ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ವು ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಹಿನ್ನೆಲೆಯಲ್ಲಿ ಕಾಣುವಂತೆ ‘ಸೆಲ್ಫಿ ಪಾಯಿಂಟ್’ ರಚಿಸಲು ದೇಶದಲ್ಲಿಯ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಸೂಚನೆ ನೀಡಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
ನರೇಂದ್ರ ಮೋದಿಯವರ ಚಿತ್ರಗಳ ಹಿನ್ನೆಲೆಯಲ್ಲಿ ‘ಸೆಲ್ಫಿ ಪಾಯಿಂಟ್’ ಅಥವಾ ತಾಣಗಳನ್ನು ಸ್ಥಾಪಿಸುವಂತೆ ದೇಶದಲ್ಲಿಯ ಎಲ್ಲ ವಿವಿ ಮತ್ತು ಕಾಲೇಜುಗಳಿಗೆ ಸೂಚನೆ ನೀಡಿರುವುದಾಗಿ telegraphindia.com ವರದಿ ಮಾಡಿತ್ತು. ಈ ವರದಿಯು ದೇಶದಲ್ಲಿ ಸಂಚಲನ ಸೃಷ್ಟಿಸಿದ್ದು, ಯುಜಿಸಿಯ ಆದೇಶಕ್ಕೆ ವಿಪಕ್ಷಗಳಿ ಟೀಕಾ ಪ್ರಹಾರ ನಡೆಸಿದೆ.
ಟೆಲಿಗ್ರಾಫ್‌ನ ವರದಿಯನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಸೆಲ್ಫಿ ಗೀಳಿನ ಪ್ರಧಾನಿ ಅವರು ಲೋಕಸಭೆ ಚುನಾವಣೆಯ ಸಮಯದಲ್ಲಿ ಎಷ್ಟು ಅಸುರಕ್ಷಿತರಾಗಿದ್ದಾರೆಂದರೆ ಅವರು ತಮ್ಮ ಅಬ್ಬರದ ಇಮೇಜ್ ಅನ್ನು ಉಳಿಸಲು ಯಾವ ಕಲ್ಲನ್ನು ಕೂಡ ಬಿಡುತ್ತಿಲ್ಲ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ತಿಳಿಸಿದ್ದಾರೆ.
Our selfie-obsessed and self-obsessed PM is so insecure in the run up to Lok Sabha polls that he’s leaving no stone unturned to save his flailing image.
First, it was Army being asked to set up selfie points.
Then, he asked IAS officers and other…
— Jairam Ramesh (@Jairam_Ramesh) December 2, 2023
‘ಮೊದಲು ‘ಸೆಲ್ಫಿ ಪಾಯಿಂಟ್’ಗಳನ್ನು ಸ್ಥಾಪಿಸುವಂತೆ ಸೇನೆಗೆ ತಿಳಿಲಾಯಿತು. ನಂತರ, ಅವರು ಐಎಎಸ್ ಅಧಿಕಾರಿಗಳು ಮತ್ತು ಇತರ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ‘ರಥಯಾತ್ರೆ’ ಕೈಗೊಳ್ಳುವಂತೆ ಹೇಳಿದರು. ಇದೀಗ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ‘ಸೆಲ್ಫಿ ಪಾಯಿಂಟ್’ ಸ್ಥಾಪಿಸುವಂತೆ ಯುಜಿಸಿಗೆ ಸೂಚಿಸಿದ್ದಾರೆ. ಚಂದ್ರಯಾನ-3ರ ಲ್ಯಾಂಡಿಂಗ್ ವೇಳೆ ನೇರಪ್ರಸಾರ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಲ್ಯಾಂಡಿಂಗ್ ಅನ್ನೇ ಹೈಜಾಕ್ ಮಾಡಿದರು. ಅದಕ್ಕೂ ಮೊದಲು ಕೋವಿಡ್ ಲಸಿಕೆ ಪ್ರಮಾಣಪತ್ರಗಳಿಗೆ ತಮ್ಮ ಫೋಟೋವನ್ನು ಅಂಟಿಸಿದರು. ಇವೆಲ್ಲವನ್ನು ನೋಡುವಾಗ ಮನುಷ್ಯನ ಪ್ರಚಂಡ ಅಭದ್ರತೆ ಮತ್ತು ಸಿಕೋಫಾನ್ಸಿ ಎಂಬ ಅನಾರೋಗ್ಯದ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಕಳೆದ 10 ವರ್ಷಗಳಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿಗಳನ್ನೂ ಮೀರಿಸಿರುವಂತಹ ಈ ನಡೆಯು ಅಸಹ್ಯಕರ ಸ್ವಯಂ ಪ್ರಚಾರ. ಇದರಿಂದಾಗಿ ದೇಶದ ಜನ ಬೇಸತ್ತಿದ್ದಾರೆ. ಶೀಘ್ರವೇ ಸೂಕ್ತ ಉತ್ತರ ನೀಡಲಿದ್ದಾರೆ’ ಎಂದು ಜೈರಾಮ್ ರಮೇಶ್ ಆಕ್ರೋಶ ಹೊರಹಾಕಿದ್ದಾರೆ.
ಇದನ್ನು ಓದಿದ್ದೀರಾ? ಸುರಂಗ ಘಟನೆ | ಕಾರ್ಮಿಕನ ಕುಟುಂಬದ ದುಸ್ಥಿತಿ ಬಗ್ಗೆ ವರದಿ ಮಾಡಿದ ಪತ್ರಕರ್ತರ ವಿರುದ್ಧ ಎಫ್ಐಆರ್!
ಈ ಬಗ್ಗೆ ಪ್ರಮುಖ ಶಿಕ್ಷಣ ಸಂಸ್ಥೆಯೊಂದರ ಅಧ್ಯಾಪಕರೋರ್ವರು ಮಾತನಾಡಿದ್ದು, ‘ಕೇಂದ್ರ ಸರಕಾರವು ಪ್ರತಿಯೊಂದೂ ಸಾಮಾನ್ಯ ಸಾಧನೆಯನ್ನು ಅದ್ಭುತವೆಂದು ಬಿಂಬಿಸುತ್ತಿದೆ ಮತ್ತು ಅದರ ಹೆಗ್ಗಳಿಕೆಯನ್ನು ಪ್ರಧಾನಿಯವರಿಗೆ ಸಲ್ಲಿಸುತ್ತಿದೆ. ಈಗ ನಡೆಯುತ್ತಿರುವುದು ಆರಾಧನಾ ವ್ಯಕ್ತಿತ್ವವನ್ನು ನಿರ್ಮಿಸುವ ಪೂರ್ಣ ಪ್ರಮಾಣದ ಪ್ರಚಾರ. ಇದಕ್ಕಾಗಿ ಸರಕಾರವು ಈ ಚಟುವಟಿಕೆಗಳಿಗೆ ಸಂಬಂಧವೇ ಇಲ್ಲದ ಸಾರ್ವಜನಿಕ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಸರಕಾರ ಅಥವಾ ಯುಜಿಸಿ ಇಂತಹ ಪ್ರಚಾರವನ್ನು ಉತ್ತೇಜಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ’ ಎಂದು ತಿಳಿಸಿದ್ದಾರೆ.
Creating memories at India Gate!
School kids capturing unforgettable moments at the selfie point of the Department of Fisheries.
Visit and snap your memorable selfie today! #IndiaGate #Memories #SelfiePoint #PMMSY pic.twitter.com/hYjlFfhgAs
— Department of Fisheries, Min of FAH&D (@FisheriesGoI) December 2, 2023
ಯುಜಿಸಿ ಆದೇಶದಲ್ಲಿ ಏನಿದೆ?
ಯುಜಿಸಿ ತನ್ನ ಪತ್ರದಲ್ಲಿ ಸೆಲ್ಪಿ ತಾಣಗಳನ್ನು ಸೃಷ್ಟಿಸಿ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳಲು ಮತ್ತು ಅವುಗಳನ್ನು ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಸಂದರ್ಶಕರನ್ನು ಉತ್ತೇಜಿಸುವಂತೆ ಆಗ್ರಹಿಸಿದೆ.
ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಅವರು ಈ ಕುರಿತು ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಪತ್ರ ಕಳುಹಿಸಿದ್ದು, ‘ವಿವಿಧ ಕ್ಷೇತ್ರಗಳಲ್ಲಿ ಯುವಕರ ಶಕ್ತಿ ಮತ್ತು ಉತ್ಸಾಹವನ್ನು ಬಳಸಿಕೊಳ್ಳಲು ಒಂದು ಅನನ್ಯ ಅವಕಾಶ’ ಎಂದು ಹೇಳಿದ್ದಾರೆ.
‘ನಿಮ್ಮ ಸಂಸ್ಥೆಯೊಳಗೆ ಸೆಲ್ಫಿ ಪಾಯಿಂಟ್ ಸ್ಥಾಪಿಸುವ ಮೂಲಕ ನಮ್ಮ ದೇಶವು ಮಾಡಿದ ಅದ್ಭುತ ಪ್ರಗತಿಯನ್ನು ನಾವು ಆಚರಿಸೋಣ ಮತ್ತು ಪ್ರಸಾರ ಮಾಡೋಣ. ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳ ಬಗ್ಗೆ ವಿಶೇಷವಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ಹೊಸ ಉಪಕ್ರಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದು ಸೆಲ್ಫಿ ಪಾಯಿಂಟ್‌ನ ಉದ್ದೇಶವಾಗಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಪ್ರತಿ ಸೆಲ್ಫಿ ಪಾಯಿಂಟ್‌ನ್ನು ಕ್ಯಾಂಪಸ್‌ನ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಬೇಕು ಮತ್ತು 3ಡಿ ಲೇಔಟ್ ಹೊಂದಿರಬೇಕು. ಇದು ಶಿಕ್ಷಣದ ಅಂತಾರಾಷ್ಟ್ರೀಕರಣ, ವೈವಿಧ್ಯತೆಯಲ್ಲಿ ಏಕತೆ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್, ಬಹುಭಾಷಾತೆಯಂತಹ ನಿರ್ದಿಷ್ಟ ವಿಷಯಕ್ಕೆ ಅನುಗುಣವಾಗಿ ರೂಪಿಸಿ ಎಂದು ಯುಜಿಸಿಯ ನಿರ್ದೇಶನ ನೀಡಿದೆ.