ಬೆಂಗಳೂರಿನಲ್ಲಿ ಶತಮಾನದಿಂದಿರುವ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು

Date:

Advertisements
ಶತಮಾನದಿಂದಲೂ ಇರುವ ಶಿಕ್ಷಣ ಸಂಸ್ಥೆಗಳನ್ನು ಬೆಂಗಳೂರು ಕಾಪಾಡಿಕೊಂಡು ಬಂದಿದೆ. ದೇಶದಲ್ಲೇ ಪ್ರಖ್ಯಾತಿ ಪಡೆದ ಕೆಲವು ಹಳೆಯ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ರಾಜಧಾನಿ ನೆಲೆಯಾಗಿದೆ. ಸರ್ಕಾರದ ಅಧೀನದಲ್ಲಿರುವ ಈ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಒದಗಿಸುತ್ತಿವೆ ಅವು ಯಾವುವು ಎಂಬುದಕ್ಕೆ ವಿವರ ಇಲ್ಲಿದೆ.

ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಕೊನೆಗೆ ಗಾರ್ಬೆಜ್ ಸಿಟಿ ಎಂತಲೂ ಹೆಸರುವಾಸಿಯಾಗಿರುವ ಬೆಂಗಳೂರು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಅಧಿಕ ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ದಿನ ಕಳೆದಂತೆ ಹೊಸ ಖಾಸಗಿ ಶಾಲೆಗಳು, ಶಿಶವಿಹಾರಗಳು ಗಲ್ಲಿಗಲ್ಲಿಗೊಂದರಂತೆ ಕಾಣ ಸಿಗುವುದರಲ್ಲಿ ಕಿಂಚಿತ್ತು ಸಂಶಯವಿಲ್ಲ. ಇವುಗಳಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ಐತಿಹಾಸಿಕ ಮತ್ತು ಪರಂಪರೆಯ ಮೌಲ್ಯವನ್ನು ಸಹ ಹೊಂದಿವೆ. ಅಂತಹ ಅನೇಕ ಸಂಸ್ಥೆಗಳು ಬೆಳೆಯಲು ಅಂದಿನ ಮೈಸೂರು ಒಡೆಯರ್ ಮನೆತನ ಮತ್ತು ಸ್ವತಂತ್ರ ಭಾರತದಲ್ಲಿ ಸರ್ಕಾರಗಳ ಸಹಕಾರವಿದೆ.

ಬೆಂಗಳೂರು ಸೆಂಟ್ರಲ್ ಕಾಲೇಜು

ಸರ್ಕಾರಿ ಕಾಲೇಜುಗಳಲ್ಲಿ ಸೆಂಟ್ರಲ್ ವಿಶ್ವವಿದ್ಯಾಲಯ ಮತ್ತು ಕಾಲೇಜು ಸ್ವತಂತ್ರ ಪೂರ್ವದಿಂದಲೂ ವಿಶಿಷ್ಟ ಸ್ಥಾನಮಾನ ಹೊಂದಿದೆ. 1858ರಲ್ಲಿ ಪ್ರೌಢಶಾಲೆಯಾಗಿ ಆರಂಭವಾಗಿದ್ದು, 1875ರಲ್ಲಿ ಸೆಂಟ್ರಲ್ ಕಾಲೇಜು ಆಗಿ ಮುಖ್ಯ ಸ್ಥಾನ ಗಳಿಸಿತು.

Advertisements

160 ವರ್ಷಗಳಷ್ಟು ಹಳೆಯದಾದ ಬೆಂಗಳೂರು ಸೆಂಟ್ರಲ್ ಕಾಲೇಜನ್ನು 1858ರಲ್ಲಿ, ಬ್ರಿಟಿಷ್ ಸರ್ಕಾರವು ಸ್ಥಾಪಿಸಿತು. ಸೆಂಟ್ರಲ್ ಕಾಲೇಜು ದೇಶದಲ್ಲೇ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಇದು ಒಂದು ಎನ್ನಲಾಗುತ್ತದೆ. ಬೆಂಗಳೂರು ಸಿಟಿ ಯೂನಿವರ್ಸಿಟಿಯನ್ನು ಈಗ ₹155 ಕೋಟಿ ವೆಚ್ಚದಲ್ಲಿ ಕೆಂಪು ಪರಂಪರೆಯ ಕಟ್ಟಡವನ್ನಾಗಿ ನವೀಕರಣಗೊಳಿಸಲಾಗಿದೆ.

ಬೆಂಗಳೂರು ಸೆಂಟ್ರಲ್ ಕಾಲೇಜು ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿತ್ತು. ಮದ್ರಾಸ್ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿಗೆ ಸೇರಿತ್ತು. 1964ರಲ್ಲಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯವಾಗಿ ಸ್ಥಾಪನೆಯಾಯಿತು.

bcu
ಬೆಂಗಳೂರು ಸೆಂಟ್ರಲ್ ಕಾಲೇಜು

ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಜೀವ ವಿಜ್ಞಾನ ವಿಭಾಗಗಳು 100 ವರ್ಷಗಳಿಂದ ಈ ಕ್ಯಾಂಪಸ್‌ನಲ್ಲಿ ಉಳಿದುಕೊಂಡಿವೆ. ರಸಾಯನಶಾಸ್ತ್ರ ವಿಭಾಗವು ಒಂಬತ್ತು ವಿಭಿನ್ನ ಪ್ರಯೋಗಾಲಯಗಳನ್ನು ಹೊಂದಿದೆ. ಕ್ಯಾಂಪಸ್‌ನಲ್ಲಿ 100 ವರ್ಷಗಳಷ್ಟು ಹಳೆಯದಾದ ಗ್ರಂಥಾಲಯವೂ ಇದೆ. ಈಗ ಇದು ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಸುದ್ದಿ ಓದಿದ್ದೀರಾ?: ಸಿಇಟಿ, ಸಿಯುಇಟಿ ಒಂದೇ ದಿನ ನಿಗದಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

ನಗರದ ಕೆ.ಆರ್‌ ವೃತ್ತದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ಯುವಿಸಿಇ) 1917ರಲ್ಲಿ ಪ್ರಾರಂಭವಾಯಿತು. 2023ಕ್ಕೆ 105 ವರ್ಷಗಳನ್ನು ಪೂರೈಸಿದೆ. ಸುಮಾರು 12.28 ಎಕರೆ ಜಾಗದಲ್ಲಿ ಹರಡಿಕೊಂಡಿದೆ. ಹೈಕೋರ್ಟ್ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜನ್ನು ಹೋಲುವಂತೆ ಕೆಂಪು ಬಣ್ಣವನ್ನು ಇತ್ತೀಚೆಗೆ ಬಳೆಯಲಾಗಿದೆ. ಕಳೆದ ವರ್ಷ ಈ ಕಾಲೇಜನ್ನು ‘ಆರ್ಥಿಕ ಸ್ವಾಯತ್ತತೆ’ ಕಾಲೇಜು ಎಂದು ಘೋಷಿಸಲಾಯಿತು. ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಎಂಜಿನಿಯರಿಂಗ್ ಕಾಲೇಜು. ಭಾರತದಲ್ಲೇ ಐದನೇ ಎಂಜಿನಿಯರಿಂಗ್ ಕಾಲೇಜಾಗಿ ಖ್ಯಾತಿ ಪಡೆದಿದೆ.

uvce.JPG1
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

ಎಂಟು ಪದವಿಪೂರ್ವ, 24 ಸ್ನಾತಕೋತ್ತರ ಮತ್ತು ಅನೇಕ ಪಿಎಚ್‌ಡಿ ಕೋರ್ಸುಗಳ ಅಡಿ ಸುಮಾರು 4,100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುತ್ತಾರೆ.

ಜಯಚಾಮರಾಜೇಂದ್ರ ಸರ್ಕಾರಿ ಪಾಲಿಟೆಕ್ನಿಕ್ (ಎಸ್‌ಜೆಪಿ)

ಒಡೆಯರ ಆಳ್ವಿಕೆಯಲ್ಲಿ ಭದ್ರಾವತಿ ಸ್ಟೀಲ್ ಕಂಪನಿ ನಷ್ಟದಲ್ಲಿ ಮುಳುಗಿತ್ತು. ಆ ಸಮಯದಲ್ಲಿ ಪುನಶ್ಚೇತನದ ಹೊಣೆಯನ್ನು ಸರ್. ಎಂ ವಿಶ್ವೇಶ್ವರಯ್ಯನವರಿಗೆ ಒಪ್ಪಿಸಲಾಗಿತ್ತು. ಕಂಪನಿಯು ತನ್ನ ನಷ್ಟದಿಂದ ಚೇತರಿಸಿಕೊಂಡು ಲಾಭವನ್ನು ಗಳಿಸಿತು.

sjp.JPG1
ಎಸ್‌ಜೆಪಿ

ಅದೇ ಸಂಭ್ರಮಕ್ಕೆ ವಿಶ್ವಶ್ವರಯ್ಯ ಅವರಿಗೆ ರಾಜರು ₹2 ಲಕ್ಷ ಗೌರವಧನ ನೀಡಿದ್ದರು. ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲು ನಿರಾಕರಿಸಿ, ಅದೇ ಮೊತ್ತವನ್ನು ಔದ್ಯೋಗಿಕ ಸಂಸ್ಥೆಯನ್ನು ಸ್ಥಾಪಿಸುವ ಕಡೆಗೆ ತಿರುಗಿಸಿದರು. ನಂತರ ಅದನ್ನು ಶ್ರೀ ಜಯಚಾಮರಾಜೇಂದ್ರ ಸರ್ಕಾರಿ ಪಾಲಿಟೆಕ್ನಿಕ್ (ಎಸ್‌ಜೆಪಿ) ಆಗಿ ಪರಿವರ್ತಿಸಲಾಯಿತು.

ಆಗ್ನೇಯ ಏಷ್ಯಾದ ಅತಿದೊಡ್ಡ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಂದಾದ ಎಸ್ ಜಯಚಾಮರಾಜೇಂದ್ರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈಗ 16 ತಾಂತ್ರಿಕ ಕೋರ್ಸ್‌ಗಳಿವೆ. ಒಟ್ಟು 2,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿನ ಫನುಭವಿಗಳಾಗಿದ್ದಾರೆ. 

ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್

1963ರಲ್ಲಿ ಮಹಿಳೆಯರು ಸಹ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ, ತಾಂತ್ರಿಕ ಕೋರ್ಸ್‌ಗೆ ಸಂಬಂಧ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿಗಾಗಿ ಒಡೆಯರ್ ರಾಜವಂಶದ ರಾಣಿ ತ್ರಿಪುರ ಸುಂದರಿ ಅಮ್ಮಣ್ಣಿ ಅವರು ಭೂಮಿಯನ್ನು ಒದಗಿಸಿದರು ಮತ್ತು ಕಾಲೇಜನ್ನು ಉದ್ಘಾಟಿಸಿದರು. ಆರಂಭದಲ್ಲಿ ನಾಲ್ಕು ಕೋರ್ಸ್‌ಗಳಿಗೆ 30-60 ವಿದ್ಯಾರ್ಥಿಗಳು ಮಾತ್ರ ದಾಖಲಾಗುತ್ತಿದ್ದರು. ಇದೀಗ ಏಳು ಕೋರ್ಸ್‌ ತೆರೆಯಲಾಗಿದೆ. 1,160 ವಿದ್ಯಾರ್ಥಿಗಳು ತಾಂತ್ರಿಕ ವಿಭಾಗದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ದೇಶದಲ್ಲಿ ಮಾತ್ರವಲ್ಲದೆ, ಏಷ್ಯಾದಲ್ಲೇ ಮೊದಲನೆಯದು.

sjp

ಶ್ರೀ ಕೃಷ್ಣರಾಜೇಂದ್ರ ರಜತ ಮಹೋತ್ಸವ ತಾಂತ್ರಿಕ ಸಂಸ್ಥೆ

1938 ರಲ್ಲಿ ಸರ್ಕಾರಿ ಶ್ರೀ ಕೃಷ್ಣ ರಾಜೇಂದ್ರ ರಜತ ಮಹೋತ್ಸವ ತಾಂತ್ರಿಕ ಸಂಸ್ಥೆಯನ್ನು (ಎಸ್‌ಕೆಆರ್‍‌ಎಸ್‌ಜೆಟಐ) ಸ್ಥಾಪಿಸಲಾಯಿತು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ 25 ವರ್ಷಗಳ ಆಳ್ವಿಕೆಯನ್ನು ಪೂರ್ಣಗೊಳಿಸಿದ ಗೌರವಾರ್ಥವಾಗಿ, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರು ಈ ಸಂಸ್ಥೆಯ ಸ್ಥಾಪನೆಗೆ ಕಾರಣರಾದರು.

bangalore 1
ಶ್ರೀ ಕೃಷ್ಣ ರಾಜೇಂದ್ರ ರಜತ ಮಹೋತ್ಸವ ತಾಂತ್ರಿಕ ಸಂಸ್ಥೆ

ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಜವಳಿ ತಂತ್ರಜ್ಞಾನದ ಬಗ್ಗೆ ಪ್ರಾರಂಭವಾದ ಮೊದಲ ಕೋರ್ಸ್. ನಂತರ ರೇಷ್ಮೆ ತಂತ್ರಜ್ಞಾನ ವಿಭಾಗ ಆರಂಭಿಸಿತು. ಸದ್ಯ ಸಂಸ್ಥೆಯಲ್ಲಿ ಸಿವಿಲ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಸೇರಿದಂತೆ ವಿವಿಧ ಶಾಖೆಗಳಲ್ಲಿ ಸುಮಾರು 850 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ತರಗತಿ ಕೊಠಡಿಗಳು ದೊಡ್ಡದಾಗಿದೆ ಮತ್ತು ಕಾರಿಡಾರ್‌ಗಳಲ್ಲಿ ಸಿಮೆಂಟ್ ಚೀಲಗಳು ಮತ್ತು ಇತರ ನಿರ್ಮಾಣ ಸಾಮಗ್ರಿಗಳು ಬಿದ್ದಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

Download Eedina App Android / iOS

X