ಚಳಗಾಲದ ಅಧಿವೇಶನ ಸಂದರ್ಭದಲ್ಲಿ ಮಾತ್ರವೇ ಕಾರ್ಯನಿರ್ವಹಿಸುವ, ಜನರು ಕಾಣಸಿಗುವ ಬೆಳಗಾವಿಯ ಸುವರ್ಣಸೌಧಕ್ಕೆ ಪ್ರತಿ ಶನಿವಾರ ಮತ್ತು ಭಾನುವಾರ ಬೆಳಕಿನ ರಂಗು ನೀಡಲು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಮುಂದಾಗಿದ್ದಾರೆ.
ಡಿಸೆಂಬರ್ 4ರಿಂದ ಸುವರ್ಣಸೌಧದಲ್ಲಿ ರಾಜ್ಯ ವಿಧಾನಸಭಾ ಅಧಿವೇಶನ ಆರಂಭವಾಗಲಿದೆ. ಪ್ರತಿ ವರ್ಷವೂ ಚಳಿಗಾಲದ ಅಧಿವೇಶನ ಹೊರತು ಪಡಿಸಿದರೆ, ಸುವರ್ಣಸೌಧದ ಬಳಕೆಯೇ ಆಗುತ್ತಿಲ್ಲ. ಹೀಗಾಗಿ, ಅದನ್ನು ಪ್ರವಾಸಿತಾಣದಂತೆ ಕಾಣಿಸಲು ಸ್ಪೀಕರ್ ಮುಂದಾಗಿದೆ.
ಈ ಹಿಂದೆ ವರ್ಷದಲ್ಲೊಮ್ಮೆ ನಡೆಯುವ ಅಧಿವೇಶನ ಸಂದರ್ಭದಲ್ಲಿ ಹತ್ತದಿನೈದು ದಿನ ಮಾತ್ರ ರಾತ್ರಿಯ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಇದೀಗ, ಅಧಿವೇಶನ ನಡೆಯುವ ದಿನಗಳು ಮಾತ್ರವಲ್ಲದೆ, ಪ್ರತಿ ಶನಿವಾರ ಮತ್ತು ಭಾನುವಾರ ಹಾಗೂ ರಾಷ್ಟ್ರೀಯ ದಿನಾಚರಣೆಗಳ ದಿನದಂದೂ ಬಣ್ಣಬಣ್ಣದ ವಿನ್ಯಾಸದ ಬೆಳಕಿನ ವ್ಯವಸ್ಥೆ ಮಾಡಲು ರೂಪುರೇಷೆ ತಯಾರಿಸಲಾಗಿದೆ.
ಸುವರ್ಣಸೌಧದಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ಗುತ್ತಿಗೆದಾರರಿಗೆ 10 ವರ್ಷಗಳ ಗುತ್ತಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.