯ ಭತ್ತದ ನಾಡು ಸಿಂಧನೂರು ತಾಲೂಕುವೊಂದರಲ್ಲೇ ಸುಮಾರು 5,600 ಎಕರೆ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ. ಕಟಾವಿಗೂ ಮುನ್ನವೇ ಕ್ವಿಂಟಾಲ್‌ಗೆ ₹3,000ದಿಂದ ₹3,200 ದರವಿದೆ. ಎಪಿಎಂಸಿಯಲ್ಲಿ 66,145 ಚೀಲ ಮಾರಾಟವಾಗಿ ದಾಖಲೆ ಮೂಡಿಸಿದೆ. ಕಳೆದ ಎರಡ್ಮೂರು ದಿನಗಳಿಂದಲೂ 56 ಸಾವಿರ ಕ್ವಿಂಟಾಲ್‌ ಭತ್ತ ಆವಕವಾಗಿದೆ.

ರಾಯಚೂರು ಎಪಿಎಂಸಿಯಲ್ಲಿ ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶದ ರೈತರದ್ದೇ ಪಾರುಪತ್ಯ ಎನ್ನುವಂತಾಗಿದೆ. ಜಿಲ್ಲೆಯ ಸಿಂಧನೂರು, ಸಿರವಾರ, ಮಾನ್ವಿ, ರಾಯಚೂರು ತಾಲೂಕುಗಳಲ್ಲೂ ಅಲ್ಲಲ್ಲಿ ಭತ್ತದ ಕಟಾವು ನಡೆದಿದ್ದು, ಉತ್ತಮ ಬೆಲೆ ಇರುವುದರಿಂದ ಕೆಲವರು ಮಾರಾಟಕ್ಕೆ ಮುಂದಾಗಿದ್ದಾರೆ.

Advertisements

ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಭತ್ತಕ್ಕೆ ಸರಿಯಾದ ದರ ದೊರಕದ ಹಿನ್ನೆಲೆಯಲ್ಲಿ ಅಲ್ಲಿನ ರೈತರು ರಾಯಚೂರಿಗೆ ಆಗಮಿಸಿ ಭತ್ತ ಮಾರಾಟ ಮಾಡುವುದು ಕಳೆದ ಹಲವು ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಈ ಬಾರಿಯಂತೂ ಇಲ್ಲಿ ಇಳುವರಿ ಕುಸಿದಿರುವ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳ ರೈತರು ತಂದಿರುವ ಭತ್ತ ನಿಂತಲ್ಲೇ ಖರೀದಿಯಾಗಿದ್ದು, ಭರಪೂರ ದುಡ್ಡು ದೊರೆತಿದೆ.

ಈ ಸುದ್ದಿ ಓದಿದ್ದೀರಾ? ಮಹಾಧರಣಿ | ದೇಶದ ಜನರ ಅನಾರೋಗ್ಯದಲ್ಲೂ ಮೋದಿ ಸರ್ಕಾರ ಲೂಟಿ ಮಾಡಿದೆ: ರವಿ ಪುಣಚ

ಕಳೆದ ವರ್ಷ ನವೆಂಬರ್‌ನಲ್ಲಿ ಸೋನಾ ಮಸೂರಿ ಹಾಗೂ ರಾಜಹಂಸ ಭತ್ತಕ್ಕೆ ಕ್ವಿಂಟಾಲ್‌ಗೆ ₹1,750 ದರವಿದ್ದರೆ, ಈ ಬಾರಿ ಪ್ರತಿ 75 ಕೆಜಿ ಭತ್ತಕ್ಕೆ ₹1,880 ರಿಂದ ₹2,100ರಷ್ಟು ದರವಿದೆ. ಸಿಂಧನೂರು ಭಾಗದಲ್ಲಿ ಕಳೆದ ವರ್ಷ ಆರ್‌ಎನ್‌ಆರ್‌ ಕ್ವಿಂಟಾಲ್‌ ಭತ್ತಕ್ಕೆ ₹1,800 ಇತ್ತು. ಈ ಬಾರಿ 75 ಕೆಜಿಗೆ ₹2,500ರವರೆಗೂ ಮಾರಾಟವಾಗುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X