ನಿರ್ಮಾಣ ಮಾಡಿ ಇನ್ನೂ ಆರು ತಿಂಗಳೂ ಕಳೆದಿಲ್ಲ. ಆಗಲೇ ಬಿರುಕು ಬಿಟ್ಟಿದ್ದು, ಅಪಘಾತಗಳಿಗೆ ಆಹ್ವಾನಿಸುತ್ತಿರುವ ದುಸ್ಥಿಗೆ ರಾಯಚೂರಿನ ಆಶಾಪುರ ರಸ್ತೆ ಬಂದುನಿಂದಿದೆ.
ರಾಯಚೂರು ಹೊರವಲಯದಿಂದ ಆಶಾಪುರ ಗ್ರಾಮಕ್ಕೆ ತೆರಳಲು ಚುನಾವಣೆಗೂ ಮುನ್ನವಷ್ಟೇ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಚುನಾವಣಾ ಸಂದರ್ಭದಲ್ಲಿ ರಸ್ತೆಯ ಕಾಮಗಾರಿ ಮುಗಿದಿತ್ತು. ಇದೀಗ, ರಸ್ತೆ ಉದ್ದಕ್ಕೂ ಬಿರುಕು ಬಿಟ್ಟಿದೆ.
1.58 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಕಿ.ಮೀ ಉತ್ತರ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದೇ ರಸ್ತೆಯನ್ನು ಆಶಾಪುರ ಸೇರಿದಂತೆ ಸುಮಾರು 10 ಗ್ರಾಮಗಳ ಜನರು ಬಳಸುತ್ತಾರೆ. ಈ ಗ್ರಾಮಗಳಿಂದ ರಾಯಚೂರಿಗೆ ಬರಲು ಇದೇ ರಸ್ತೆಯನ್ನು ಬಳಸುತ್ತಾರೆ.
ಆದರೆ, ಈಗ ರಸ್ತೆ ಬಾಯಿ ತೆರೆದುಕೊಂಡಂತೆ ಕಾಣಿಸುತ್ತಿದೆ. ಬೈಕ್ ಸವರಾರು ಕೊಂಚ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎಂಬಂತೆ ರಸ್ತೆ ಬಾಸವಾಗುತ್ತಿದೆ.
ರಸ್ತೆ ಬಿರುಕು ಬಿಟ್ಟಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಅಪಘಾತವಾಗಿ ಏನಾದರು ಗಂಭೀರ ಸಮಸ್ಯೆಯಾದರೆ ಯಾರು ಹೊಣೆ ಎಂದು ಆಶಾಪುರ ಗ್ರಾಮಸ್ಥರು ಕಿರಿಕಾರಿದ್ದಾರೆ.