ಪ್ರಯಾಣಿಸುವ ಸಂದರ್ಭದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಮೇಲಿನಿಂದ ನೀರು ಸೋರುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಾಲ್ಡ್‌ವೈನರ್ ಎಂಬ ಖಾತೆದಾರರು ಟ್ವಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ದೃಶ್ಯದಲ್ಲಿರುವಂತೆ ವಿಮಾನದಲ್ಲಿ ಪ್ರಯಾಣಿಕರು ನಿದ್ರಿಸುತ್ತಿರುವಾಗ ವಸ್ತುಗಳನ್ನು ಇಡುವ ಲಗೇಜ್ ಸ್ಥಳದಿಂದ ಪ್ರಯಾಣಿಕರ ಸೀಟಿಗೆ ನೀರು ಸೋರುತ್ತಿತ್ತು.
“ನಮ್ಮೊಂದಿಗೆ ಪ್ರಯಾಣಿಸಿ ಎನ್ನುವ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದರೆ ಮುಳುಗುವ ಅನುಭವವಾಗುವುದು ಖಂಡಿತಾ” ಎಂಬ ಶೀರ್ಷಿಕೆ ನೀಡಿ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
ದೃಶ್ಯ ಯಾವ ವಿಮಾನದ್ದು ಎಂಬುದು ಖಚಿತವಾಗದಿದ್ದರೂ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಬಳಕೆದಾರರು ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಯಾವ ಕಾರಣಕ್ಕಾಗಿ ನೀರು ಸೋರಿಕೆಯಾಗಿದೆ ಎಂಬುದು ಸರಿಯಾಗಿ ತಿಳಿದಿಲ್ಲ. ಟ್ವಿಟರ್‌ನಲ್ಲಿ ಈ ಪೋಸ್ಟ್‌ಗೆ ಕೆಲವರು ತಾಂತ್ರಿಕ ದೋಷ ಎಂದು ಪ್ರತಿಕ್ರಿಯೆ ನೀಡಿದರೆ ಮತ್ತು ಹಲವರು ಏರ್ ಇಂಡಿಯಾದ ಕಳಪೆ ಸೇವೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರೊ. ಅರ್ನಾಲ್ಡ್ ಡಿಕ್ಸ್ : ಉತ್ತರಾಖಂಡ ಸುರಂಗ ರಕ್ಷಣಾ ಕಾರ್ಯಾಚರಣೆಯ ಹಿಂದಿನ ಶಕ್ತಿ
“ಇದು ಏರ್ ಇಂಡಿಯಾದ ಬೇಜವಾಬ್ದಾರಿಯಾಗಿದೆ. ನೀರು ಸೋರಿಕೆಯಿಂದ ವಿಮಾನದಲ್ಲಿ ತಾಂತ್ರಿಕ ದೋಷವುಂಟಾಗಿ ತೊಂದರೆಯುಂಟಾಗುವ ಸಾಧ್ಯತೆಯಿದೆ. ಅಪಾಯದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ” ಎಂದು ಬಳಕೆದಾರರೊಬ್ಬರು ಉತ್ತರ ನೀಡಿದ್ದಾರೆ.
“ಇದು ನೀರು, ಇಂಧನವಲ್ಲ, ಹಾನಿಕಾರಕ ದ್ರವವಲ್ಲ. ಓವರ್ ಹೆಡ್ ಟ್ಯಾಂಕ್ ಅಂತೂ ಅಲ್ಲವೇ ಅಲ್ಲ” ಎಂದು ಮತ್ತೊಬ್ಬ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಘಟನೆ ಬಗ್ಗೆ ಏರ್‌ಇಂಡಿಯಾ ಸಮಸ್ಥೆ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Air India ….
fly with us – it's not a trip …
it's an immersive experience pic.twitter.com/cEVEoX0mmQ— JΛYΣƧΉ (@baldwhiner) November 29, 2023